Reliance Jio Rs.1029 - FREE Amazon Prime Plan
FREE Amazon Prime: ನೀವು ರಿಲಯನ್ಸ್ ಜಿಯೋದ ಸಿಮ್ ಕಾರ್ಡ್ ಬಳಸುತ್ತಿದ್ದರೆ ಅದರಲ್ಲೂ ಯಾವುದೇ ಹೆಚ್ಚುವರಿ ಹಣ ಖರ್ಚು ಮಾಡದೇ ಅಮೆಜಾನ್ ಪ್ರೈಮ್ ಅಂತಹ OTT ಸೇವೆಯನ್ನು ಅನುಭವಿಸಲು ಬಯಸಿದರೆ ನಿಮಗೊಂದು ಬೆಸ್ಟ್ ಪ್ಲಾನ್ ಬಗ್ಗೆ ಮಾಹಿತಿ ನೀಡಲಿದ್ದೇನೆ. ಅಂದ್ರೆ ನೀವು ತಿಂಗಳಿಗೆ ಮಾಡಿಕೊಳ್ಳುವ ರಿಚಾರ್ಜ್ ಜೊತೆಗೆ ಈ ಸೌಲಭ್ಯವನ್ನು ಪಡೆಯಬಹುದು ಅಂದ್ರೆ ನಿಮಗೆ ಲಾಭ ಅನ್ನೋದು ನನ್ನ ಅನಿಸಿಕೆಯಾಗಿದೆ.
ಯಾಕೆಂದರೆ ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ದಿನಕ್ಕೆ 2GB ಡೇಟಾವಾದ್ರೂ ಬೇಕಾಗುತ್ತದೆ ಇದರೊಂದಿಗೆ ಅನ್ಲಿಮಿಟೆಡ್ ಕರೆ ಬೇಕಿದ್ದರೆ ಜಿಯೋದಲ್ಲಿ 349 ರೂಗಳ ರಿಚಾರ್ಜ್ ಮಾಡಿಕೊಂಡರೆ ಬೇಸಿಕ್ ಸೌಲಭ್ಯ ಬಿಟ್ಟು ಬೇರೇನೂ ಸಿಗೋಲ್ಲ. ಅಲ್ಲದೆ ಒಂದು ತಿಂಗಳಿಗೆ ಅಮೆಜಾನ್ ಪ್ರೈಮ್ ಬೇಕಿದ್ದರೆ 299 ರೂಗಳನ್ನು ನೀಡಲೇಬೇಕಾತ್ತದೆ.
ಇದನ್ನೂ ಓದಿ: Ultra Slim Design ಜೊತೆಗೆ Samsung Galaxy S25 Edge ಬಿಡುಗಡೆಗೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು ತಿಳಿಯಿರಿ!
ನೀವು ಇದೆ ಬೆಲೆಯನ್ನು ಒಟ್ಟಿಗೆ 3 ತಿಂಗಳಿಗೆ ಬರುವ ಜಿಯೋದ ಪ್ಲಾನ್ 1029 ರೂಗಳ ರಿಚಾರ್ಜ್ ಮಾಡಿಕೊಂಡರೆ Reliance Jio ನಿಮಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು, 5G ಡೇಟಾದೊಂದಿಗೆ 84 ದಿನಗಳ ವ್ಯಾಲಿಡಿಟಿಯೊಂದಿಗೆ ಉಚಿತ ಅಮೆಜಾನ್ ಪ್ರೈಮ್ ಸೌಲಭ್ಯವನ್ನು ಸಹ ಪಡೆಯಬಹುದು. ಅಂದ್ರೆ ಹಣ ಉಳಿತಾಯದೊಂದಿಗೆ ಹೆಚ್ಚುವರಿ ಪ್ರಯೋಜನಗಳನ್ನು 349×3 ಲೆಕ್ಕಾಚಾರದಲ್ಲಿ ಭಾರಿ ಲಾಭವನ್ನು ಪಡೆಯುವ ಮೂಲಕ ನಿಮ್ಮ ಸ್ಮಾರ್ಟ್ ಪ್ಲಾನ್ ಬಳಸಬಹುದು.
ನೀವು ಒಟ್ಟಿಗೆ ಈ ಸುಮಾರು 3 ತಿಂಗಳ ಅಂದ್ರೆ 84 ದಿನಗಳಿಗೆ ಬರುವ ಈ 1,029 ರೂಗಳ ರಿಚಾರ್ಜ್ ಪ್ಲಾನ್ ಮೌಲ್ಯದ ಯೋಜನೆಯನ್ನು ಆರಿಸಿದರೆ ನಿಮಗೆ 84 ದಿನಗಳ ಮಾನ್ಯತೆ ಸಿಗುತ್ತದೆ. ಇದರೊಂದಿಗೆ ಬಳಕೆದಾರರಿಗೆ ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆಯನ್ನು 84 ದಿನಗಳವರೆಗೆ ಮಾತ್ರ ನೀಡಲಾಗುತ್ತಿದೆ. ಅಲ್ಲದೆ ಹೆಚ್ಚುವರಿಯಾಗಿ ರಿಲಯನ್ಸ್ ಜಿಯೋ (Reliance Jio) ಉಚಿತವಾಗಿ ಹಾಟ್‌ಸ್ಟಾರ್ ಮೊಬೈಲ್ / ಟಿವಿ ಚಂದಾದಾರಿಕೆಯನ್ನು ಸಹ 90 ದಿನಗಳವರೆಗೆ ನೀಡುವುದರೊಂದಿಗೆ ಗ್ರಾಹಕರಿಗೆ ಖುಷ್ ಮಾಡಿದೆ.
ರಿಲಯನ್ಸ್ ಜಿಯೋ (Reliance Jio) ಇದಲ್ಲದೆ 2GB ದೈನಂದಿನ ಡೇಟಾದೊಂದಿಗೆ ಪ್ರತಿದಿನ 100 SMS ಕಳುಹಿಸುವ ಆಯ್ಕೆಯೂ ಇದೆ ಮತ್ತು ಬಳಕೆದಾರರು ಅನಿಯಮಿತ ಕರೆಗಳನ್ನು ಸಹ ಮಾಡಬಹುದು. ಎರಡೂ ಯೋಜನೆಗಳು ಅರ್ಹ ಚಂದಾದಾರರಿಗೆ ಅನಿಯಮಿತ 5G ಡೇಟಾವನ್ನು ನೀಡುತ್ತಿವೆ. ಇದಕ್ಕಾಗಿ ಅವರು 5G ಸ್ಮಾರ್ಟ್‌ಫೋನ್ ಹೊಂದಿರಬೇಕು ಮತ್ತು ಕಂಪನಿಯ 5G ಸೇವೆಗಳು ಅವರ ಪ್ರದೇಶದಲ್ಲಿ ಲಭ್ಯವಿರಬೇಕು.
ಇದನ್ನೂ ಓದಿ: Vivo V50 Elite Edition ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?