Reliance Jio ಈ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳಲ್ಲಿ ಉಚಿತ Netflix, Disney Hotstar ಮತ್ತು Amazon Prime ಲಭ್ಯ!

Updated on 22-May-2024
HIGHLIGHTS

ರಿಲಯನ್ಸ್ ಜಿಯೋ (Reliance Jio) ಈ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳಲ್ಲಿ ಉಚಿತ OTT ಪ್ರಯೋಜನಗಳನ್ನು ನೀಡುತ್ತಿದೆ.

ಪ್ರಸ್ತುತ ಈಗ ಬಳಕೆದಾರರು ತಮ್ಮ ನೆಚ್ಚಿನ OTT ವಿಷಯವನ್ನು ವೀಕ್ಷಿಸಲು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

ರಿಲಯನ್ಸ್ ಜಿಯೋ Netflix, Disney Hotstar ಮತ್ತು Amazon Prime ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ನೀಡುತ್ತಿದೆ.

ಭಾರತದಲ್ಲಿ ಜನಪ್ರಿಯ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಈ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳಲ್ಲಿ ಉಚಿತ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಹಾಟ್‌ಸ್ಟಾರ್ ನೀಡುತ್ತಿದೆ. ಆದರೆ ಇದರಲ್ಲಿ ಬಳಕೆದಾರರು ಪಾಸ್ವರ್ಡ್ ಶೇರ್ ಮಾಡಲು ಸಾಧ್ಯವಿರೋದಿಲ್ಲ. ಸಾಮಾನ್ಯವಾಗಿ ನೀವು ಮಾಡಿಕೊಳ್ಳುವ ರಿಚಾರ್ಜ್ ಮೂಲಕ ಈಗ ಬಳಕೆದಾರರು ತಮ್ಮ ನೆಚ್ಚಿನ OTT ಕಂಟೆಂಟ್ ವೀಕ್ಷಿಸಲು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಆದರೆ ರಿಲಯನ್ಸ್ ಜಿಯೋ Netflix, Disney Hotstar ಮತ್ತು Amazon Prime ಸೇರಿದಂತೆ ಹಲವು OTT ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಆದ್ದರಿಂದ ನೀವು ಜಿಯೋ ಪ್ರಿಪೇಯ್ಡ್ ಮೊಬೈಲ್ ಸಂಪರ್ಕವನ್ನು ಸಹ ಬಳಸುತ್ತಿದ್ದರೆ ನಾವು ನಿಮಗೆ ಕೆಲವು ವಿಶೇಷ ಯೋಜನೆಗಳನ್ನು ಹೇಳಲಿದ್ದೇವೆ.

Also Read: Lok Sabha Elections 2024: ವೋಟರ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

ರಿಲಯನ್ಸ್ ಜಿಯೋ (Reliance Jio) ರೂ 398 ಪ್ರಿಪೇಯ್ಡ್ ಯೋಜನೆ:

ರಿಲಯನ್ಸ್ ಜಿಯೋ (Reliance Jio) ರೂ 398 ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಬಳಕೆದಾರರಿಗೆ ಪ್ರತಿದಿನ 2GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಈ ಯೋಜನೆಯು ಅನಿಯಮಿತ ವಾಯ್ಸ್ ಕರೆಗಳನ್ನು ಮತ್ತು ದಿನಕ್ಕೆ 100 SMS ಅನ್ನು ಸಹ ನೀಡುತ್ತದೆ. JioTV ಅಪ್ಲಿಕೇಶನ್ ಮೂಲಕ Sony LIV, ZEE5, Liongate Play, Discovery+, Sun NXT, Kancha Lannaka, Planet Marathi, Chaupal, DocuBay, EPIC ON, FanCode ಮತ್ತು Hoichoi ಸೇರಿದಂತೆ ಬಹು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಚಂದಾದಾರರು ಪ್ರವೇಶವನ್ನು ಪಡೆಯುತ್ತಾರೆ. ಇದಲ್ಲದೆ ಬಳಕೆದಾರರು JioCinema Premium ನ 28-ದಿನಗಳ ಸದಸ್ಯತ್ವವನ್ನು ಸಹ ಪಡೆಯುತ್ತಾರೆ.

Reliance Jio plans offer free Netflix, Amazon Prime and Disney+ Hotstar subscription – Digit Kannada

ರಿಲಯನ್ಸ್ ಜಿಯೋ ರೂ 857 ಪ್ರಿಪೇಯ್ಡ್ ಯೋಜನೆ:

ಜಿಯೋ ರೂ 857 ಯೋಜನೆಯು 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಜೊತೆಗೆ ಪ್ರತಿದಿನ 2 GB ಹೈ-ಸ್ಪೀಡ್ ಡೇಟಾ. ಅನಿಯಮಿತ ವಾಯ್ಸ್ ಕರೆಗಳು ಮತ್ತು 100 SMS ಸೌಲಭ್ಯವು ಯೋಜನೆಯಲ್ಲಿ ಲಭ್ಯವಿದೆ. ಚಂದಾದಾರರು ಪ್ರೈಮ್ ವಿಡಿಯೋ ಮೊಬೈಲ್‌ನ 84-ದಿನದ ಸದಸ್ಯತ್ವವನ್ನು ಪಡೆಯುತ್ತಾರೆ ಮತ್ತು JioTV, JioCinema ಮತ್ತು JioCloud ಸೇವೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.

ರಿಲಯನ್ಸ್ ಜಿಯೋ (Reliance Jio) ರೂ 1099 ಪ್ರಿಪೇಯ್ಡ್ ಯೋಜನೆ:

ಜಿಯೋ ರೂ 1099 ಪ್ಲಾನ್ 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರತಿದಿನ 2 GB ಹೈ-ಸ್ಪೀಡ್ ಡೇಟಾ ಲಭ್ಯವಿದೆ. ಯೋಜನೆಯು ಅನಿಯಮಿತ ವಾಯ್ಸ್ ಕರೆಗಳನ್ನು ಮತ್ತು ದಿನಕ್ಕೆ 100 SMS ನೀಡುತ್ತದೆ. ಚಂದಾದಾರರು ನೆಟ್‌ಫ್ಲಿಕ್ಸ್ ಮೊಬೈಲ್ ಚಂದಾದಾರಿಕೆಯೊಂದಿಗೆ JioTV, JioCinema ಮತ್ತು JioCloud ಸೇವೆಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಇದಲ್ಲದೆ ಗ್ರಾಹಕರು ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ಸಹ ಆನಂದಿಸಬಹುದು.

Reliance Jio plans offer free Netflix, Amazon Prime and Disney+ Hotstar subscription – Digit Kannada

ಜಿಯೋದ ರೂ 1198 ಪ್ರಿಪೇಯ್ಡ್ ಯೋಜನೆ:

ಜಿಯೋ ರೂ 1198 ಪ್ರಿಪೇಯ್ಡ್ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು ಪ್ರತಿದಿನ 2 GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ದೈನಂದಿನ ಡೇಟಾ ಮಿತಿಯನ್ನು ತಲುಪಿದ ನಂತರ ವೇಗವು 64 Kbps ಗೆ ಕಡಿಮೆಯಾಗುತ್ತದೆ. ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆಗಳು ಮತ್ತು 100 SMS ಸೌಲಭ್ಯವೂ ಲಭ್ಯವಿದೆ. ಪ್ಲಾನ್‌ನಲ್ಲಿ ಪ್ರೈಮ್ ವಿಡಿಯೋ ಮೊಬೈಲ್, ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್, Sony Liv, ZEE5, Lionsgate Play, Discovery+, DocuBay, EPIC On, Sun NXT, Hoichoi, Chaupal, Planet Marathi, Kancha ನಂತಹ ಅನೇಕ OTT ಅಪ್ಲಿಕೇಶನ್‌ಗಳಿಗೆ ಚಂದಾದಾರರು ಪ್ರವೇಶವನ್ನು ಪಡೆಯುತ್ತಾರೆ. ಚಂದಾದಾರಿಕೆಯನ್ನು ಪಡೆಯುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :