Reliance Jio ಅನ್ಲಿಮಿಟೆಡ್ ಕರೆಯೊಂದಿಗೆ ಉಚಿತ 20GB ಹೆಚ್ಚುವರಿಯ 5G ಡೇಟಾ ನೀಡುವ ಈ ಪ್ಲಾನ್ ಬೆಲೆ ಎಷ್ಟು?

Updated on 29-Mar-2024
HIGHLIGHTS

ರಿಲಯನ್ಸ್ ಜಿಯೋ (Reliance Jio) ಮತ್ತೊಮ್ಮೆ ತಮ್ಮ ಬಳಕೆದಾರರಿಗೆ 749 ರೂಗಳ ಯೋಜನೆಯನ್ನು ಮಾರ್ಪಡಿಸಿದೆ.

ಪ್ರಸ್ತುತ ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯೊಂದಿಗೆ ಗ್ರಾಹಕರು ಉಚಿತವಾಗಿ 20GB ಹೆಚ್ಚುವರಿ ಡೇಟಾವನ್ನು ಪಡೆಯುತ್ತಿದ್ದಾರೆ.

ಕ್ರಿಕೆಟ್ ಪ್ರೇಮಿಗಳಿಗಾಗಿ ತಂದಿದ್ದು ಒಂದೇ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆಗಳು, 5G ಡೇಟಾ ಮತ್ತು ಉಚಿತ SMS ಪ್ರಯೋಜನಗಳನ್ನು ನೀಡುತ್ತಿದೆ.

ಭಾರತದ ಅತಿದೊಡ್ಡ ಮತ್ತು ಪ್ರಮುಖ ಟೆಲಿಕಾಂ ರಿಲಯನ್ಸ್ ಜಿಯೋ (Reliance Jio) ಮತ್ತೊಮ್ಮೆ ತಮ್ಮ ಬಳಕೆದಾರರಿಗೆ 749 ರೂಗಳ ಯೋಜನೆಯನ್ನು ಮಾರ್ಪಡಿಸಿದೆ. ಟೆಲ್ಕೊ ರೂ 749 ಯೋಜನೆಯೊಂದಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಆದರೆ ಈ ಪ್ರಯೋಜನಗಳು ಬದಲಾಗುತ್ತಲೇ ಇರುತ್ತವೆ. ಪ್ರಸ್ತುತ ಈ ಯೋಜನೆಯೊಂದಿಗೆ ಗ್ರಾಹಕರು ಉಚಿತವಾಗಿ 20GB ಹೆಚ್ಚುವರಿ ಡೇಟಾವನ್ನು ಪಡೆಯುತ್ತಿದ್ದಾರೆ. ರಿಲಯನ್ಸ್ ಜಿಯೋ (Reliance Jio) ರೂ 749 ಯೋಜನೆಯನ್ನು ಮುಖ್ಯವಾಗಿ ಕ್ರಿಕೆಟ್ ಪ್ರೇಮಿಗಳಿಗಾಗಿ ತಂದಿದ್ದು ಒಂದೇ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆಗಳು, 5G ಡೇಟಾ ಮತ್ತು ಉಚಿತ SMS ಪ್ರಯೋಜನಗಳನ್ನು ನೀಡುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸಲುವಾಗು ಬೆಸ್ಟ್ ಪ್ಲಾನ್

ಈ ರಿಲಯನ್ಸ್ ಜಿಯೋ (Reliance Jio) ರಿಚಾರ್ಜ್ ಪ್ಲಾನ್ 90 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಈ ಜಿಯೋ ಪ್ಲಾನ್ ಸಂಪೂರ್ಣ 90 ದಿನಗಳವರೆಗೆ ಪ್ರಿಪೇಯ್ಡ್ ರೀಚಾರ್ಜ್‌ಗಾಗಿ ನೋಡುತ್ತಿರುವ ಬಳಕೆದಾರರಿಗೆ ಪರಿಪೂರ್ಣ ಯೋಜನೆಯಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನಡೆಯುತ್ತಿರುವ ಕಾರಣದಿಂದಾಗಿ ತಮ್ಮ ಮೊಬೈಲ್ ಡೇಟಾವನ್ನು ಬಳಸಿಕೊಂಡು ಕ್ರಿಕೆಟ್ ವೀಕ್ಷಿಸಲು ಇಷ್ಟಪಡುವವರಿಗಾಗಿ ಈ ಯೋಜನೆಯೊಂದಿಗೆ ರಿಲಯನ್ಸ್ ಜಿಯೋ (Reliance Jio) ಗ್ರಾಹಕರಿಗೆ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ.

