Jio
ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಇತ್ತೀಚೆಗೆ ಜಿಯೋ ಹಾಟ್‌ಸ್ಟಾರ್ (JioHotstar) ಎಂಬ ಹೊಸ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅನ್ನು ಪ್ರಾರಂಭಿಸಿದೆ. ಈಗ Jio Cinima ಮತ್ತು Disney+ Hotstar ಎರಡನ್ನೂ ಸಂಯೋಜಿಸುವ ಮೂಲಕ ಈ ಒಂದೇ ಪ್ಲಾಟ್ಫಾರ್ಮ್ ಜಿಯೋ ಹಾಟ್‌ಸ್ಟಾರ್ (JioHotstar) ಮೂಲಕ ಎಲ್ಲ ಕಂಟೆಂಟ್ ವೀಕ್ಷಿಸಬಹುದು. ನೀವು ಅದರ ಚಂದಾದಾರಿಕೆಯನ್ನು ಸಂಪೂರ್ಣವಾಗಿ FREE OTT ಬಯಸಿದರೆ ಈ ರಿಲಯನ್ಸ್ ಜಿಯೋ ರಿಚಾರ್ಜ್ (Jio Recharge) ಯೋಜನೆ ಈ ಪ್ರಯೋಜನವನ್ನು ನೀಡುತ್ತದೆ. ಒಟ್ಟಾರೆಯಾಗಿ ಈಗ ರಿಲಯನ್ಸ್ ಜಿಯೋ 84 ದಿನಗಳಿಗೆ ಅನ್ಲಿಮಿಟೆಡ್ ಕರೆ, ದಿನಕ್ಕೆ 2GB ಡೇಟಾದೊಂದಿಗೆ ಉಚಿತ OTT ಬಂಡಲ್ ಆಫರ್ ಒನ್ ಯೋಜನೆಯಲ್ಲಿ ನೀಡುತ್ತಿದೆ.
ಇದರಲ್ಲಿ ಅನಿಯಮಿತ 5G ಡೇಟಾದೊಂದಿಗೆ ಉಚಿತ ಒಟಿಟಿ ಸೇವೆಯನ್ನು ಆನಂದಿಸಲು ಬಯಸಿದರೆ ಅದಕ್ಕಾಗಿ ಪ್ರತ್ಯೇಕವಾಗಿ ಖರ್ಚು ಮಾಡುವ ಬದಲು ನೀವು ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡಬೇಕು. ಜಿಯೋ ಚಂದಾದಾರರಿಗೆ ನೀಡಲಾಗುವ ರೀಚಾರ್ಜ್ ಯೋಜನೆಗಳ ದೊಡ್ಡ ಪೋರ್ಟ್ಫೋಲಿಯೊದಲ್ಲಿ ರೀಚಾರ್ಜ್ ಮೇಲೆ ಜಿಯೋ ಹಾಟ್‌ಸ್ಟಾರ್ ಪ್ರವೇಶವನ್ನು ಒದಗಿಸುವ ಏಕೈಕ ಯೋಜನೆ ಇದಾಗಿದೆ. ಈ ಯೋಜನೆಯ ಬೆಲೆ 949 ರೂಪಾಯಿಯಾಗಿದೆ. ಈ ರಿಲಯನ್ಸ್ ಜಿಯೋದ ಈ ರಿಚಾರ್ಜ್ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
ಅಲ್ಲದೆ ಈ ಯೋಜನೆಯಲ್ಲಿ ನಿಮಗೆ ಅನಿಯಮಿತ ಉಚಿತ ವಾಯ್ಸ್ ಕರೆ ಜೊತೆಗೆ ಪ್ರತಿದಿನ 2GB ಡೇಟಾವನ್ನು ನೀಡುತ್ತದೆ. ಬಳಕೆದಾರರು ಪ್ರತಿದಿನ 100 ಎಸ್ಎಂಎಸ್ ಕಳುಹಿಸಬಹುದು. ಈ ಯೋಜನೆಯನ್ನು ಆಯ್ಕೆ ಮಾಡಿದಾಗ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಮೂರು ತಿಂಗಳವರೆಗೆ ಉಚಿತವಾಗಿರುತ್ತದೆ. ಇದರೊಂದಿಗೆ ಜಿಯೋ ಟಿವಿ ಮತ್ತು ಜಿಯೋಕ್ಲೌಡ್ನಂತಹ ಅಪ್ಲಿಕೇಶನ್ಗಳಿಗೆ ಪ್ರವೇಶವೂ ಲಭ್ಯವಿದೆ. ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡುವ ಅರ್ಹ ಚಂದಾದಾರರಿಗೆ ರಿಲಯನ್ಸ್ ಜಿಯೋ ಅನಿಯಮಿತ 5G ಡೇಟಾದ ಪ್ರಯೋಜನವನ್ನು ನೀಡುತ್ತದೆ.
ಪ್ರೀಮಿಯಂ ಸವಲತ್ತುಗಳೊಂದಿಗೆ ದೀರ್ಘಾವಧಿಯ ರೀಚಾರ್ಜ್ ಬಯಸುವ ಬಳಕೆದಾರರಿಗೆ ಈ ಏರ್ಟೆಲ್ ರಿಚಾರ್ಜ್ ಪ್ಲಾನ್ ಸೂಕ್ತವಾಗಿದೆ. ಈ ಮೂರು ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ಗಳ ಮೂಲಕ ಬಳಕೆದಾರರು ಉಚಿತ ಜಿಯೋ ಹಾಟ್‌ಸ್ಟಾರ್ ಪ್ರವೇಶವನ್ನು ಆನಂದಿಸಬಹುದು. ಜಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್ ಇತ್ತೀಚೆಗೆ ‘ಜಿಯೋ ಹಾಟ್‌ಸ್ಟಾರ್’ ಆಗಿ ಒಂದಾಗಿದೆ. ಇದರ ಮೂಲಕ ಸಿನಿಮಾಗಳು, ಟಿವಿ ಸೀರಿಯಲ್‌ಗಳು, ರಿಯಾಲಿಟಿ ಶೋಗಳು ಮತ್ತು ವೆಬ್‌ಸೀರಿಸ್‌ಗಳನ್ನು ವೀಕ್ಷಿಸಬಹುದು. ಇದಲ್ಲದೆ IPL ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.