Jio Hotstar Plans: ಭಾರತದಲ್ಲಿ ಜಿಯೋ ಸದ್ದಿಲ್ಲದೇ ಹೊಸ ಜಿಯೋ ಹಾಟ್‌ಸ್ಟಾರ್ ಯೋಜನೆಗಳನ್ನು ಪರಿಚಯಿಸಿದೆ!

Updated on 19-Jan-2026

Jio Hotstar Plans: ಭಾರತದ ಡಿಜಿಟಲ್ ಸ್ಟ್ರೀಮಿಂಗ್ ತನ್ನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಲು ಜಿಯೋ ಹಾಟ್‌ಸ್ಟಾರ್ 28ನೇ ಜನವರಿ 2026 ರಿಂದ ಜಾರಿಗೆ ಬಂದಿದೆ ಬರುವಂತೆ ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ. ಗ್ರಾಹಕರಿಗೆ ಅನುಕೂಲಕ್ಕಾಗಿ ಪ್ರತಿ ತಿಂಗಳು ಹಣವನ್ನು ಪಾವತಿಸುವ ಮಾಸಿಕ ಬಿಲ್ಲಿಂಗ್ ಆಯ್ಕೆಯನ್ನು ಈ ಬಾರಿ ಹೆಚ್ಚಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಇದರಿಂದ ಸಾಮಾನ್ಯ ಜನರಿಗೂ ಸಿನಿಮಾ ಮತ್ತು ಕ್ರೀಡೆಗಳನ್ನು ನೋಡುವುದು ಮತ್ತಷ್ಟು ಸುಲಭವಾಗಿದೆ.

Jio Hotstar Plans: ಹೊಸ ಬೆಲೆ ಪಟ್ಟಿ ಮತ್ತು ತಿಂಗಳ ಪಾವತಿ ಸೌಲಭ್ಯ:

ಈ ಹೊಸ 2026 ವರ್ಷದಲ್ಲಿನ ಪ್ಲಾನ್‌ ಪ್ರಮುಖ ಬದಲಾವಣೆಗಳೆಂದರೆ ಪ್ರತಿ ತಿಂಗಳ ಚಂದಾದಾರಿಕೆ. ಸ್ಮಾರ್ಟ್‌ಫೋನ್‌ನಲ್ಲಿ ಸಿನಿಮಾ ನೋಡುವವರಿಗೆ ಕೇವಲ ₹79ಕ್ಕೆ ‘ಮೊಬೈಲ್ ಪ್ಲಾನ್’ ಲಭ್ಯವಿದೆ. ಇನ್ನು ಎರಡು ಸಾಧನಗಳಲ್ಲಿ ಬಳಸಬಹುದಾದ ‘ಸೂಪರ್ ಪ್ಲಾನ್’ ತಿಂಗಳಿಗೆ ₹149 ಆಗಿದ್ದರೆ 4K ಕ್ವಾಲಿಟಿಯಲ್ಲಿ ನಾಲ್ಕು ಸಾಧನಗಳಲ್ಲಿ ಬಳಸುವ ‘ಪ್ರೀಮಿಯಂ ಪ್ಲಾನ್’ ತಿಂಗಳಿಗೆ ₹299 ರಿಂದ ಆರಂಭವಾಗುತ್ತದೆ. ವಾರ್ಷಿಕ ಯೋಜನೆಗಳ ವಿಚಾರಕ್ಕೆ ಬಂದರೆ ಮೊಬೈಲ್ ಯೋಜನೆ ₹499 ರಲ್ಲೇ ಮುಂದುವರಿದಿದೆ. ಆದರೆ ಪ್ರೀಮಿಯಂ ವಾರ್ಷಿಕ ಯೋಜನೆ ಬೆಲೆಯು ₹1,499 ರಿಂದ ₹2,199 ಕ್ಕೆ ಏರಿಕೆಯಾಗಿದೆ. ಇದು ಉತ್ತಮ ಗುಣಮಟ್ಟದ 4K ವಿಡಿಯೋ ಮತ್ತು ಹೊಸ ತಂತ್ರಜ್ಞಾನದ ಸೌಲಭ್ಯವನ್ನು ಒಳಗೊಂಡಿದೆ.

Also Read: Air Conditioner Deals: ಅಮೆಜಾನ್‌ನಲ್ಲಿ ಇಂದು ಕೈಗೆಟಕುವ ಬೆಲೆಗೆ ಅತ್ಯುತ್ತಮ ಏರ್ ಕಂಡೀಷನರ್ಗಳ ಭರ್ಜರಿ ಮಾರಾಟವಾಗುತ್ತಿದೆ!

