Jio vs Airtel vs Vi: ಕಡಿಮೆ ಬೆಲೆಯಲ್ಲಿ 84 ದಿನಗಳ ಮಾನ್ಯತೆ, ಉಚಿತ ಕರೆ ಮತ್ತು ಡೇಟಾ ನೀಡಿವ ಪ್ರಿಪೇಯ್ಡ್ ಯೋಜನೆಗಳು!

Updated on 25-Jan-2022
HIGHLIGHTS

Airtel vs Jio vs Vi ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ.

ಸದ್ದಿಲ್ಲದೆ ವೊಡಾಫೋನ್ ಐಡಿಯಾ ವಿ ಕೂಡ ಆಕರ್ಷಕ ಪ್ರಿಪೇಯ್ಡ್‌ ಯೋಜನೆಗಳಿಂದ (Prepaid Plans) ಗ್ರಾಹಕರನ್ನು ಸೆಳೆಯುತ್ತಿವೆ

ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾದ (Vodafone Idea) 84 ದಿನಗಳವರೆಗೆ ಕೆಲವು ಉತ್ತಮ ಯೋಜನೆಗಳನ್ನು ನೋಡೋಣ.

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ (Airtel vs Jio vs Vi) ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಸದ್ದಿಲ್ಲದೆ ವೊಡಾಫೋನ್ ಐಡಿಯಾ ಕೂಡ ಆಕರ್ಷಕ ಪ್ರಿಪೇಯ್ಡ್‌ ಯೋಜನೆಗಳಿಂದ (Prepaid Plans) ಗ್ರಾಹಕರನ್ನು ಸೆಳೆಯುತ್ತಿವೆ. ಈಗೀಗ ಗ್ರಾಹಕರು 84 ದಿನಗಳ ಮಾನ್ಯತೆಯೊಂದಿಗೆ ಮೊಬೈಲ್ ಸಂಖ್ಯೆಯನ್ನು ರೀಚಾರ್ಜ್ ಮಾಡುವುದು ಹೆಚ್ಚಾಗುತ್ತಿದೆ. ದೇಶದ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಪ್ರಿಪೇಡ್ ಯೋಜನೆಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗಾದ್ರೆ ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾದ (Vodafone Idea) 84 ದಿನಗಳವರೆಗೆ ಕೆಲವು ಉತ್ತಮ ಯೋಜನೆಗಳನ್ನು (Best Plan) ನೋಡೋಣ.

ಜಿಯೋ  ಪ್ರಿಪೇಯ್ಡ್‌ ಯೋಜನೆ (Jio Prepaid Plans):

ಜಿಯೋ ಟೆಲಿಕಾಂನ 719 ರೂ. ಪ್ರಿಪೇಯ್ಡ್‌ ಪ್ಲಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳ ಸೌಲಭ್ಯ ದೊರೆಯುತ್ತದೆ.

666 ರೂ. ಪ್ರಿಪೇಯ್ಡ್‌ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್​​ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗುತ್ತವೆ.

ಏರ್ಟೆಲ್ ಪ್ರಿಪೇಯ್ಡ್‌ ಯೋಜನೆ (Airtel Prepaid Plans):

ಏರ್ಟೆಲ್ ಟೆಲಿಕಾಂನ 719 ರೂ. ಪ್ರಿಪೇಯ್ಡ್‌ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಏರ್ಟೆಲ್ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ಉಚಿತ ಹೆಲೋ ಟ್ಯೂನ್‌ ಸೌಲಭ್ಯ ದೊರೆಯುತ್ತದೆ.

ಇನ್ನು ಏರ್ಟೆಲ್​ನ 839 ರೂಗಳ ಪ್ರಿಪೇಯ್ಡ್ ಯೋಜನೆಯು 2GB ಡೇಟಾ/ ದಿನ, ಅನಿಯಮಿತ ಕರೆಗಳು, 100 SMS/ ದಿನ ಜೊತೆಗೆ 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ ಅಮೆಜಾನ್ ಪ್ರೈಮ್ ಮೊಬೈಲ್ ಎಡಿಷನ್, ಅಪೋಲೊ 24|7 Circle, ಉಚಿತ ಆನ್‌ಲೈನ್ ಕೋರ್ಸ್‌ಗಳು, ಉಚಿತ ಹೆಲೋ ಟ್ಯೂನ್ಸ್, ಫಾಸ್ಟ್​ಟ್ಯಾಗ್​​ನಲ್ಲಿ ರೂ. 100 ಕ್ಯಾಶ್‌ಬ್ಯಾಕ್ ಮತ್ತು ಉಚಿತ Wynk ಮ್ಯೂಸಿಕ್  ಚಂದಾದಾರಿಕೆಯಂತಹ ಹೆಚ್ಚುವರಿ ಪ್ರಯೋಜನಗಳು ಸಿಗುತ್ತವೆ.

ವೊಡಾಫೋನ್ ಐಡಿಯಾ  ಪ್ರಿಪೇಯ್ಡ್‌ ಯೋಜನೆ (Vodafone Idea Prepaid Plans):

ವೊಡಾಫೋನ್ ಐಡಿಯಾ ನೀಡುವ 719 ರೂ. ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 1.5GB ಡೇಟಾ, ಅನಿಯಮಿತ ಕರೆಗಳು, 100 SMS/ ದಿನ ಮತ್ತು 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ನೀಡಲಾಗುವ ಇತರ ಪ್ರಯೋಜನಗಳೆಂದರೆ ಬಿಂಜ್ ಆಲ್ ನೈಟ್, ಡೇಟಾ ಡಿಲೈಟ್‌ಗಳು, ವಾರಾಂತ್ಯದ ಡೇಟಾ ರೋಲ್‌ಓವರ್ ಮತ್ತು Vi ಚಲನಚಿತ್ರಗಳು ಮತ್ತು ಟಿವಿಗೆ ಚಂದಾದಾರಿಕೆ ಸಿಗಲಿದೆ.

839 ರೂ. ಪ್ರಿಪೇಯ್ಡ್ ಯೋಜನೆಯು 2 GB ಡೇಟಾ / ದಿನ, ಅನಿಯಮಿತ ಕರೆಗಳು, 100 SMS / ದಿನ ಮತ್ತು 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಬಿಂಜ್ ಆಲ್ ನೈಟ್, ವೀಕೆಂಡ್ ಡೇಟಾ ರೋಲ್‌ಓವರ್ ಮತ್ತು Vi ಚಲನಚಿತ್ರಗಳು ಮತ್ತು ಟಿವಿಗೆ ಚಂದಾದಾರಿಕೆಯನ್ನು ನೀಡಲಾಗುವ ಇತರ ಪ್ರಯೋಜನಗಳು ಸಿಗಲಿವೆ. ನಿಮ್ಮ ನಂಬರ್‌ಗೆ ನೀಡುತ್ತಿರುವ ಇತ್ತೀಚಿನ ಅತ್ಯುತ್ತಮ ಯೋಜನೆಗಳನ್ನು ಇಲ್ಲಿ My Best Plan ನೋಡಿ!

 

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :