Jio IPL Offer 2025
Jio IPL Offer 2025: ಭಾರತದಲ್ಲಿ ಅತಿ ಶೀಘ್ರದಲ್ಲೇ ಶುರುವಾಗಲಿರುವ ಐಪಿಎಲ್‌ಗಾಗಿ ರಿಲಯನ್ಸ್ ಜಿಯೋ ತಮ್ಮ ಗ್ರಾಹಕರಿಗೆ ಜಬರದಸ್ತ್ ಕ್ರಿಕೆಟ್ ರಿಚಾರ್ಜ್ ಯೋಜನೆಯೊಂದನ್ನು ಪರಿಚಯಿಸಿದೆ. ಇದನ್ನು ನೇರವಾಗಿ ಕ್ರಿಕೆಟ್ ಪ್ರಿಯರಿಗಾಗಿ ನೀಡಲಾಗಿದ್ದು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಅನ್ನು ಎಲ್ಲಿ ಬೇಕಾದರೂ ಯಾವುದೇ ಡೇಟಾದ ಚಿಂತೆಯಿಲ್ಲದೆ ಆನಂದಿಸಲು ಒಂದೊಳ್ಳೆ ಅವಕಾಶವನ್ನು ಘೋಷಿಸಿದೆ. ಇದರಿಂದ ರಿಲಯನ್ಸ್ Jio ಗ್ರಾಹಕರು ಈಗಾಗಲೇ ಬಳಸುತ್ತಿರುವ 299 ರೂಗಳ ಮೇಲ್ಪಟ್ಟ ಯೋಜನೆಗಳೊಂದಿಗೆ ಈ 100 ರೂಗಳ ರಿಚಾರ್ಜ್ ಮಾಡುವುದರಿಂದ 90 ದಿನಗಳಿಗೆ ಎಲ್ಲ IPL 2025 ಕ್ರಿಕೆಟ್ ಪಂದ್ಯಾವಳಿಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಈ ಅನಿಯಮಿತ ಕ್ರಿಕೆಟ್ ಕೊಡುಗೆಯಲ್ಲಿ ಗ್ರಾಹಕರು ಟಿವಿ / ಮೊಬೈಲ್‌ನಲ್ಲಿ 90 ದಿನಗಳ ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತಾರೆ ಮತ್ತು ಅದೂ 4K ಗುಣಮಟ್ಟದಲ್ಲಿ. ಅಂದರೆ 22ನೇ ಮಾರ್ಚ್ 2025 ರಿಂದ ಪ್ರಾರಂಭವಾಗುವ ಐಪಿಎಲ್ ಕ್ರಿಕೆಟ್ ಋತುವನ್ನು ಗ್ರಾಹಕರು ಉಚಿತವಾಗಿ ಆನಂದಿಸಲು ಸಾಧ್ಯವಾಗುತ್ತದೆ. ಜಿಯೋ ಹಾಟ್‌ಸ್ಟಾರ್ ಪ್ಯಾಕ್ 90 ದಿನಗಳ ಅವಧಿಗೆ ಮಾನ್ಯವಾಗಿರುತ್ತದೆ. ಇದರಲ್ಲಿ ಮೊದಲ ಮ್ಯಾಚ್ ಕೊಲ್ಕೊತ್ತಾ ಮತ್ತು ಬೆಂಗಳೂರಿನ ನಡುವೆ ಸಂಜೆ 7:30 ಗಂಟೆಗೆ ಶುರುವಾಗಲಿದೆ.
ಇದರೊಂದಿಗೆ ಜಿಯೋ ಮನೆಗಳಿಗೆ ಜಿಯೋ ಫೈಬರ್ ಅಥವಾ ಜಿಯೋ ಏರ್‌ರ್ಫೈಬರ್‌ನ ಉಚಿತ ಪ್ರಾಯೋಗಿಕ ಸಂಪರ್ಕವನ್ನು ಸಹ ಜಿಯೋ ಒದಗಿಸುತ್ತದೆ. ಅಲ್ಟ್ರಾ-ಫಾಸ್ಟ್ ಇಂಟರ್ನೆಟ್‌ನ ಉಚಿತ ಪ್ರಾಯೋಗಿಕ ಸಂಪರ್ಕವು 50 ದಿನಗಳವರೆಗೆ ಉಚಿತವಾಗಿರುತ್ತದೆ. ಗ್ರಾಹಕರು 4K ನಲ್ಲಿ ಕ್ರಿಕೆಟ್ ನೋಡುವ ಅತ್ಯುತ್ತಮ ಅನುಭವದ ಜೊತೆಗೆ ಉತ್ತಮ ಮನೆ ಮನರಂಜನೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಜಿಯೋ ಫೈಬರ್ ಅಥವಾ ಜಿಯೋಏರ್‌ಫೈಬರ್‌ನ ಉಚಿತ ಪ್ರಾಯೋಗಿಕ ಸಂಪರ್ಕದೊಂದಿಗೆ 800+ ಟಿವಿ ಚಾನೆಲ್‌ಗಳು, 11+ ಒಟಿಟಿ ಅಪ್ಲಿಕೇಶನ್‌ಗಳು, ಅನಿಯಮಿತ ವೈಫೈ ಸಹ ಲಭ್ಯವಿದೆ.
Also Read: AC Buying Guide: ಬೇಸಿಗೆಗಾಗಿ ಹೊಸ ಏರ್ ಕಂಡಿಷನರ್ ಖರೀದಿಸುವ ಮುಂಚೆ ಈ ಮಾಹಿತಿಗಳು ನಿಮಗಿರಲಿ!
ಈ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಕೊಡುಗೆಯನ್ನು ಪಡೆಯಲು ಅಸ್ತಿತ್ವದಲ್ಲಿರುವ ಜಿಯೋ ಸಿಮ್ ಬಳಕೆದಾರರು ಕನಿಷ್ಠ 299 ರೂಗಳನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ ಹೊಸ ಜಿಯೋ ಸಿಮ್ ಗ್ರಾಹಕರು 299 ರೂ ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ಹೊಸ ಜಿಯೋ ಸಿಮ್ ಪಡೆಯಬೇಕಾಗುತ್ತದೆ. 17ನೇ ಮಾರ್ಚ್ ಮೊದಲು ರೀಚಾರ್ಜ್ ಮಾಡಿದ ಗ್ರಾಹಕರು 100 ರೂಗಳ ಡೇಟಾ ಆಡ್-ಆನ್ ಪ್ಯಾಕ್ ತೆಗೆದುಕೊಳ್ಳುವ ಮೂಲಕ ಹೊಸ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.