Reliance Jio Annual Plans 2025
ಪ್ರಸ್ತುತ ವರ್ಷ ಕೊನೆಗೊಳ್ಳಲು ಕೆಲವೇ ದಿನಗಳು ಉಳಿದಿದ್ದು ನಿಮಗೊಂದು ಹೊಸ ಮತ್ತು ದೀರ್ಘಾವಧಿಯ ವ್ಯಾಲಿಡಿಟಿಯನ್ನು ಕಡಿಮೆ ಬೆಲೆಗೆ ಹೆಚ್ಚಿನ ಪ್ರಯೋಜನಗಳೊಂದಿಗೆ ಬರುವ ರಿಲಯನ್ಸ್ ಜಿಯೋದ (Reliance Jio) ಯೋಜನೆಯನ್ನು ಹುಡುಕುತ್ತಿದ್ದರೆ ಹೆಚ್ಚು ಗೊಂದಲಕ್ಕೆ ಜಾಗ ನೀಡದೆ ನೇರವಾಗಿ ಈ ಕೆಳಗಿನ ಮೂರು ಯೋಜನೆಗಳಲ್ಲಿ ಒಂದನ್ನು ನಿಮಗೆ ಅನುಗುಣವಾಗಿ ಆರಿಸಬಹುದು. ಯಾಕೆಂದರೆ ಮುಂದಿನ ವರ್ಷ ಈ ಯೋಜನೆಗಳ ಬೆಲೆ ಏರುವ ಅನೇಕ ಲಕ್ಷಣಗಳು ಕಂಡು ಬರುತ್ತಿವೆ. ಬಾಕಿ ನಿಮ್ಮ ಯೋಚನೆ ಮತ್ತು ಅಗತ್ಯಗಳಿಗೆ ಬಿಟ್ಟಿದೆ. ಪ್ರಸ್ತುತ ಜಿಯೋಫೋನ್ ಹೊರೆತುಪಡಿಸಿ ಎಲ್ಲ ಬಳಕೆದಾದರಿಗೆ ಸಾಮಾನ್ಯವಾಗಿ ಈ ರೂ. 1748, ರೂ. 3599 ಮತ್ತು 3999 ರೂಗಳ ವಾರ್ಷಿಕ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಡೆಯಬಹುದು.
Also Read: ZEBRONICS ಅಮೆಜಾನ್‌ನಲ್ಲಿ ಇಂದು Dolby Audio Soundbar ಭರ್ಜರಿ ಡಿಸ್ಕೌಂಟ್‌ಗಳೊಂದಿಗೆ ಮಾರಾಟವಾಗುತ್ತಿದೆ
ಜಿಯೋದ 1748 ರೂ.ಗಳ ಪ್ಲಾನ್ ಕೇವಲ ವಾಯ್ಸ್ ಕರೆಗಳನ್ನು ಮಾತ್ರ ನೀಡುವ ಯೋಜನೆಯನ್ನು ಮೂಲ ವಾಯ್ಸ್ ಮತ್ತು SMS ಪ್ರಯೋಜನಗಳನ್ನು ಬಯಸುವ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯು 336 ದಿನಗಳ ಮಾನ್ಯತೆಯನ್ನು ನೀಡುತ್ತದೆ ಮತ್ತು ಅನಿಯಮಿತ ವಾಯ್ಸ್ ಕರೆಗಳು ಮತ್ತು 3600 SMS ಗಳನ್ನು ಒಳಗೊಂಡಿದೆ. ಜಿಯೋ ಚಂದಾದಾರಿಕೆಗಳಲ್ಲಿ ಜಿಯೋಟಿವಿ ಮತ್ತು ಜಿಯೋಎಐಕ್ಲೌಡ್ ಸೇರಿವೆ. ಅಂದರೆ ದಿನಕ್ಕೆ ಪರಿಣಾಮಕಾರಿ ಬೆಲೆ ರೂ 5.20 ರೂಗಳಾಗಿವೆ.
