Reliance Jio
Jio Phone Plan: ಭಾರತದ ದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹಲವು ರೀಚಾರ್ಜ್ ಪ್ಲಾನ್‌ಗಳನ್ನು ನೀಡುತ್ತಿದೆ. ಇದರಲ್ಲಿ ಜಿಯೋಫೋನ್ (JioPhone) ಬಳಸುವವರಿಗೆ ವಿಶೇಷ ಪ್ರಯೋಜನಗಳು ಸಿಗುತ್ತಿವೆ. ಸದ್ಯ ಜಿಯೋಫೋನ್ ಬಳಕೆದಾರರಿಗೆ ಕೇವಲ ₹895 ರೂಗಳಿಗೆ ಪೂರ್ತಿ ಒಂದು ವರ್ಷದ ವ್ಯಾಲಿಡಿಟಿ ಇರುವ ಪ್ಲಾನ್ ಲಭ್ಯವಿದೆ. ಜಿಯೋ ಫೋನ್ ಬಳಕೆದಾರರಲ್ಲಿ ಪ್ರತಿ ಬಾರಿ, ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ರೀಚಾರ್ಜ್ ಮಾಡಲು ಇಷ್ಟಪಡದವರಿಗೆ ಈ ಪ್ಲಾನ್ ತುಂಬ ಒಳ್ಳೆಯ ಆಯ್ಕೆಯಾಗಿದೆ. ಅಲ್ಲದೆ ಬರೋಬ್ಬರಿ 46 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಜಿಯೋ (Reliance Jio) ತನ್ನ ಬಳಕೆದಾರರಿಗೆ ದೀರ್ಘಾವಧಿಯ ರೀಚಾರ್ಜ್ ಆಯ್ಕೆಯನ್ನು ನೀಡಿದೆ.
Also Read: ಭಾರತದಲ್ಲಿ Nothing Phone 3a Lite ಬಿಡುಗಡೆ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ರಿಲಯನ್ಸ್ ಜಿಯೋ ತಮ್ಮ ಪ್ರಿಯ ಜಿಯೋ ಫೋನ್ ಬಳಕೆದಾರರಿಗೆ ವರ್ಷಕ್ಕೊಮ್ಮೆ ರಿಚಾರ್ಜ್ ಮಾಡುವ ಬಳಕೆದಾರರಿಗೆ ಅತ್ಯುತ್ತಮ ಆಫರ್ ನೀಡುತ್ತಿದ್ದು ವಾರ್ಷಿಕ ಪ್ಲಾನ್ಗಳಿಗೆ ಆದ್ಯತೆ ನೀಡುವ ಬಳಕೆದಾರರಿಗೆ ಉತ್ತಮ ಅನುಕೂಲವನ್ನು ನೀಡುತ್ತದೆ. ಅಷ್ಟೇಯಲ್ಲದೆ ಜಿಯೋ ಫೋನ್ ಬಳಕೆದಾರರಿಗೆ ಡೇಟಾ ಭತ್ಯೆ ಸೀಮಿತವಾಗಿರಬಹುದು. ಇದರಲ್ಲಿ ಸಾಮಾನ್ಯ ಬ್ರೌಸಿಂಗ್, ಮೆಸೇಜ್ ಕಳುಹಿಸುವಿಕೆ ಮತ್ತು ಇಮೇಲ್‌ಗಳಂತಹ ಮೂಲಭೂತ ಇಂಟರ್ನೆಟ್ ಬಳಕೆಗೆ ಇದು ಸಾಕಾಗುತ್ತದೆ. ಜಿಯೋ ಪ್ರಸ್ತುತ 895 ರೂಪಾಯಿಗಳ ಯೋಜನೆಯು ತನ್ನ 336 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
ಈ ಜಿಯೋಫೋನ್ ಯೋಜನೆಯಲ್ಲಿ ನಿಮಗೆ ಪ್ರತಿ 28 ದಿನಗಳಿಗೊಮ್ಮೆ 50 SMS ಲಭ್ಯವಿರುತ್ತದೆ.
ಜಿಯೋಫೋನ್ ಯೋಜನೆ ಎಲ್ಲಾ ಸ್ಥಳೀಯ ಮತ್ತು STD ನೆಟ್‌ವರ್ಕ್‌ಗಳಿಗೆ ಅನಿಯಮಿತವಾಗಿ ಕರೆ ಮಾಡುವ ಸೌಲಭ್ಯಗಳಿವೆ.
ಪ್ರತಿ 28 ದಿನಗಳಿಗೊಮ್ಮೆ 2GB ಹೈ-ಸ್ಪೀಡ್ ಡೇಟಾದ ಪೂರ್ತಿ ಅವಧಿಗೆ ಒಟ್ಟಾರೆಯಾಗಿ 24GB ವರೆಗೆ ಲಭ್ಯವಿದೆ.
ಜಿಯೋ ಬಳಕೆದಾರರು ಈಗ ರೀಚಾರ್ಜ್ ಮಾಡಲು ಧಾವಿಸುವ ಮೊದಲು ಈ ರೂ 895 ಯೋಜನೆಯು ಜಿಯೋ ಫೋನ್ ಮತ್ತು ಜಿಯೋ ಭಾರತ್ ಫೋನ್ ಬಳಕೆದಾರರಿಗೆ ಮಾತ್ರ ಎಂಬುದನ್ನು ಗಮನಿಸಬೇಕಿದೆ. ನೀವು ಸಾಮಾನ್ಯ ಸ್ಮಾರ್ಟ್‌ಫೋನ್‌ನಲ್ಲಿ ಜಿಯೋ ಸಿಮ್ ಬಳಸುತ್ತಿದ್ದರೆ ದುರದೃಷ್ಟವಶಾತ್ ನೀವು ಅರ್ಹರಾಗಿರುವುದಿಲ್ಲ. ಆದಾಗ್ಯೂ ಜಿಯೋ ಫೋನ್ ಮಾಲೀಕರಿಗೆ ಈ ಯೋಜನೆ ವರ್ಷಪೂರ್ತಿ ಸಂಪರ್ಕದಲ್ಲಿರಲು ಅತ್ಯುತ್ತಮ ಮತ್ತು ವೆಚ್ಚ-ಪರಿಣಾಮಕಾರಿ ಆಯ್ಕೆಯಾಗಿದೆ.