ಜನಪ್ರಿಯ ಟೆಲಿಕಾಂ ಎಂದೇ ಬಿಂಬಿತವಾಗಿರುವ Jio ಕಂಪನಿಯು ಭಿನ್ನ ಪ್ರೀಪೇಯ್ಡ್ ಯೋಜನೆಗಳ ಪಟ್ಟಿಯನ್ನು ಒಳಗೊಂಡಿದೆ. ಅದೇ ರೀತಿ ಜಿಯೋ ಬಳಕೆದಾರರಿಗಾಗಿ ಕೆಲವು ಅಗ್ಗದ ಬೆಲೆಯ ಯೋಜನೆಗಳ ಆಯ್ಕೆ ಸಹ ನೀಡಿದೆ. ಆ ಪೈಕಿ ಜಿಯೋ ಟೆಲಿಕಾಂನ 355 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಕಡಿಮೆ ದರದಲ್ಲಿ ಆಕರ್ಷಕ ಪ್ಲಾನ್ ಆಗಿ ಕಾಣಿಸಿಕೊಂಡಿದೆ. ಈ ಯೋಜನೆಯು ಜಿಯೋ ಫ್ರೀಡಂ ಪ್ಲಾನ್ ಆಗಿದೆ. ಅಂದಹಾಗೆ ಈ ಪ್ರೀಪೇಯ್ಡ್ ಯೋಜನೆಯು ಒಟ್ಟು 25GB ಡೇಟಾ ಪ್ರಯೋಜನದ ಜೊತೆಗೆ 30 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 355 ರೂ.ಗಳ ರೀಚಾರ್ಜ್ ಯೋಜನೆಯ ಹಾಗೂ ಇತರೆ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.
Also Read : ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್: ಹೊಸ 5.2.4 True Dolby Atmos ಸೌಂಡ್‌ಬಾರ್ ಮೇಲೆ ಭರ್ಜರಿ ಡೀಲ್.!
ಜಿಯೋ ಕಂಪನಿಯ 355 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಯೋಜನೆಯು ಜಿಯೋ ಫ್ರೀಡಂ ಪ್ಲಾನ್ ಆಗಿದ್ದು, ಒಟ್ಟು 25GB ಡೇಟಾ ಪ್ರಯೋಜನ ಲಭ್ಯ ಸಿಗಲಿದೆ. ಅಲ್ಲದೇ ಈ ಪ್ರಿಪೇಯ್ಡ್ ಪ್ಲಾನಿನಲ್ಲಿ ವಾಯ್ಸ್ ಕರೆಯ ಸೌಲಭ್ಯ ಹಾಗೂ ಪ್ರಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಈ ಯೋಜನೆಯಲ್ಲಿ JioTV ಹಾಗೂ JioAICloud ಚಂದಾದಾರಿಕೆ ಲಭ್ಯ.
ಜಿಯೋ ಟೆಲಿಕಾಂನ 329 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಸಿಗಲಿದ್ದು, ಒಟ್ಟು ವ್ಯಾಲಿಡಿಟಿಗೆ 42GB ಡೇಟಾ ಪ್ರಯೋಜನ ಲಭ್ಯ ಸಿಗಲಿದೆ. ಅಲ್ಲದೇ ಈ ಪ್ರಿಪೇಯ್ಡ್ ಪ್ಲಾನಿನಲ್ಲಿ ವಾಯ್ಸ್ ಕರೆಯ ಸೌಲಭ್ಯ ಹಾಗೂ ಪ್ರಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಈ ಯೋಜನೆಯಲ್ಲಿ JioSaavn Pro, JioTV ಹಾಗೂ JioAICloud ಚಂದಾದಾರಿಕೆ ಲಭ್ಯ.
ಜಿಯೋ ಕಂಪನಿಯ 319 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಸಿಗಲಿದೆ. ಅಲ್ಲದೇ ಈ ಪ್ರಿಪೇಯ್ಡ್ ಪ್ಲಾನಿನಲ್ಲಿ ವಾಯ್ಸ್ ಕರೆಯ ಸೌಲಭ್ಯ ಹಾಗೂ ಪ್ರಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಈ ಪ್ರೀಪೇಯ್ಡ್ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ JioTV ಹಾಗೂ JioAICloud ಚಂದಾದಾರಿಕೆ ಲಭ್ಯ.
ಜಿಯೋ ಸಂಸ್ಥೆಯ 299 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಲಭ್ಯ. ಈ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಸಿಗಲಿದ್ದು, ಒಟ್ಟು ವ್ಯಾಲಿಡಿಟಿಗೆ 42GB ಡೇಟಾ ಪ್ರಯೋಜನ ಲಭ್ಯ ಸಿಗಲಿದೆ. ಅಲ್ಲದೇ ಈ ಪ್ರಿಪೇಯ್ಡ್ ಪ್ಲಾನಿನಲ್ಲಿ ವಾಯ್ಸ್ ಕರೆಯ ಸೌಲಭ್ಯ ಹಾಗೂ ಪ್ರಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಈ ಯೋಜನೆಯಲ್ಲಿ JioSaavn Pro, JioTV ಹಾಗೂ JioAICloud ಚಂದಾದಾರಿಕೆ ಲಭ್ಯ.