ಈ 365 ದಿನಗಳ ಯೋಜನೆಯ ಬೆಲೆ ರೂ. 3599 ಆಗಿದ್ದು ಅನಿಯಮಿತ ವಾಯ್ಸ್ ಕರೆಗಳು, ದಿನಕ್ಕೆ 2.5GB ಡೇಟಾ ಮತ್ತು ದಿನಕ್ಕೆ 100 SMS ಒಳಗೊಂಡಿದೆ. ಹೈ-ಸ್ಪೀಡ್ ಡೇಟಾ ಬಳಕೆಯ ನಂತರ ಅನಿಯಮಿತ ಡೇಟಾ 64 Kbps ನಲ್ಲಿ ಲಭ್ಯವಿದೆ. ಅರ್ಹ ಬಳಕೆದಾರರು ಅನಿಯಮಿತ 5G ಡೇಟಾವನ್ನು ಸಹ ಪಡೆಯುತ್ತಾರೆ. ಜಿಯೋ ಚಂದಾದಾರಿಕೆಗಳಲ್ಲಿ ಜಿಯೋ ಗೋಲ್ಡ್ ಮೇಲೆ ಶೇಕಡಾ 1 ರಷ್ಟು ಹೆಚ್ಚುವರಿ ಪಡೆಯಬಹುದು. ಹೊಸ ಸಂಪರ್ಕಗಳಿಗೆ 2 ತಿಂಗಳ ಉಚಿತ ಪ್ರಯೋಗ ಪಡೆಯಬಹುದು. ಅಲ್ಲದೆ 3 ತಿಂಗಳವರೆಗೆ ಉಚಿತ JioHotstar ಮೊಬೈಲ್ ಟಿವಿ ಚಂದಾದಾರಿಕೆ ಲಭ್ಯವಿದೆ. ಇದನ್ನು ಸ್ಟೋರ್ ಮಾಡಲು ಜಿಯೋ ಎಐ ಕ್ಲೌಡ್ ಉಚಿತ 50GB ಸ್ಟೋರೇಜ್ ನೀಡುತ್ತದೆ. ಅಲ್ಲದೆ ಗೂಗಲ್ ಜೆಮಿನಿ ಪ್ರೊ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಬಳಕೆದಾರರಿಗೆ ರೂ 35,100 ಮೌಲ್ಯದ 18 ತಿಂಗಳ ಪ್ರೊ ಯೋಜನೆದೊಂದಿಗೆ ದಿನಕ್ಕೆ ಪರಿಣಾಮಕಾರಿ ಬೆಲೆ ರೂ 9.86 ರೂಗಳಾಗಿವೆ.
3999 ರೂ. ಯೋಜನೆಯು ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 2.5GB ಡೇಟಾ (ಒಟ್ಟು 912.5GB) ಮತ್ತು 365 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 100 SMS ನೀಡುತ್ತದೆ. ಹೆಚ್ಚಿನ ವೇಗದ ಡೇಟಾ ಬಳಕೆಯ ನಂತರ ಅನಿಯಮಿತ ಡೇಟಾ 64 Kbps ನಲ್ಲಿ ಲಭ್ಯವಿದೆ. ಅರ್ಹ ಬಳಕೆದಾರರು ಅನಿಯಮಿತ 5G ಡೇಟಾವನ್ನು ಸಹ ಪಡೆಯುತ್ತಾರೆ. ಜಿಯೋ ಚಂದಾದಾರಿಕೆಗಳು JioTV ಮೊಬೈಲ್ ಅಪ್ಲಿಕೇಶನ್ ಮತ್ತು JioAICloud ಮೂಲಕ ಫ್ಯಾನ್‌ಕೋಡ್ ಅನ್ನು ಒಳಗೊಂಡಿವೆ.
ಜಿಯೋ ಗೋಲ್ಡ್ ಮೇಲೆ ಶೇಕಡಾ 1 ರಷ್ಟು ಹೆಚ್ಚುವರಿ ಪಡೆಯಬಹುದು. ಹೊಸ ಸಂಪರ್ಕಗಳಿಗೆ 2 ತಿಂಗಳ ಉಚಿತ ಪ್ರಯೋಗ ಪಡೆಯಬಹುದು. ಅಲ್ಲದೆ 3 ತಿಂಗಳವರೆಗೆ ಉಚಿತ JioHotstar ಮೊಬೈಲ್ ಟಿವಿ ಚಂದಾದಾರಿಕೆ ಲಭ್ಯವಿದೆ. ಇದನ್ನು ಸ್ಟೋರ್ ಮಾಡಲು ಜಿಯೋ ಎಐ ಕ್ಲೌಡ್ ಉಚಿತ 50GB ಸ್ಟೋರೇಜ್ ನೀಡುತ್ತದೆ. ಅಲ್ಲದೆ ಗೂಗಲ್ ಜೆಮಿನಿ ಪ್ರೊ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಬಳಕೆದಾರರಿಗೆ ರೂ 35,100 ಮೌಲ್ಯದ 18 ತಿಂಗಳ ಪ್ರೊ ಯೋಜನೆದೊಂದಿಗೆ ದಿನಕ್ಕೆ ಪರಿಣಾಮಕಾರಿ ಬೆಲೆ: ರೂ 10.96 ರೂಗಳಾಗಿವೆ.