Jio vs Airtel cheapest one month validity and 1 5gb daily data recharge plans
Airtel vs Jio Recharge Plans: ದೇಶದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಗಳಾಗಿರುವ ರಿಲಯನ್ಸ್ ಜಿಯೋ (Reliance Jio) ಮತ್ತು ಭಾರ್ತಿ ಏರ್‌ಟೆಲ್ (Bharti Airtel) ಪ್ರಸ್ತುತ ಮಾರುಕಟ್ಟೆಯಲ್ಲಿ ಎರಡು ದೊಡ್ಡ ಕಂಪನಿಗಳಾಗಿದ್ದು ತಮ್ಮ ಗ್ರಾಹಕರಿಗೆ ವಿವಿಧ ಬೆಲೆಗಳಲ್ಲಿ ವ್ಯಾಪಕ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತವೆ. ಹೆಚ್ಚಿನ ಬಳಕೆದಾರರು ಕಡಿಮೆ ವೆಚ್ಚದಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುವ ಕೈಗೆಟುಕುವ ಯೋಜನೆಗಳನ್ನು ಹುಡುಕುತ್ತಿದ್ದಾರೆ Jio ಮತ್ತು Airtel ಕಂಪನಿಗಳಿಂದ ಸುಮಾರು 500 ರೂಗಳಿಗಿಂತ ಕಡಿಮೆ ಬೆಲೆಯ ಯೋಜನೆಗಳನ್ನು ಹೋಲಿಸಿ ಯಾವುದು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ತಿಳಿಯಬಹುದು.
ಈ ಪ್ಲಾನ್ ಪೂರ್ತಿ 28 ದಿನಗಳ ಮಾನ್ಯತೆ ಹೊಂದಿರುವ ಈ ಯೋಜನೆಯು ಉತ್ತಮ ಮನರಂಜನೆ ಮತ್ತು SonyLIV, ZEE5, Discovery+, Sun NXT, & FanCode ಅನ್ನು ನೀಡುತ್ತದೆ. ಇದು ದಿನಕ್ಕೆ 2GB ಡೇಟಾ ಮತ್ತು 100 SMS ಸಂದೇಶಗಳನ್ನು ಸಹ ನೀಡುತ್ತದೆ. ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯ್ಸ್ ಕರೆಗಳ ಜೊತೆಗೆ ಇದು JioCelebratin ಕೊಡುಗೆ ಮತ್ತು JioCloud ಸೇವೆಗೆ ಉಚಿತ ಪ್ರವೇಶವನ್ನು ಸಹ ನೀಡುತ್ತದೆ.
ಈ ರಿಲಯನ್ಸ್ ಜಿಯೋ ಯೋಜನೆಯು ದಿನಕ್ಕೆ 2.5GB ಡೇಟಾ ಮತ್ತು ದಿನಕ್ಕೆ 100 SMS ನೀಡುತ್ತದೆ. 28 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯು ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ ಮತ್ತು ಜಿಯೋ ವಾರ್ಷಿಕೋತ್ಸವದ ಆಚರಣೆಯ ಕೊಡುಗೆಯೊಂದಿಗೆ ಬರುತ್ತದೆ. ಇದು 50GB ಕೌಡ್ ಸ್ಟೋರೇಜ್, ಜಿಯೋಹಾಟ್‌ಸ್ಟಾರ್ ಚಂದಾದಾರಿಕೆ, ಜಿಯೋಗೋಲ್ಡ್‌ನಲ್ಲಿ 2% ರಿಯಾಯಿತಿ ಮತ್ತು ದೇಶೀಯ ವಿಮಾನಗಳಲ್ಲಿ 2,220 ರೂ.ಗಳ ರಿಯಾಯಿತಿಯನ್ನು ಸಹ ಒಳಗೊಂಡಿದೆ.
ಏರ್‌ಟೆಲ್‌ನ ಈ ಯೋಜನೆಯು ಗ್ರಾಹಕರಿಗೆ ಪ್ರತಿದಿನ 4GB ಡೇಟಾವನ್ನು ನೀಡುತ್ತದೆ ಮತ್ತು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಅರ್ಹ ಚಂದಾದಾರರು ಅನಿಯಮಿತ 5G ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಸಂದೇಶಗಳನ್ನು ಸಹ ಪಡೆಯುತ್ತಾರೆ. ಈ ಯೋಜನೆಯು 28 ದಿನಗಳ JioHotstar ಮೊಬೈಲ್ ಚಂದಾದಾರಿಕೆ ಮತ್ತು Google One ನೊಂದಿಗೆ 30GB ಕೌಡ್ ಸಂಗ್ರಹಣೆಯನ್ನು ಸಹ ಒಳಗೊಂಡಿದೆ.
ಏರ್‌ಟೆಲ್ ಬಳಕೆದಾರರು ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡಿ ಒಂದು ತಿಂಗಳ ಪೂರ್ಣ ಮಾನ್ಯತೆಯನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ ಈ ಯೋಜನೆಯು ದಿನಕ್ಕೆ 2.5GB ಡೇಟಾ ಮತ್ತು 100 SMS ಸಂದೇಶಗಳನ್ನು ನೀಡುತ್ತದೆ. ಬಳಕೆದಾರರು ಅನಿಯಮಿತ ಧ್ವನಿ ಕರೆಗಳ ಪ್ರಯೋಜನವನ್ನು ಸಹ ಪಡೆಯುತ್ತಾರೆ ಮತ್ತು ಅರ್ಹ ಬಳಕೆದಾರರು ಅನಿಯಮಿತ 5G ಡೇಟಾವನ್ನು ಸಹ ಪಡೆಯುತ್ತಾರೆ.