ಹಾಲಿವುಡ್ ಕಾಂಟೆಂಟ್ ಮತ್ತು ಹೊಸ ಆಡ್-ಆನ್ ಸೌಲಭ್ಯಗಳು:

ಜಿಯೋ ಹಾಟ್‌ಸ್ಟಾರ್ ತನ್ನ ಅಂತರಾಷ್ಟ್ರೀಯ ಸಿನಿಮಾಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇನ್ನು ಮುಂದೆ ‘ಸೂಪರ್’ ಮತ್ತು ‘ಪ್ರೀಮಿಯಂ’ ಪ್ಲಾನ್ ತೆಗೆದುಕೊಳ್ಳುವವರಿಗೆ ಹಾಲಿವುಡ್ ಸಿನಿಮಾಗಳು ಮತ್ತು ಕಾರ್ಯಕ್ರಮಗಳು ಉಚಿತವಾಗಿ ಸಿಗಲಿವೆ. ಆದರೆ ಮೊಬೈಲ್ ಪ್ಲಾನ್ ಬಳಕೆದಾರರಿಗೆ ಕೇವಲ ಭಾರತೀಯ ಸಿನಿಮಾಗಳು ಮಾತ್ರ ಲಭ್ಯವಿರುತ್ತವೆ. ಅವರಿಗೆ ಹಾಲಿವುಡ್ ಸಿನಿಮಾಗಳು ಬೇಕಿದ್ದಲ್ಲಿ ಪ್ರತ್ಯೇಕವಾಗಿ ‘ಹಾಲಿವುಡ್ ಆಡ್-ಆನ್’ ಖರೀದಿಸಬಹುದು. ಇದರ ಬೆಲೆ ತಿಂಗಳಿಗೆ ₹49 ಮೂರು ತಿಂಗಳಿಗೆ ₹129 ಮತ್ತು ವರ್ಷಕ್ಕೆ ₹399 ಎಂದು ನಿಗದಿಪಡಿಸಲಾಗಿದೆ. ಈ ಗ್ರಾಹಕರು ತಮಗೆ ಬೇಕಾದ ಭಾಷೆಯ ಸಿನಿಮಾಗಳನ್ನು ಮಾತ್ರ ಆರಿಸಿಕೊಳ್ಳುವ ಅವಕಾಶ ಸಿಗಲಿದೆ.

ಹಳೆಯ ಗ್ರಾಹಕರ ವಿಶೇಷ ರಿಯಾಯಿತಿ ಮತ್ತು ಸ್ಮಾರ್ಟ್ ಟಿವಿ ಮೇಲೆ ಗಮನ:

ಇತ್ತೀಚಿನ ದಿನಗಳಲ್ಲಿ ಜನರು ಮೊಬೈಲ್ ಬಿಟ್ಟು ಸ್ಮಾರ್ಟ್ ಟಿವಿಗಳಲ್ಲಿ (Smart TV) ಸಿನಿಮಾ ನೋಡುವುದನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಜಿಯೋ ಹಾಟ್‌ಸ್ಟಾರ್ ತನ್ನ ಸೂಪರ್ ಮತ್ತು ಪ್ರೀಮಿಯಂ ಪ್ಲಾನ್‌ಗಳನ್ನು ವಿನ್ಯಾಸಗೊಳಿಸಿದೆ. ಮುಖ್ಯವಾದ ವಿಷಯವೆಂದರೆ ಈ ಹಿಂದೆಯೇ ಸಬ್‌ಸ್ಕ್ರಿಪ್ಷನ್ ಹೊಂದಿರುವ ಹಳೆಯ ಗ್ರಾಹಕರು ಯಾವುದೇ ಬೆಲೆ ಏರಿಕೆ ಇರುವುದಿಲ್ಲ. ಅವರು ತಮ್ಮ ಹಳೆಯ ಕಡಿಮೆ ಬೆಲೆಯಲ್ಲೇ ಮುಂದುವರಿಯಬಹುದು ಆದರೆ ಅವರ ಅಕೌಂಟ್‌ನಲ್ಲಿ ಸ್ವಯಂ-ನವೀಕರಣ ಚಾಲ್ತಿಯಲ್ಲಿರಬೇಕು. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಕಂಪನಿಗಳಿಗೆ ಪೈಪೋಟಿ ನೀಡಲು ಜಿಯೋ ಈ ಹೊಸದನ್ನು ಇರಿಸಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :