Reliance Jio
Jio Family Plan: ಪ್ರಸ್ತುತ ನಿಮ್ಮ ಕುಟುಂಬದಲ್ಲಿ ಎಲ್ಲರೂ ರಿಲಯನ್ಸ್ ಜಿಯೋ ಸಿಮ್ ಕಾರ್ಡ್ ಬಳಕೆದಾರರಾಗಿದ್ದು ಪ್ರತಿ ತಿಂಗಳು ಪ್ರತ್ಯೇಕವಾಗಿ ರೀಚಾರ್ಜ್ ಮಾಡುತ್ತಿದ್ದರೆ ನಿಮಗೆ ಜಿಯೋ ಸೂಪರ್ ಡೂಪರ್ ಆಫರ್ ಪರಿಚಯಿಸಿದೆ. ನಿಮ್ಮ ಸಮಯ ಮತ್ತು ಹಣ ಎರಡನ್ನು ಉಳಿಸುವ ಗುರಿಯೊಂದಿಗೆ ಜಿಯೋ ಕೇವಲ ರೂ. 449 ಒಂದೇ ರಿಚಾರ್ಜ್‌ನಲ್ಲಿ 3 ನಂಬರ್ ಬಳಸುವ ಅವಕಾಶವನ್ನು ನೀಡುತ್ತಿದೆ. ಅಂದರೆ ರೀಚಾರ್ಜ್ ಒಂದು ಆದರೆ ಮೂರೂ ಕನೆಕ್ಷನ್ ಇದರ ಪ್ರಯೋಜನಗಳನ್ನು ಅನುಭವಿಸಬಹುದು. ಪ್ರಸ್ತುತ ಹೆಚ್ಚಿದ ಸುಂಕದ ಬೆಲೆಯೊಂದಿಗೆ ಜನ ರುಸಿಹೋಗಿರುವುದು ನಿಮಗೂ ತಿಳಿದಿರುವ ಕಹಿಸತ್ಯ ಅಂತಹ ಬಳಕೆದಾರರಲ್ಲಿ ನೀವು ಒಬ್ಬರಾಗಿದ್ದಾರೆ ಈ ಅತ್ಯುತ್ತಮ ಯೋಜನೆಯನ್ನು ಆಯ್ಕೆ ಮಾಡುವುದರಿಂದ ಕೊಂಚ ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ.
ಈ ಜಬರ್ದಸ್ತ್ ಪ್ಲಾನ್ ಪ್ರತ್ಯೇಕವಾಗಿ ರಿಲಯನ್ಸ್ ಜಿಯೋ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು ಪ್ರಸ್ತುತ ಜಿಯೋ ನೀಡುತ್ತಿರುವ ಈ 449 ರೂಗಳ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್ ಆಗಿದೆ. ಇದಕ್ಕಾಗಿ ನೀವು ಪ್ರೈಮರಿ ನಂಬರ್ ಜೊತೆಗೆ ಈ ಜಿಯೋ ಪೋಸ್ಟ್‌ಪೇಯ್ಡ್ ಪ್ಲಾನ್ ಅನ್ನು ಆರಿಸಿಕೊಳ್ಳಬೇಕು. ಆದಾಗ್ಯೂ ಈ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್ ಅನ್ನು ಆಯ್ಕೆ ಮಾಡುವ ಮೂಲಕ ತಿಂಗಳಿಗೆ ಕೇವಲ 449 ರೂಗಳನ್ನು ನೀಡಿ ಆಡ್ ಆನ್ ಮೂರು ಸಂಖ್ಯೆಗಳನ್ನು ಸಕ್ರಿಯಗೊಳಿಸಬಹುದು.
ಸಾಮಾನ್ಯ ಪೋಸ್ಟ್‌ಪೇಯ್ಡ್ ಪ್ಲಾನ್ ಮತ್ತು ಈ ಪೋಸ್ಟ್‌ಪೇಯ್ಡ್ ಪ್ಲಾನ್‌ನ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಡೇಟಾ ಮಾತ್ರ. ನೀವು ಈ 5G ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ತೆಗೆದುಕೊಂಡರೆ ನಿಮಗೆ ಅನಿಯಮಿತ ಡೇಟಾ ಸಿಗುತ್ತದೆ. ಆದಾಗ್ಯೂ ಇದರಲ್ಲಿ ಸೀಮಿತ ಡೇಟಾ ಮಾತ್ರ ಲಭ್ಯವಿದೆ.
Also Read: ಏನಿದು ಹೊಸ Arattai ಅಪ್ಲಿಕೇಶನ್? ಇದರ ಬಗ್ಗೆ ಸಂಪೂರ್ಣ ಪ್ರಶ್ನೆ ಮತ್ತು ಉತ್ತರಗಳೇನು ಎಲ್ಲವನ್ನು ತಿಳಿಯಿರಿ!
ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಬಳಕೆದಾರರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವಿದೆ. ಮೊದಲಿಗೆ ಇದರಲ್ಲಿ ಒಂದು ಪ್ರೈಮರಿ ನಂಬರ್ ಮತ್ತೆರಡು ಆಡ್ ಆನ್ ಅಥವಾ ಸಕೆಂಡರಿ ನಂಬರ್ ಎಂದು ಪರಿಗಣಿಸಲಾಗುತ್ತದೆ. ಅಂದ್ರೆ ನೀವು ಪ್ರೈಮರಿ ಸಂಖ್ಯೆಯಲ್ಲಿ ಮಾಡುವ ಪ್ರತಿ ಬದಲಾವಣೆಗಳು ನಿಮ್ಮ ಎರಡು ನಂಬರ್ಗಳ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಮೂರು ಜಿಯೋ ನಂಬರ್ ಪ್ರಿಪೇಯ್ಡ್ ಬಳಸುತ್ತಿದ್ದರೆ ಮೊದಲು ಈ ಕೆಲಸ ಮಾಡಬೇಕು.
ಈ ಜಿಯೋ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್ ಸೇರಲು ಬಯಸಿದರೆ ಮೊದಲಿಗೆ ಇವುಗಳಲ್ಲಿ ಒಂದನ್ನು ಪ್ರೈಮರಿ ನಂಬರ್ ಎಂದು ಪರಿಗಣಿಸಿ ನಿಮ್ಮ ಪ್ರಿಪೇಯ್ಡ್ ಸಂಖ್ಯೆಯನ್ನು ಮೈಗ್ರೇಶನ್ ಮೂಲಕ ಪೋಸ್ಟ್‌ಪೇಯ್ಡ್‌ಗೆ ತರಬೇಕಾಗುತ್ತದೆ ಇದು ಕಸ್ಟಮರ್ ಕೇರ್ ಮೂಲಕ ಮಾಡಬಹುದು. ನಂತರ ಅದನ್ನು ಉಳಿದ ಎರಡು ಸಂಖ್ಯೆಯನ್ನು ಇದರಡಿಯಲ್ಲಿ ಸೇರಿಸಲಾಗುತ್ತದೆ. ಆದರೆ ಈ ಆಡ್-ಆನ್ ಸಂಖ್ಯೆಗಳಿಗೆ 150 ರೂಗಳ ಮಾಸಿಕ ಶುಲ್ಕ ಸಹ ನೀಡಬೇಕಾಗುತ್ತದೆ ಎನ್ನುವುದನ್ನು ಗಮನಿಸಬೇಕಿದೆ.
ರಿಲಯನ್ಸ್ ಜಿಯೋ ರೂ. 449 ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಒಂದು ತಿಂಗಳ ಸಂಪೂರ್ಣ ಸೈಕಲ್‌ನೊಂದಿಗೆ ಬರುತ್ತದೆ. ಈ ತಿಂಗಳು ನಿಮಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ. ಈ ಯೋಜನೆಯು ಒಟ್ಟು 75GB ಡೇಟಾವನ್ನು ಹೊಂದಿರುತ್ತದೆ. ಈ ಡೇಟಾ ಪೂರ್ತಿ ಮುಗಿದ ನಂತರ ಪ್ರತಿ 1GB ಡೇಟಾ ಬಳಕೆಗೆ ರೂ. 10 ಶುಲ್ಕ ವಿಧಿಸುತ್ತದೆ. ಇದು ಹೆಚ್ಚುವರಿ ಫ್ಯಾಮಿಲಿ ಸದಸ್ಯರಿಗೆ 5GB ಹೆಚ್ಚುವರಿ ಡೇಟಾವನ್ನು ಸಹ ಒದಗಿಸುತ್ತದೆ. ಇದಲ್ಲದೆ ಇದು ದಿನಕ್ಕೆ 100 SMS ದರದಲ್ಲಿ ಒಂದು ತಿಂಗಳವರೆಗೆ SMS ಸೇವೆಯನ್ನು ಸಹ ನೀಡುತ್ತದೆ. ಇಲ್ಲಿ ಸಿಗುವ ಪ್ರತಿಯೊಂದು ಪ್ರಯೋಜನಗಳು ಸಮಾನಾಗಿ ಎಲ್ಲರಿಗೂ ಬಳಕೆಗೆ ಲಭ್ಯವಿರುತ್ತದೆ ಆದರೆ ಪ್ರೈಮರಿ ನಂಬರ್ ಬೇರೆ ಎರಡು ನಂಬರ್ಗಳು ಡೇಟಾ ಮತ್ತು SMS ಎಷ್ಟು ಬಳಸಬೇಕೆನ್ನುವುದನ್ನು ನಿಯಂತ್ರಿಸಬಹುದು.