Reliance Jio ಅನ್ಲಿಮಿಟೆಡ್ ಕರೆಯೊಂದಿಗೆ ಉಚಿತ 20GB ಹೆಚ್ಚುವರಿಯ 5G ಡೇಟಾ ನೀಡುವ ಈ ಪ್ಲಾನ್ ಬೆಲೆ ಎಷ್ಟು?

Also Read: ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಮಾಡಲು ಹ್ಯಾಕರ್‌ಗಳಿಗೆ OTP ಅಗತ್ಯವಿಲ್ಲ! ಸುರಕ್ಷಿತರಾಗಲು ಮೊದಲು ಈ ಕೆಲಸ ಮಾಡಿ!

ರಿಲಯನ್ಸ್ ಜಿಯೋ (Reliance Jio) ರೂ 749 ಯೋಜನೆ ಪ್ರಯೋಜನಗಳು

ಸದ್ಯಕ್ಕೆ ಸೇರಿಸಲಾದ ಬೋನಸ್ ಡೇಟಾವನ್ನು ಹೊರತುಪಡಿಸಿ 749 ರೂಗಳ ಎಲ್ಲಾ ಪ್ರಯೋಜನಗಳು ಒಂದೇ ಆಗಿವೆ. ಜಿಯೋದಿಂದ ರೂ 749 ಯೋಜನೆಯು 2GB ದೈನಂದಿನ ಡೇಟಾ, ಅನಿಯಮಿತ ವಾಯ್ಸ್ ಕರೆ ಮತ್ತು 100 SMS/ದಿನದೊಂದಿಗೆ ಬರುತ್ತದೆ. ಯೋಜನೆಯು JioTV, JioCinema ಮತ್ತು JioCloud ಗೆ ಚಂದಾದಾರಿಕೆಯನ್ನು ಸಹ ತರುತ್ತದೆ. ತನ್ನ ಕ್ರಿಕೆಟ್ ಕೊಡುಗೆಯ ಭಾಗವಾಗಿ ಜಿಯೋ ಈ ಯೋಜನೆಯೊಂದಿಗೆ 20GB ಬೋನಸ್ ಡೇಟಾವನ್ನು ನೀಡುತ್ತಿದೆ. ಆದ್ದರಿಂದ ನೀವು ಪರಿಣಾಮಕಾರಿಯಾಗಿ 90 ದಿನಗಳವರೆಗೆ 200GB ಡೇಟಾವನ್ನು (180GB + 20GB) ಪಡೆಯುತ್ತೀರಿ.

Reliance Jio ಅನ್ಲಿಮಿಟೆಡ್ ಕರೆಯೊಂದಿಗೆ ಉಚಿತ 20GB ಹೆಚ್ಚುವರಿಯ 5G ಡೇಟಾ ನೀಡುವ ಈ ಪ್ಲಾನ್ ಬೆಲೆ ಎಷ್ಟು?

ಇದರಲ್ಲಿ 20GB ಬೋನಸ್ ಡೇಟಾವನ್ನು ಲುಂಪ್ಸಮ್ ರೀತಿಯಲ್ಲಿ ನೀಡಲಾಗುತ್ತದೆ ಮತ್ತು ಬಳಕೆದಾರರು ಬಯಸಿದಾಗ ಮತ್ತು ಅದನ್ನು ಬಳಸಬಹುದು. ಯೋಜನೆಯ ಮಾನ್ಯತೆಯ ಅವಧಿ ಮುಗಿದ ನಂತರ ಹೆಚ್ಚುವರಿ ಡೇಟಾ ಸಹ ಮುಕ್ತಾಯಗೊಳ್ಳುತ್ತದೆ ಎಂಬುದನ್ನು ಗಮನಿಸಬಹುದು. ರಿಲಯನ್ಸ್ ಜಿಯೋದ 5G ಕವರೇಜ್ ಅಡಿಯಲ್ಲಿ ವಾಸಿಸುತ್ತಿದ್ದರೆ ನಂತರ ನೀವು Unlimited 5G ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ. 4G ಡೇಟಾಗಾಗಿ ಒಮ್ಮೆ ನೀವು FUP (ನ್ಯಾಯಯುತ ಬಳಕೆಯ ನೀತಿ) ಮಿತಿಯನ್ನು ತಲುಪಿದರೆ ಮರುಕ್ಷಣದಿಂದ ಮಿತಿಯನ್ನು ಮರುಹೊಂದಿಸುವವರೆಗೆ ನೀವು 64 Kbps ನಲ್ಲಿ ಡೇಟಾವನ್ನು ಮಾತ್ರ ಬಳಸಬಹುದು.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :