Jio vs Airtel 899 ರೂ.ಗಳ ರೀಚಾರ್ಜ್‌ ಪ್ಲಾನ್: ಯಾವ ಪ್ಲಾನ್‌ನಲ್ಲಿ ಹೆಚ್ಚು ಪ್ರಯೋಜನ ಸಿಗುತ್ತೆ?

Jio vs Airtel: ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್‌ಟೆಲ್‌ ಪ್ರಮುಖ ಸ್ಥಾನದಲ್ಲಿರುವ ಕಂಪನಿಗಳಾಗಿವೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಎರಡೂ ಸಂಸ್ಥೆಗಳು ವಿವಿಧ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳನ್ನು ನೀಡುತ್ತಿವೆ. ಅದರಲ್ಲೂ ಹೆಚ್ಚಿನ ಡೇಟಾ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಬಯಸುವ ಬಳಕೆದಾರರಿಗೆ ಕೆಲವು ಪ್ಲಾನ್‌ಗಳು ಹೆಚ್ಚು ಗಮನ ಸೆಳೆಯುತ್ತವೆ. ಈ ಪೈಕಿ ಜಿಯೋ ಮತ್ತು ಏರ್‌ಟೆಲ್‌ನ 899 ರೂ.ಗಳ ರೀಚಾರ್ಜ್‌ ಪ್ಲಾನ್‌ಗಳು ಒಂದೇ ಬೆಲೆಯಲ್ಲಿದ್ದರೂ, ಡೇಟಾ ಮತ್ತು ವ್ಯಾಲಿಡಿಟಿ ವಿಚಾರದಲ್ಲಿ ವ್ಯತ್ಯಾಸ ಹೊಂದಿವೆ. ಹಾಗಾದರೆ 899 ರೂ.ಗಳ ಬೆಲೆಯ ಈ ಎರಡು ಯೋಜನೆಗಳಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ? ಇಲ್ಲಿದೆ ಸಂಪೂರ್ಣ ಹೋಲಿಕೆ.

Also Read : ಸ್ಟೈಲಿಶ್‌ ಲುಕ್‌ ಹೊಂದಿರುವ Realme Narzo 90x 5G ಮೊಬೈಲ್‌ ಸಖತ್ ಡಿಸ್ಕೌಂಟ್‌ ಬೆಲೆಗೆ ಲಭ್ಯ!

Jio 899 ರೂ.ಗಳ ಪ್ರೀಪೇಯ್ಡ್‌ ಪ್ಲಾನ್‌

ಜಿಯೋ 899 ರೂ.ಗಳ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸಿಗಲಿದೆ. ಇದರ ಜೊತೆಗೆ ಒಟ್ಟು 20GB ಹೆಚ್ಚುವರಿ ಡೇಟಾ ಕೂಡ ಲಭ್ಯವಿದೆ. ಹೀಗಾಗಿ ಹೆಚ್ಚು ಡೇಟಾ ಬಳಸುವವರಿಗೆ ಈ ಯೋಜನೆ ಆಕರ್ಷಕ ಆಯ್ಕೆಯಾಗಬಹುದು. ಈ ಪ್ಲಾನ್‌ 90 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ಸಿಗಲಿದೆ. ಜೊತೆಗೆ ಪ್ರತಿದಿನ 100 SMS ಪ್ರಯೋಜನವೂ ದೊರೆಯುತ್ತದೆ. ಇದರ ಜತೆಗೆ ಜಿಯೋ ನೀಡುವ JioTV ಸೇರಿದಂತೆ ಹೆಚ್ಚುವರಿ OTT ಮನರಂಜನಾ ಪ್ರಯೋಜನಗಳ ಸೌಲಭ್ಯವೂ ಈ ಯೋಜನೆಯಲ್ಲಿದೆ. ಹೀಗಾಗಿ ಡೇಟಾ ಮಾತ್ರವಲ್ಲದೆ ಮನರಂಜನಾ ಸೇವೆಗಳನ್ನೂ ಬಯಸುವ ಬಳಕೆದಾರರಿಗೆ ಈ ಪ್ಲಾನ್‌ ಗಮನಾರ್ಹವಾಗಿದೆ.

ಏರ್‌ಟೆಲ್‌ 899 ರೂ.ಗಳ ಪ್ರೀಪೇಯ್ಡ್‌ ಪ್ಲಾನ್‌

ಹಾಗೆಯೇ ಭಾರ್ತಿ ಏರ್‌ಟೆಲ್‌ನ 899 ರೂ.ಗಳ ಬೆಲೆಯಲ್ಲಿ ಕೂಡ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯನ್ನು ನೀಡುತ್ತಿದೆ. ಆದರೆ ಜಿಯೋಗೆ ಹೋಲಿಸಿದರೆ ಇದರ ಡೇಟಾ ಪ್ರಯೋಜನ ಸ್ವಲ್ಪ ಕಡಿಮೆಯಾಗಿದೆ. ಏರ್‌ಟೆಲ್‌ನ 899 ರೂ.ಗಳ ಪ್ಲಾನ್‌ನಲ್ಲಿ ಪ್ರತಿದಿನ 1.5GB ಡೇಟಾ ಸಿಗಲಿದೆ. ಈ ಯೋಜನೆಯ ವ್ಯಾಲಿಡಿಟಿ 84 ದಿನಗಳು ಆಗಿದ್ದು, ಬಳಕೆದಾರರಿಗೆ ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ದೊರೆಯುತ್ತದೆ. ಇದರ ಜತೆಗೆ ಪ್ರತಿದಿನ 100 SMS ಪ್ರಯೋಜನವೂ ಲಭ್ಯವಿದೆ.

ಜಿಯೋ vs ಏರ್‌ಟೆಲ್‌ 899 ರೂ.ಗಳ ಪ್ಲಾನ್‌: ಯಾವುದು ಹೆಚ್ಚು ಲಾಭದಾಯಕ?

ಒಟ್ಟಿನಲ್ಲಿ ಹೆಚ್ಚಿನ ಡೇಟಾ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವವರಿಗೆ ಜಿಯೋ 899 ರೂ.ಗಳ ಪ್ಲಾನ್‌ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಜಿಯೋ ಯೋಜನೆಯಲ್ಲಿ ಏರ್‌ಟೆಲ್‌ಗಿಂತ ಪ್ರತಿದಿನ 500MB ಹೆಚ್ಚುವರಿ ಡೇಟಾ ಸಿಗುವುದರ ಜೊತೆಗೆ 6 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯೂ ಇದೆ. ಆದರೆ ಏರ್‌ಟೆಲ್‌ ಬಳಕೆದಾರರಿಗೆ ಅದರ 899 ರೂ.ಗಳ ಪ್ಲಾನ್‌ ಸೂಕ್ತವಾಗಿರಬಹುದು. ವಿಶೇಷವಾಗಿ ಈಗಾಗಲೇ ಏರ್‌ಟೆಲ್‌ ನೆಟ್‌ವರ್ಕ್‌ ಬಳಸುತ್ತಿರುವವರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಈ ಯೋಜನೆಯನ್ನು ಆಯ್ಕೆ ಮಾಡಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :