Jio most cheapest Data recharge plans for 2025 new year
Reliance Jio 2025 Plan: ಭಾರತದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಸದ್ದಿಲ್ಲದೆ ಹೊಸ ವರ್ಷಕ್ಕೂ ಮುಂಚಿತವಾಗಿ 2025 ರೂಗಳ ಹೊಸ ಯೋಜನೆಯನ್ನು 200 ದಿನಗಳ ವ್ಯಾಲಿಡಿಟಿಯೊಂದಿಗೆ ಪರಿಚಯಿಸಿದೆ. ಈ ಯೋಜನೆಯನ್ನು ಜಿಯೋ ಲಿಮಿಟೆಡ್ ಸಮಯದವರೆಗೆ ನೀಡುತ್ತಿದ್ದು ಇದರ ರಿಚಾರ್ಜ್ ಕೊನೆ ದಿನ ಯಾವಾಗ ಎನ್ನುವುದರ ಕುರಿತು ಇನ್ನೂ ಯಾವುದೇ ಅಪ್ಡೇಟ್ ನೀಡಿಲ್ಲ. ಆದರೆ ರಿಲಯನ್ಸ್ ಜಿಯೋ ರೂ. 2025 ರಿಚಾರ್ಜ್ ಯೋಜನೆಯ (Reliance Jio 2025 Plan) ಆಫರ್ ಯಾವಾಗ ಬೇಕಾದರೂ ಮುಗಿಯಬಹುದು. ಆದ್ದರಿಂದ ಇಂದೇ ಈ ಜಬರ್ದಸ್ತ್ ಯೋಜನೆಯನ್ನು ರಿಚಾರ್ಜ್ ಮಾಡಿಕೊಂಡು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಿರಿ.
ಸದ್ದಿಲ್ಲದೇ ಬಿಡುಗಡೆಯಾಗಿರುವ ಈ ರಿಲಯನ್ಸ್ ಜಿಯೋ (Reliance Jio 2025 Plan) ರಿಚಾರ್ಜ್ ಯೋಜನೆಯಲ್ಲಿ ಈಗಾಗಲೇ ಮೇಲೆ ತಿಳಿಸಿರುವ ಬರೋಬ್ಬರಿ 200 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಮತ್ತು ಪ್ರತಿದಿನಕ್ಕೆ 2.5GB ಕ್ರಮವಾಗಿ ಒಟ್ಟು 500GB ಡೇಟಾವನ್ನು ಸಹ ನೀಡುತ್ತಿದೆ. ಈ ರಿಲಯನ್ಸ್ ಜಿಯೋ ರೂ. 2025 ರಿಚಾರ್ಜ್ ಯೋಜನೆಯಲ್ಲಿ ದಿನದ ಡೇಟಾ ಅಂದ್ರೆ 2.5GB ಖಾಲಿಯಾದ ನಂತರ ನೀವು ಅನ್ಲಿಮಿಟೆಡ್ ಡೇಟಾ ಬಳಸಬಹುದು ಆದರೆ ಇದರ ಸ್ಪೀಡ್ ಮಾತ್ರ 64Kbps ವೇಗಕ್ಕೆ ಇಳಿಯುತ್ತದೆ.
ಅಲ್ಲದೆ ಇದರಲ್ಲಿ ನಿಮಗೆ ಹೆಚ್ಚುವರಿಯಾಗಿ JioTV, JioCinema ಮತ್ತು JioCloud Subscription ಸಹ ಲಭ್ಯವಿರುತ್ತದೆ. ಈ ಹೊಸ ರಿಲಯನ್ಸ್ ಜಿಯೋ ರೂ. 2025 ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 100 ಉಚಿತ SMS ಸಹ ಪಡೆಯಬಹುದು. ಆದ್ದರಿಂದ ರಿಲಯನ್ಸ್ ಜಿಯೋ ರೂ. 2025 ರಿಚಾರ್ಜ್ ಯೋಜನೆಯ ಆಫರ್ ಯಾವಾಗ ಬೇಕಾದರೂ ಮುಗಿಯಬಹುದು.
ಹೆಚ್ಚುವರಿಯಾಗಿ ಈ ಯೋಜನೆಯನ್ನು ರಿಚಾರ್ಜ್ ಮಾಡುವುದರಿಂದ ಬರೋಬ್ಬರಿ ₹2150 ರೂಗಳ ಕೂಪನ್ ಸಹ ನೀಡುತ್ತಿದೆ. ಈ ಯೋಜನೆಯನ್ನು ಹೊಂದಿದ್ದ ನಂತರ Ajio ಮೂಲಕ ಸುಮಾರು ₹2999 ರೂಗಳ ಪ್ರಾಡಕ್ಟ್ ಖರೀದಿಸುವುದರಿಂದ ಬರೋಬ್ಬರಿ ₹500 ರೂಗಳ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ EaseMyTrip.com ಮೂಲಕ ಟಿಕೆಟ್ ಬುಕ್ ಮಾಡುವುದರಿಂದ ಸುಮಾರು ₹1500 ರೂಗಳ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ Swiggy ಮೂಲಕ ₹499 ರೂಗಳವರೆಗಿನ ಆರ್ಡರ್ ಮಾಡುವುದರಿಂದ ₹150 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು.