Jio ಟೆಲಿಕಾಂನ ಈ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಜೊತೆಗೆ ಜಿಯೋ ಹಾಟ್‌ಸ್ಟಾರ್ ಸಹ ಲಭ್ಯ
ಜಿಯೋ ಸಂಸ್ಥೆಯ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ
ಜಿಯೋ ಟೆಲಿಕಾಂನ 949 ರೂ.ಗಳ ಪ್ಲಾನ್‌ನಲ್ಲಿ 84 ದಿನಗಳ ವ್ಯಾಲಿಡಿಟಿ
ಜಿಯೋ ಟೆಲಿಕಾಂನ ಈ ಯೋಜನೆಯಲ್ಲಿ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ
ರಿಲಾಯನ್ಸ್ Jio ತನ್ನ ಬಳಕೆದಾರರಿಗಾಗಿ ಭಿನ್ನ ಬೆಲೆ ಶ್ರೇಣಿಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ದೈನಂದಿನ ಡೇಟಾ, ದೀರ್ಘಾವಧಿಯ ವ್ಯಾಲಿಡಿಟಿ ಹಾಗೂ ಓಟಿಟಿ ಸೌಲಭ್ಯಗಳನ್ನು ಒಳಗೊಂಡ ಈ ಯೋಜನೆಗಳ ಮೂಲಕ ಜಿಯೋ ಮತ್ತು ವಿ ಟೆಲಿಕಾಂ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಜಿಯೋ ಟೆಲಿಕಾಂನ ಜನಪ್ರಿಯ ಪ್ರೀಪೇಯ್ಡ್ ಪ್ಲಾನ್‌ಗಳಲ್ಲಿ 949 ರೂ.ಗಳ ರೀಚಾರ್ಜ್ ಯೋಜನೆ ವಿಶೇಷ ಗಮನ ಸೆಳೆದಿದೆ. ಈ ಪ್ಲಾನ್‌ನಲ್ಲಿ ಪ್ರತಿದಿನ ಡೇಟಾ ಪ್ರಯೋಜನದ ಜೊತೆಗೆ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯುತ್ತದೆ. ಹಾಗಾದರೆ ಜಿಯೋ ಕಂಪನಿಯ 949 ರೂ.ಗಳ ರೀಚಾರ್ಜ್ ಯೋಜನೆಯ ಪ್ರಯೋಜನಗಳ ಬಗ್ಗೆ ಹಾಗೂ ಇನ್ನಿತರ ಜನಪ್ರಿಯ ಪ್ಲಾನ್‌ಗಳ ಬಗ್ಗೆ ಮುಂದೆ ತಿಳಿಯೋಣ.
SurveyAlso Read : 80W SUPERVOOC ಚಾರ್ಜರ್ ಒಳಗೊಂಡ Oppo Find X9s 5G ಈಗ ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯ!
Jio ಸಂಸ್ಥೆಯ 949 ರೂ.ಗಳ ಪ್ಲಾನ್ ಮಾಹಿತಿ
ಜಿಯೋ ಕಂಪನಿಯ 949 ರೂ.ಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 2GB Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಈ ಯೋಜನೆಯು ಜಿಯೋ ಹಾಟ್‌ಸ್ಟಾರ್ ಓಟಿಟಿ ಚಂದಾದಾರಿಕೆ ಪಡೆದುಕೊಂಡಿದೆ. ಹೀಗಾಗಿ ಬಜೆಟ್ ಬೆಲೆಯಲ್ಲಿ ಡೇಟಾ ಜೊತೆಗೆ ಓಟಿಟಿ ಬಯಸುವ ಗ್ರಾಹಕರಿಗೆ ಈ ಯೋಜನೆ ಆಕರ್ಷಕ ಎನಿಸಿದೆ.
ಜಿಯೋ ಟೆಲಿಕಾಂನ 999 ರೂ.ಗಳ ಯೋಜನೆ ಮಾಹಿತಿ
ಜಿಯೋ ಕಂಪನಿಯ 999 ರೂ.ಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 98 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 2GB Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಡೇಟಾ ಸೇವೆಯ ಜೊತೆಗೆ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲಾನ್ ಸೂಪರ್ ಎನ್ನಬಹುದು. ಈ ಯೋಜನೆಯು ಜಿಯೋ ಹಾಟ್‌ಸ್ಟಾರ್ ಓಟಿಟಿ ಚಂದಾದಾರಿಕೆ ಪಡೆದುಕೊಂಡಿದೆ.
ಜಿಯೋ ಟೆಲಿಕಾಂನ 899 ರೂ.ಗಳ ಯೋಜನೆ ಮಾಹಿತಿ
ಜಿಯೋ ಕಂಪನಿಯ 899 ರೂ.ಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 2GB Data (+20GB) ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಈ ಯೋಜನೆಯು ಜಿಯೋ ಹಾಟ್‌ಸ್ಟಾರ್ ಓಟಿಟಿ ಚಂದಾದಾರಿಕೆ ಪಡೆದುಕೊಂಡಿದೆ. ಡೇಟಾ ಸೇವೆಯ ಜೊತೆಗೆ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಯೋಜನೆ ಸೂಕ್ತ ಎನ್ನಬಹುದು.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
