Jio vs Airtel: ಬರೋಬ್ಬರಿ 90 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಈ ರಿಚಾರ್ಜ್ ಯೋಜನಗೆಳಲ್ಲಿ ಯಾವುದು ಬೆಸ್ಟ್?
ರಿಲಯನ್ಸ್ ಜಿಯೋದ 899 ರೂಗಳ ಪ್ಲಾನ್ ಪೂರ್ತಿ 90 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.
ಆದರೆ ಭಾರ್ತಿ ಏರ್ಟೆಲ್ 929 ರೂಗಳ ಯೋಜನೆಯಲ್ಲಿ 90 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ.
ಅನ್ಲಿಮಿಟೆಡ್ ಕರೆಗಳೊಂದಿಗೆ 5G ಡೇಟಾವನ್ನು ನೀಡುವ ಈ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Jio vs Airtel: ನೀವು ಜಿಯೋ ಅಥವಾ ಏರ್ಟೆಲ್ ಗ್ರಾಹಕರಾಗಿದ್ದರೆ ಬರೋಬ್ಬರಿ 90 ದಿನಗಳ ವ್ಯಾಲಿಡಿಟಿಗೆ ಅನ್ಲಿಮಿಟೆಡ್ ಕರೆಗಳೊಂದಿಗೆ 5G ಡೇಟಾವನ್ನು ನೀಡುವ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿ ವಿವರಿಸಲಾಗಿದೆ. ಜಿಯೋ ಮತ್ತು ಏರ್ಟೆಲ್ ಕಂಪನಿಗಳು ಗ್ರಾಹಕರಿಗಾಗಿ ತುಂಬಾ ಒಳ್ಳೆಯ ಯೋಜನೆಗಳನ್ನು ತಂದಿವೆ. ಈ ಎರಡು ಯೋಜನೆಗಳ ಬೆಲೆ ₹1000ಕ್ಕಿಂತ ಕಡಿಮೆ ಇದೆ. ಇವುಗಳಲ್ಲಿ ನಿಮಗೆ 90 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಜೊತೆಗೆ ನೀವು ಅನಿಯಮಿತ ಕರೆಗಳನ್ನು ಮಾಡಬಹುದು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಬಹುದು. ಕಡಿಮೆ ಹಣದಲ್ಲಿ ಹೆಚ್ಚು ದಿನಗಳು ಸಂಪರ್ಕ ಬಯಸುವವರಿಗೆ ಈ ಯೋಜನೆಗಳು ಉತ್ತಮವಾಗಿರುತ್ತವೆ.
ಜಿಯೋ ₹899 ಪ್ಲಾನ್ ವಿವರಗಳು:
ಜಿಯೋದ ₹899 ಪ್ಲಾನ್ನಲ್ಲಿ 90 ದಿನಗಳ ವ್ಯಾಲಿಡಿಟಿ ಇರುತ್ತದೆ. ಇದರಲ್ಲಿ ನೀವು ಅನಿಯಮಿತ ಉಚಿತ ಕರೆಗಳನ್ನು ಮತ್ತು ದಿನಕ್ಕೆ 100 SMS ಗಳನ್ನು ಪಡೆಯುತ್ತೀರಿ. ಡೇಟಾದ ವಿಷಯದಲ್ಲಿ ಪ್ರತಿದಿನ 2GB ಹೈ-ಸ್ಪೀಡ್ 4G ಡಾಟಾ ಸಿಗುತ್ತದೆ. ಆದರೆ ಒಂದು ಪ್ರಮುಖ ಪ್ರಯೋಜನವೆಂದರೆ 5G ಕವರೇಜ್ ಇರುವ ಗ್ರಾಹಕರು ಅನ್ಲಿಮಿಟೆಡ್ 5G ಡಾಟಾ ಉಚಿತವಾಗಿ ಸಿಗುತ್ತದೆ. ಇದರ ಜೊತೆಗೆ ಜಿಯೋಟಿವಿ (JioTV), ಜಿಯೋಸಿನಿಮಾ (JioCinema) ಮುಂತಾದ ಜಿಯೋ ಆಪ್ಗಳ ಉಚಿತ ಸೌಲಭ್ಯವೂ ಲಭ್ಯವಿದೆ.
ಏರ್ಟೆಲ್ ₹929 ಪ್ಲಾನ್ ವಿವರಗಳು:
ಏರ್ಟೆಲ್ನ ₹929 ಪ್ಲಾನ್ ಕೂಡ 90 ದಿನಗಳ ಕಾಲಾವಧಿಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ನಿಮಗೆ ಸಂಪೂರ್ಣ ಅನಿಯಮಿತ ಉಚಿತ ಕರೆಗಳು ಮತ್ತು ದಿನಕ್ಕೆ 100 SMS ಸೌಲಭ್ಯವಿದೆ. ಡಾಟಾ ಪ್ರಯೋಜನವಾಗಿ ಪ್ರತಿದಿನ 1.5GB ಹೈ-ಸ್ಪೀಡ್ 4G ಡೇಟಾ ಲಭ್ಯವಿದೆ. 5G ಫೋನ್ ಮತ್ತು 5G ನೆಟ್ವರ್ಕ್ ಇರುವವರು ಸಹ ಅನ್ಲಿಮಿಟೆಡ್ 5G ಡಾಟಾ ಆಫರ್ ಇರುತ್ತದೆ. ಇದರ ಜೊತೆಗೆ ವಿಂಕ್ ಮ್ಯೂಸಿಕ್ (ವಿಂಕ್ ಮ್ಯೂಸಿಕ್) ಮತ್ತು ಅಪೋಲೋ 24/7 ಸರ್ಕಲ್ (ಅಪೊಲೊ 24/7 ಸರ್ಕಲ್) ಕೆಲವು ಉಚಿತ ಪ್ರಯೋಜನಗಳು ಸಿಗುತ್ತವೆ.
Jio vs Airtel ಬರೋಬ್ಬರಿ 90 ದಿನಗಳ ವ್ಯಾಲಿಡಿಟಿ ಪ್ಲಾನ್:
ಗ್ರಾಹಕರು ಪದೇ ಪದೇ ರೀಚಾರ್ಜ್ ಮಾಡುವುದನ್ನು ತಪ್ಪಿಸಲು ಈ 90 ದಿನಗಳ ಯೋಜನೆಗಳು ಸಹಾಯಕವಾಗಿದೆ. ಯಾಕೆಂದರೆ ರಿಲಯನ್ಸ್ ಜಿಯೋದ ₹899 ಪ್ಲಾನ್ ಮತ್ತು ಏರ್ಟೆಲ್ ₹929 ಪ್ಲಾನ್ಗಳು ಪ್ರಮುಖವಾಗಿದ್ದು ನಿಮಗೆ ಸರಿ ಸುಮಾರು ಒಂದು ಸಾವಿರದೊಳಗೆ ಇವೆರಡೂ ಪ್ಲಾನ್ ಬರೋಬ್ಬರಿ 90 ದಿನಗಳ ಕಾಲಾವಧಿ ಮತ್ತು ದೇಶಾದ್ಯಂತ ಉಚಿತ ಅನಿಯಮಿತ ಕರೆಗಳನ್ನು ನೀಡುತ್ತವೆ. ಇನ್ನು 5G ನೆಟ್ವರ್ಕ್ ಇರುವ ಪ್ರದೇಶಗಳಲ್ಲಿ 5G ಫೋನ್ ಬಳಸುವವರಿಗೆ ಅನ್ಲಿಮಿಟೆಡ್ 5G ಡೇಟಾ ಕೂಡ ಸಿಗುತ್ತದೆ. ಹಾಗಾದ್ರೆ ಇವುಗಳಲ್ಲಿ ಯಾವುದು ಬೆಸ್ಟ್ ನೀವೇ ನೋಡಿ.