samsung galaxy m17 5G budget phone get price drop on Amazon deal
ದಸರಾ ಹಬ್ಬದ ಅಂಗವಾಗಿ ಅಮೆಜಾನ್ ತಾಣವು ಆಯೋಜಿಸಿರುವ Amazon Great Indian Festival Sale 2026 ಸೇಲ್ ಆನ್ಲೈನ್ ಶಾಪಿಂಗ್ ಪ್ರಿಯರ ಗಮನ ಸೆಳೆಯುತ್ತಿದೆ. ಈ ಮಾರಾಟದಲ್ಲಿ ಆಯ್ದ ಫೋನ್ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಿದ್ದು, ಆ ಪೈಕಿ Samsung Galaxy M17 5G ಮೊಬೈಲ್ ಗಮನಾರ್ಹ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್ಗಳ ಕೊಡುಗೆಗಳು ಹಾಗೂ ಎಕ್ಸ್ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್ ಆಕ್ಟಾ-ಕೋರ್ ಎಕ್ಸಿನೋಸ್ 1330 ಚಿಪ್ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಸ್ಮಾರ್ಟ್ಫೋನ್ 5,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ವೆಬ್ಸೈಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ M17 5G ಸ್ಮಾರ್ಟ್ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Samsung Galaxy F70 5G ಮೊಬೈಲ್ ಇದೀಗ ಖರೀದಿಗೆ ಲಭ್ಯ; ಬೆಲೆ ಹಾಗೂ ಫೀಚರ್ಸ್ ಗಮನಿಸಿ
ಬಜೆಟ್ ಬೆಲೆ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ M17 5G ಮೊಬೈಲ್ ಅಮೆಜಾನ್ ಇ ಕಾಮರ್ಸ್ ಪ್ಲಾಟ್ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್ 4GB + 128GB ಸ್ಟೋರೇಜ್ ವೇರಿಯಂಟ್ ಬೆಲೆ 27,999 ರೂ.ಗಳು ಆಗಿದ್ದು, ಆದರೆ ಆಫರ್ನಲ್ಲಿ ಪ್ರಸ್ತುತ ಈ ಮೊಬೈಲ್ 19,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಅನ್ನು ಗ್ರಾಹಕರು ಮೂನ್ಲೈಟ್ ಸಿಲ್ವರ್ ಮತ್ತು ಸಫೈರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದು. ಸ್ಯಾಮ್ಸಂಗ್ ಗ್ಯಾಲಕ್ಸಿ M17 5G ಸ್ಮಾರ್ಟ್ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ಸ್ಯಾಮ್ಸಂಗ್ ಗ್ಯಾಲಕ್ಸಿ M17 5G ಸ್ಮಾರ್ಟ್ಫೋನ್ 6.7 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ಪ್ಲೇಯನ್ನು 90Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಇದನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ನಿಂದ ರಕ್ಷಿಸಲಾಗಿದೆ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಹೊಂದಿದೆ. ಆಪ್ಟಿಕ್ಸ್ಗಾಗಿ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಒಳಗೊಂಡಿದೆ. ಇದು 50MP ಪ್ರೈಮರಿ ಸೆನ್ಸಾರ್ನೊಂದಿಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 5MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸರ್ನೊಂದಿಗೆ ಹೊಂದಿದೆ ಜೊತೆಗೆ 13MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಇದು ಆಕ್ಟಾ-ಕೋರ್ ಎಕ್ಸಿನೋಸ್ 1330 ಚಿಪ್ಸೆಟ್ನಿಂದ ಚಾಲಿತವಾಗಿದ್ದು 8GB ವರೆಗೆ RAM ಮತ್ತು 128GB ವರೆಗೆ ಆಂತರೀಕ ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದಾಗಿದೆ. ಈ ಮೊಬೈಲ್ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಹೊಂದಿದ್ದು One UI 7 ನೊಂದಿಗೆ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಸರ್ಕಲ್ ಟು ಸರ್ಚ್ನಂತಹ AI ಸಾಮರ್ಥ್ಯಗಳಂತಹ ಸುಧಾರಿತ ಆಯ್ಕೆಗಳನ್ನು ಒಳಗೊಂಡಿದೆ.
Disclosure: This Article Contains Affiliate Links