Jio Prime Membership ಮತ್ತೆ ಪ್ರಾರಂಭ; ಕ್ಯಾಶ್‌ಬ್ಯಾಕ್ ಸೇರಿ ಸಿಗಲಿವೆ ಹಲವು ಪ್ರಯೋಜನಗಳು

HIGHLIGHTS

ಜಿಯೋ ಕಂಪನಿಯಂದ ಜಿಯೋ ಪ್ರೈಮ್ ಸದಸ್ಯತ್ವ ಯೋಜನೆ ಮರು ಚಾಲನೆ

ಜಿಯೋ ಪ್ರೈಮ್ ಸದಸ್ಯತ್ವದಲ್ಲಿ ಆಕರ್ಷಕ ಕ್ಯಾಶ್ ಬ್ಯಾಕ್ ವೋಚರ್ ಗಳು ಲಭ್ಯ

ಮೈಜಿಯೋ ಆಪ್‌, ಜಿಯೋ ವೆಬ್‌ಸೈಟ್‌, ಜಿಯೋ ಸ್ಟೋರ್ಸ್ ಮೂಲಕ ಸದಸ್ಯತ್ವ ಪಡೆಯಬಹುದು

Jio Prime Membership ಮತ್ತೆ ಪ್ರಾರಂಭ; ಕ್ಯಾಶ್‌ಬ್ಯಾಕ್ ಸೇರಿ ಸಿಗಲಿವೆ ಹಲವು ಪ್ರಯೋಜನಗಳು

ಜಿಯೋದ ಮೊದಲ 100 ಮಿಲಿಯನ್ ಗ್ರಾಹಕರಿಗೆ ಕೃತಜ್ಞತೆಯ ಸೂಚಕವಾಗಿ (Jio Prime membership) ಜಿಯೋ ಪ್ರೈಮ್ ಸದಸ್ಯತ್ವ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೋ ಕುಟುಂಬಕ್ಕೆ ಬೆಲೆ ಖಾತರಿ ಮತ್ತು ಹೆಚ್ಚುವರಿ ಪ್ರಯೋಜನಗಳ ಭರವಸೆಯನ್ನು ಒದಗಿಸಲು ಜಿಯೋ ಪ್ರೈಮ್ ಅನ್ನು ಮತ್ತೆ ಪರಿಚಯಿಸಲಾಗಿದೆ. ಒಂದು ವರ್ಷದ ಬೆಲೆ ಖಾತರಿ ಸಿಗಲಿದೆ. ಜಿಯೋ ಪ್ರೈಮ್ ಭವಿಷ್ಯಕ್ಕಾಗಿ ಹೆಚ್ಚುವರಿ ಬೆಲೆ ನಿಶ್ಚಿತತೆಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ಗ್ರಾಹಕರು ತಮ್ಮ ಆದ್ಯತೆಯ ಅರ್ಹ ಜಿಯೋ ಯೋಜನೆಗಳನ್ನು ಇಂದಿನ ಬೆಲೆಗಳಲ್ಲಿ ರೀಚಾರ್ಜ್ ಮಾಡಿದರೆ ಒಂದು ವರ್ಷದ ವರೆಗೆ ಅಂದರೆ 5 ಸೆಪ್ಟೆಂಬರ್ 2027 ರ ವರೆಗೆ ಯಾವುದೇ ಭವಿಷ್ಯದ ಬೆಲೆ ಪರಿಷ್ಕರಣೆ ಅನ್ವಯಿಸುವುದಿಲ್ಲ.

Digit.in Survey
✅ Thank you for completing the survey!

Also Read : Jio ಟೆಲಿಕಾಂನ ಈ ಅಗ್ಗದ ರೀಚಾರ್ಜ್‌ನಲ್ಲಿ ಪ್ರತಿದಿನ ಡೇಟಾ ಸೌಲಭ್ಯ ಜೊತೆಗೆ JioHotstar

Jio Prime membership: ಹೆಚ್ಚುವರಿ ಪ್ರಯೋಜನಗಳು

ಜಿಯೋ ಪ್ರೈಮ್ ಹಲವಾರು ವಿಶೇಷ ಸದಸ್ಯತ್ವ ಪ್ರಯೋಜನಗಳನ್ನು ನೀಡುತ್ತದೆ.

