Jio ಟೆಲಿಕಾಂನ 629 ರೂ.ಗಳ ಪ್ಲಾನಿನಲ್ಲಿ ಸಖತ್ ಪ್ರಯೋಜನ! ಓಟಿಟಿ, ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ

HIGHLIGHTS

ಜಿಯೋ ಸಂಸ್ಥೆಯ 629 ರೂ.ಗಳ ಪ್ಲಾನ್ ಆಕರ್ಷಕ ಎನಿಸಿದೆ

ಜಿಯೋ ಟೆಲಿಕಾಂನ ಈ ರೀಚಾರ್ಜ್‌ ಯೋಜನೆಗಳಲ್ಲಿ ಆಕರ್ಷಕ ವ್ಯಾಲಿಡಿಟಿ

ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲಾನ್‌ಗಳಲ್ಲಿ ಉಚಿತ ವಾಯ್ಸ್‌ ಕರೆ ಸೌಲಭ್ಯ

Jio ಟೆಲಿಕಾಂ ಸಹ ಕೆಲವು ಆಕರ್ಷಕ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ವಿ ಟೆಲಿಕಾಂ ಹಾಗೂ ಏರ್‌ಟೆಲ್‌ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಾ ಸಾಗಿದೆ. ಅಲ್ಲದೇ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಭಿನ್ನ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಆಯ್ಕೆಗಳನ್ನು ನೀಡಿದೆ. ಅದರಲ್ಲೂ ಕಂಪನಿಯ ಬಜೆಟ್ ಬೆಲೆಯಲ್ಲಿ ಹೆಚ್ಚಿನ ಡೇಟಾ ಅಥವಾ ದೀರ್ಘ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಕೆಲವು ಯೋಜನೆಗಳು ಹೆಚ್ಚು ಉಪಯುಕ್ತವಾಗಿವೆ. ಅಂತಹ ಯೋಜನೆಗಳ ಲಿಸ್ಟ್‌ನಲ್ಲಿ 629 ರೂ.ಗಳ ಪ್ರೀಪೇಯ್ಡ್‌ ಪ್ಲಾನ್‌ ಕೂಡ ಗಮನ ಸೆಳೆಯುತ್ತದೆ. ವಿಶೇಷವಾಗಿ ಹೆಚ್ಚಿನ ದೈನಂದಿನ ಡೇಟಾ ಅಗತ್ಯವಿರುವವರಿಗೆ ಈ ಪ್ಲಾನ್‌ ಆಸಕ್ತಿದಾಯಕ ಆಯ್ಕೆಯಾಗಬಹುದು. ಹಾಗಾದರೆ ಜಿಯೋ ಟೆಲಿಕಾಂನ 629 ರೂ.ಗಳ ಪ್ಲಾನ್‌ನಲ್ಲಿ ಲಭ್ಯವಿರುವ ಡೇಟಾ ಮತ್ತು ಇತರ ಪ್ರಯೋಜನಗಳ ಮಾಹಿತಿ ಮುಂದೆ ನೋಡೋಣ.

Also Read : ಫೀಚರ್‌ ಫೋನ್ ಬಳಕೆದಾರರಿಗೆ PhonePe ಗುಡ್‌ನ್ಯೂಸ್‌: ಇಂಟರ್ನೆಟ್‌ ಇಲ್ಲದೇ UPI ಪಾವತಿ

Jio 629 ರೂ.ಗಳ ಪ್ಲಾನ್‌ ಮಾಹಿತಿ

ಜಿಯೋ ಟೆಲಿಕಾಂನ 629 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುವುದು. ಇದರೊಂದಿಗೆ ಜಿಯೋ ಹಾಟ್‌ಸ್ಟಾರ್‌ ಸೇರಿದಂತೆ ಕೆಲವು ಓಟಿಟಿ ಚಂದಾದಾರಿಕೆ ಪ್ರಯೋಜನ ಸಹ ಸಿಗಲಿದೆ.

ಜಿಯೋ 859 ರೂ.ಗಳ ಪ್ಲಾನ್‌ ಮಾಹಿತಿ

ಜಿಯೋ ಟೆಲಿಕಾಂನ 859 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುವುದು. ಹಾಗೆಯೇ ಈ ಯೋಜನೆಯಲ್ಲಿ ಜಿಯೋ ಹಾಟ್‌ಸ್ಟಾರ್‌ ಸೇರಿದಂತೆ ಕೆಲವು ಓಟಿಟಿ ಚಂದಾದಾರಿಕೆ ಪ್ರಯೋಜನ ಸಹ ಸಿಗಲಿದೆ.

ಜಿಯೋ ಸಂಸ್ಥೆಯ 949 ರೂ.ಗಳ ಯೋಜನೆ

ಜಿಯೋ ಟೆಲಿಕಾಂನ 949 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುವುದು. ಹಾಗೆಯೇ ಈ ಯೋಜನೆಯಲ್ಲಿ ಜಿಯೋ ಹಾಟ್‌ಸ್ಟಾರ್‌ ಸೇರಿದಂತೆ ಕೆಲವು ಓಟಿಟಿ ಚಂದಾದಾರಿಕೆ ಪ್ರಯೋಜನ ಸಹ ಸಿಗಲಿದೆ.

ಜಿಯೋ ಸಂಸ್ಥೆಯ 749 ರೂ.ಗಳ ಯೋಜನೆ

ಜಿಯೋ ಟೆಲಿಕಾಂನ 749 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB (+20GB) ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 72 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುವುದು. ಇದರೊಂದಿಗೆ ಜಿಯೋ ಹಾಟ್‌ಸ್ಟಾರ್‌ ಸೇರಿದಂತೆ ಕೆಲವು ಓಟಿಟಿ ಚಂದಾದಾರಿಕೆ ಪ್ರಯೋಜನ ಸಹ ಸಿಗಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :