ಮೊಬೈಲ್‌ನಲ್ಲಿ OTT ಕಾರ್ಯಕ್ರಮಗಳನ್ನು ವೀಕ್ಷಿಸುವ ಗ್ರಾಹಕರಿಗೆ Jio ಟೆಲಿಕಾಂನ ಈ ಅಗ್ಗದ ಪ್ಲಾನ್ ಬೆಸ್ಟ್‌!

HIGHLIGHTS

ಜಿಯೋ ಟೆಲಿಕಾಂನ ಈ ಪ್ಲಾನ್‌ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಪಡೆದಿದೆ

ಜಿಯೋ 500 ರೂ.ಗಳ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ

ಜಿಯೋ ಟೆಲಿಕಾಂನ ಈ ಪ್ಲಾನ್‌ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ನೀಡುತ್ತದೆ

ಮೊಬೈಲ್‌ನಲ್ಲಿ OTT ಕಾರ್ಯಕ್ರಮಗಳನ್ನು ವೀಕ್ಷಿಸುವ ಗ್ರಾಹಕರಿಗೆ Jio ಟೆಲಿಕಾಂನ ಈ ಅಗ್ಗದ ಪ್ಲಾನ್ ಬೆಸ್ಟ್‌!

ಲೀಡಿಂಗ್ ಟೆಲಿಕಾಂ ಎನಿಸಿರುವ ರಿಲಾಯನ್ಸ್‌ Jio ಮಾರುಕಟ್ಟೆಯಲ್ಲಿ ವಿ ಹಾಗೂ ಏರ್‌ಟೆಲ್‌ ಕಂಪನಿಗಳಿಗೆ ಪೈಪೋಟಿ ನೀಡುತ್ತಾ ಸಾಗಿದೆ. ಜಿಯೋ ಟೆಲಿಕಾಂ ಭಿನ್ನ ಬೆಲೆಯಲ್ಲಿ ಹಲವು ರೀಚಾರ್ಜ್‌ ಯೋಜನೆಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಆಪ್ತ ಎನಿಸಿದೆ. ಇನ್ನು ಸಂಸ್ಥೆಯ ಕೆಲವು ಯೋಜನೆಗಳು ಅಗ್ಗದ ದರದಲ್ಲಿ ಗಮನ ಸೆಳೆದಿದ್ದರೆ ಮತ್ತೆ ಕೆಲವು ಪ್ಲಾನ್‌ಗಳು ಆಕರ್ಷಕ ಪ್ರಯೋಜನಗಳ ಮೂಲಕ ಸದ್ದು ಮಾಡಿವೆ. ಆ ಪೈಕಿ ಜಿಯೋ ಟೆಲಿಕಾಂನ 500 ರೂ.ಗಳ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿದೆ. ಈ ಬಜೆಟ್ ಬೆಲೆಯ ಯೋಜನೆಯು ದೈನಂದಿನ ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ OTT ಚಂದಾದಾರಿಕೆಯ ಪ್ರಯೋಜನ ಸಹ ಪಡೆದುಕೊಂಡಿದೆ. ಹೆಚ್ಚುವರಿಯಾಗಿ ಓಟಿಟಿ ಪ್ರಯೋಜನ ಸಹ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 500 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಗ್ರಾಹಕರ ಗಮನ ಸೆಳೆದಿರುವ OPPO K13x 5G ಮೊಬೈಲ್‌ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ!

Jio ಟೆಲಿಕಾಂನ 500 ರೂ.ಗಳ ಪ್ಲಾನ್ ಮಾಹಿತಿ

ಜಿಯೋ ಟೆಲಿಕಾಂನ 500 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 56GB Data ಸೌಲಭ್ಯ ದೊರೆಯುತ್ತದೆ. ಅಂದಹಾಗೆ ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಪ್ಲಾನಿನಲ್ಲಿ JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯ.

Jio

ಅಧಿಕ OTT ಚಂದಾದಾರಿಕೆ ಸೌಲಭ್ಯ

ಜಿಯೋದ ಈ ಯೋಜನೆಯಲ್ಲಿ ಗ್ರಾಹಕರಿಗೆ 12ಕ್ಕೂ ಅಧಿಕ ಓಟಿಟಿ ಚಂದಾದಾರಿಕೆಯ ಸೌಲಭ್ಯ ದೊರೆಯುತ್ತದೆ. ಅಂದಹಾಗೆ ಈ ಪ್ಲಾನಿನಲ್ಲಿ YouTube Premium, Prime Video Mobile, JioHotstar, Sony LIV, ZEE5, Lionsgate Play, Discovery+, Sun NXT, Kanchha Lannka, Planet Marathi, Chaupal, Hoichoi, FanCode, JioTV ಹಾಗೂ JioAICloud ಓಟಿಟಿ ಸೌಲಭ್ಯ ಸಿಗಲಿದೆ.

ಜಿಯೋದ ಇತರೆ ಆಕರ್ಷಕ ಪ್ಲಾನ್‌ಗಳ ಮಾಹಿತಿ

ಜಿಯೋ ಸಂಸ್ಥೆಯ 899 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಹಾಗೂ 20GB ಹೆಚ್ಚುವರಿ ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 200 GB Data ಸೌಲಭ್ಯ ದೊರೆಯುತ್ತದೆ. ಅಂದಹಾಗೆ ಈ ಯೋಜನೆಯು 90 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಪ್ಲಾನಿನಲ್ಲಿ JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo