Apple iPhone 16 price drop
ದಸರಾ ಹಬ್ಬದ ಅಂಗವಾಗಿ ದೈತ್ಯ ಇ ಕಾಮರ್ಸ್ ಅಮೆಜಾನ್ ಆಯೋಜಿಸಿರುವ Amazon Great Indian Festival Sale 2026 ಸೇಲ್ ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಮಾರಾಟದಲ್ಲಿ ಆಯ್ದ ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಿದ್ದು, ಆ ಪೈಕಿ ಆಪಲ್ ಕಂಪನಿಯ iPhone 16 ಮೊಬೈಲ್ ಗಮನಾರ್ಹ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್ iOS 18 ಆಪರೇಟಿಂಗ್ ಸಿಸ್ಟಮ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ 48MP ಮುಖ್ಯ ಕ್ಯಾಮೆರಾ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಆಪಲ್ ಐಫೋನ್ 16 ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Vivo ಕಂಪನಿಯ ಈ ಸ್ಟೈಲಿಶ್ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಜಬರ್ದಸ್ತ್ ಇಳಿಕೆ! ಟ್ರಿಪಲ್ ಕ್ಯಾಮೆರಾ ಸೌಲಭ್ಯ
ಪ್ರೀಮಿಯಂ ಬೆಲೆ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿರುವ ಐಫೋನ್ 16 ಮೊಬೈಲ್ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್ 128GB ಸ್ಟೋರೇಜ್ ವೇರಿಯಂಟ್ ಬೆಲೆ 89,900 ರೂ.ಗಳು ಆಗಿದ್ದು, ಆದರೆ ಆಫರ್‌ನಲ್ಲಿ ಪ್ರಸ್ತುತ ಈ ಮೊಬೈಲ್ 76,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಅನ್ನು ಗ್ರಾಹಕರು ಬ್ಲ್ಯಾಕ್, ಪಿಂಕ್, ಟೇಲ್, ಅಲ್ಟ್ರಾ ಮರಿನಾ ಹಾಗೂ ವೈಟ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದು. ಐಫೋನ್ 16 ಸ್ಮಾರ್ಟ್‌ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ಐಫೋನ್ 16 ಮೊಬೈಲ್ ಸಂಸ್ಥೆಯ A18 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು ಇದು ಆಪಲ್‌ನ ಇಂಟೆಲಿಜೆನ್ಸ್ ಫೀಚರ್ಸ್‌ಗಳ ಸಂಪೂರ್ಣ ಸೂಟ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಫೋನ್ 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಅನ್ನು ಹೊಂದಿದೆ. ಫೋಟೋಗ್ರಫಿಗಾಗಿ ಇದು 12MP ಅಲ್ಟ್ರಾವೈಡ್ ಲೆನ್ಸ್ ಜೊತೆಗೆ ಜೋಡಿಸಲಾದ 48MP ಮುಖ್ಯ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರುವ ಜೊತೆಗೆ 12MP ಅಲ್ಟ್ರಾ-ವೈಡ್ ಸೆನ್ಸಾರ್ ಕ್ಯಾಮೆರಾ ಸಹ ಇದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 12MP ಕ್ಯಾಮೆರಾ ರಚನೆ ಪಡೆದುಕೊಂಡಿದೆ.
iPhone 16 ಮೊಬೈಲ್ iOS 18 ಆಪರೇಟಿಂಗ್ ಸಿಸ್ಟಮ್ ಅನ್ನು ಪಡೆದಿದೆ. ಇದರೊಂದಿಗೆ 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಆಯ್ಕೆಗಳನ್ನು ಪಡೆದುಕೊಂಡಿದೆ. ಅಲ್ಲದೇ Face ID, Emergency SOS ಹಾಗೂ Find My via satellite ನಂತಹ ಅಗತ್ಯ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ IP68 ರೇಟಿಂಗ್ ಅನ್ನು ಪಡೆದಿದ್ದು ಇದು ಬ್ಲ್ಯಾಕ್, ಪಿಂಕ್, ಟೇಲ್, ವೈಟ್ ಹಾಗೂ ಅಲ್ಟ್ರಾ ಮರಿನಾ ಕಲರ್ ಆಯ್ಕೆಗಳಲ್ಲಿ ಲಭ್ಯ ಇದೆ.
Disclosure: This Article Contains Affiliate Links