– 600 ರೂ.ಗಳ ಮೌಲ್ಯದ ಕ್ಯಾಶ್ ಬ್ಯಾಕ್ ವೋಚರ್ ಗಳು

– ಹೊಸ ಜಿಯೋಹೋಮ್ ಅಥವಾ ಜಿಯೋಪಿಸಿ ಸಂಪರ್ಕದಲ್ಲಿ 300 ರೂ.ಗಳ ಕ್ಯಾಶ್ ಬ್ಯಾಕ್ ವೋಚರ್ ಅನ್ನು ರಿಡೀಮ್ ಮಾಡಬಹುದು

– ಸ್ನೇಹಿತರು ಅಥವಾ ಕುಟುಂಬಕ್ಕಾಗಿ ಹೊಸ ಜಿಯೋ ಸಿಮ್ ಸಂಪರ್ಕವನ್ನು ಸೇರಿಸಲು 300 ರೂ.ಗಳ ಕ್ಯಾಶ್ ಬ್ಯಾಕ್ ವೋಚರ್

– ಹೊಸ ಜಿಯೋ ಉತ್ಪನ್ನಗಳು, ಸೇವೆಗಳು ಮತ್ತು ಪ್ರಯೋಗಗಳಿಗೆ ಆರಂಭಿಕ ಪ್ರವೇಶ

Jio Prime
Jio

ಎಲ್ಲ ಜಿಯೋ ಗ್ರಾಹಕರಿಗೂ ಲಭ್ಯ

ಜಿಯೋ ಪ್ರೈಮ್ ಅಸ್ತಿತ್ವದಲ್ಲಿರುವ ಎಲ್ಲಾ ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಕೇವಲ 300 ರೂ.ಗಳ ಸೇರ್ಪಡೆ ಶುಲ್ಕಕ್ಕೆ ಲಭ್ಯವಿದೆ. ಇತರ ನೆಟ್ವರ್ಕ್‌ಗಳಲ್ಲಿನ ಗ್ರಾಹಕರು ಜಿಯೋಗೆ ಪೋರ್ಟ್ ಮಾಡುವ ಮೂಲಕ ಅಥವಾ ಹೊಸ ಜಿಯೋ ಸಂಪರ್ಕವನ್ನು ಸಕ್ರಿಯಗೊಳಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು. ಗ್ರಾಹಕರು ಮೈ ಜಿಯೋ ಆಪ್‌, Jio.com, ಜಿಯೋ ಸ್ಟೋರ್ಸ್ ಮತ್ತು ಜಿಯೋ ಪಾರ್ಟ್ನರ್ ಸ್ಟೋರ್‌ಗಳ ಮೂಲಕ ಸದಸ್ಯತ್ವ ಪಡೆಯಬಹುದು.

ಜಿಯೋ ಪ್ರೈಮ್ ಸದಸ್ಯತ್ವ – ಮಾಹಿತಿ

– ಪ್ರೋಗ್ರಾಂ: ಜಿಯೋ ಪ್ರೈಮ್ – ಜಿಯೋಗೆ 10 ವರ್ಷಗಳು

– ಸದಸ್ಯತ್ವ: 300 ರೂ.ಗಳು ಒಂದು ಬಾರಿ ಶುಲ್ಕ

– ಬೆಲೆ ಖಾತರಿ: ಇಂದಿನ ಬೆಲೆಯಲ್ಲಿ ನಿಮ್ಮ ನೆಚ್ಚಿನ ಜಿಯೋ ಯೋಜನೆಯೊಂದಿಗೆ ರೀಚಾರ್ಜ್ ಮಾಡುವುದನ್ನು 5 ಸೆಪ್ಟೆಂಬರ್ 2027 ರ ವರೆಗೆ ಮುಂದುವರಿಸಿ

– ಕ್ಯಾಶ್ ಬ್ಯಾಕ್ ಆಫರ್: 300 ರೂ.ಗಳ ಜಿಯೋಹೋಮ್ ಅಥವಾ ಜಿಯೋಪಿಸಿ ವೋಚರ್ + 300 ರೂ.ಗಳ ಜಿಯೋ ಸಿಮ್ ವೋಚರ್

– ವಿಶೇಷ ಸವಲತ್ತುಗಳು: ಆದ್ಯತೆಯ ಗ್ರಾಹಕ ಬೆಂಬಲ. ಜಿಯೋ ಉತ್ಪನ್ನಗಳು, ಸೇವೆಗಳು ಮತ್ತು ಪ್ರಯೋಗಗಳಿಗೆ ಆರಂಭಿಕ ಪ್ರವೇಶ

– ಯಾರು ಸೇರಬಹುದು: ಅಸ್ತಿತ್ವದಲ್ಲಿರುವ ಮತ್ತು ಹೊಸ ಜಿಯೋ ಗ್ರಾಹಕರು ಸೇರಬಹುದು

– ಸೇರುವುದು ಹೇಗೆ?: ಮೈಜಿಯೋ ಆಪ್‌, Jio.com, ಜಿಯೋ ಸ್ಟೋರ್ ಗಳು ಮತ್ತು ಅಧಿಕೃತ ಜಿಯೋ ಪಾಲುದಾರ ಸ್ಟೋರ್ ಗಳ ಮೂಲಕ ಸದಸ್ಯತ್ವ ಪಡೆಯಬಹುದು

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile