BSNL Plan
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಖಾಸಗಿ ಟೆಲಿಕಾಂಗಳಿಗೆ ನೇರ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೆ ಇದೆ. ಈಗ ಅದೇ ಹಾದಿಯಲ್ಲಿ ಬಿಎಸ್ಎನ್ಎಲ್ ಕಂಪನಿಯು ಗ್ರಾಹಕರು ಹುಬ್ಬೇರಿಸುವಂತಹ ಯೋಜನೆ ಒಂದನ್ನು ಪರಿಚಯಿಸಿದ್ದು ಇದರ ಬೆಲೆ ಬರೀ 1 ರೂಗಳು ಅಷ್ಟೇ. ಹೌದು, ಅಚ್ಚರಿ ಅನಿಸಿದರೂ ನೀವು ನಂಬಲೇಬೇಕು ಬಿಎಸ್ಎನ್ಎಲ್ ಕೇವಲ 1 ರೂಪಾಯಿಗೆ ಈ ರಿಚಾರ್ಜ್ ಸ್ವಾಗತ ಯೋಜನೆಯನ್ನು ನೀಡಿದ್ದು ಈ ಯೋಜನೆಯ ಬೆಲೆ ಮರುಕಟ್ಟೆಯಲ್ಲೇ ಯಾರೂ ನೀಡದ ಜಬರದಸ್ತ್ ಡೀಲ್ ಪ್ರಯೋಜನಗಳನ್ನು ಕಂಪನಿ ನಿಡುತ್ತಿರುವುದು ನಿಜಕ್ಕೂ ಪ್ರಶಂಶನೀಯ ಅಂದರೆ ತಪ್ಪಿಲ್ಲ. ಇದು ಬಿಎಸ್ಎನ್ಎಲ್ ಸೇರುವ ಹೊಸ ಬಳಕೆದಾರರಿಗೆ ಕೆಲವು ಆಕರ್ಷಕ ಪ್ರಯೋಜನಗಳನ್ನು ನೀಡಲಿದೆ. ಹಾಗಾದರೇ BSNL ಪರಿಚಯಿಸಿರುವ ಈ ಬೊಂಬಾಟ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Also Read: Dimensity 9400+ ಚಿಪ್‌ಸೆಟ್ ಮತ್ತು Zeiss ಕ್ಯಾಮೆರಾದ Vivo X200T ಫೋನ್ ಬಿಡುಗಡೆಗೆ ಡೇಟ್ ಫಿಕ್ಸ್!
ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯ ಈ ಹೊಸ 1 ರೂಗಳ ಯೋಜನೆಯಲ್ಲಿ ನಿಮಗೆ ಹೊಸ ಸಿಮ್ ಕಾರ್ಡ್ ಅನ್ನು ಉಚಿತವಾಗಿ ಲಭ್ಯವಾಗಲಿದೆ. ಅಂದರೆ ಯಾವುದೇ ಹೆಚ್ಚುವರಿ ಹಣ ನೀಡುವ ಆಗತ್ಯವಿಲ್ಲ. ಅಲ್ಲದೆ ಇದಾರಲ್ಲಿನ ಪ್ರಯೋಜನಗಳನ್ನು ನೋಡುವುದಾದರೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪ್ರತಿದಿನ 2GB ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಇವೆಲ್ಲ ಪ್ರಯೋಜನಗಳನ್ನು ಕಂಪನಿ ನಿಮಗೆ ಬರೋಬ್ಬರಿ 30 ದಿನಗಳ ವ್ಯಾಲಿಡಿಟಿ ಸೌಲಭ್ಯದೊಂದಿಗೆ ನೀಡುತ್ತಿದೆ. ಇದಲ್ಲದೇ ಇದರೊಂದಿಗೆ ಈ ತುಂಬ ಕಡಿಮೆ ಬೆಲೆಯ ಯೋಜನಯಲ್ಲಿ ನಿಮಗೆ ಪ್ರತಿದಿನ 100 SMS ಪ್ರಯೋಜನ ಸಹ ದೊರೆಯುತ್ತದೆ ಎಂದು ಬಿಎಸ್ಎನ್ಎಲ್ ಇಂಡಿಯಾ ತನ್ನ ಟ್ವಿಟ್ಟರ್ ಪೋಸ್ಟ್ ಮೂಲಕ ತಿಳಿಸಿದೆ.
ಈ ಕೊಡುಗೆಯ ಪ್ರಮುಖ ಭಾಗವೆಂದರೆ ಹೊಸ ಬಳಕೆದಾರರಿಗೆ ಉಚಿತ BSNL 4G ಸಿಮ್ ಕಾರ್ಡ್ ಸಹ ಪಡೆಯಬಹುದು. ಅಲ್ಲದೆ ಗ್ರಾಹಕರು ಯಾವುದೇ BSNL ಗ್ರಾಹಕ ಸೇವಾ ಕೇಂದ್ರ ಅಥವಾ ಅಧಿಕೃತ ಚಿಲ್ಲರೆ ವ್ಯಾಪಾರಿಗೆ ಹೋಗಿ ₹1 ಶುಲ್ಕವನ್ನು ಪಾವತಿಸಿ ಎಲ್ಲಾ “ಆಜಾದಿ ಕಾ ಪ್ಲಾನ್” ಪ್ರಯೋಜನಗಳನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸುವ ಹೊಸ ಸಿಮ್ ಅನ್ನು ಪಡೆಯಬಹುದು. ಇದು ಹೊಸ ಸಂಪರ್ಕವನ್ನು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ಬಳಕೆದಾರರು ತಕ್ಷಣವೇ ಪ್ರಯೋಜನಗಳನ್ನು ಆನಂದಿಸಲು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.