BSNL Swadeshi 4G
BSNL Swadeshi 4G: ಭಾರತದಲ್ಲಿ ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ ಲಿಮಿಟೆಡ್ ದೇಶದ ಪ್ರಧಾನಿ ಮೋದಿಯವರಿಂದ BSNL ಸ್ವದೇಶಿ 4G ನೆಟ್‌ವರ್ಕ್ ಅನ್ನು ಒಡಿಶಾದ ಜಾರ್ಖಂಡ್‌ನಿಂದ ಪ್ರಾರಂಭಿಸಿದ್ದು ಇದನ್ನು ‘ಆತ್ಮನಿರ್ಭರ್ ಭಾರತ್’ ಕಡೆಗೆ ಒಂದು ದೊಡ್ಡ ಹೆಜ್ಜೆಯಾಗಿ ಪ್ರಧಾನಮಂತ್ರಿಯವರು ಇಂದು ಬಿಎಸ್ಎನ್ಎಲ್ ಸಂಪೂರ್ಣ ಭಾರತೀಯ 4G ನೆಟ್‌ವರ್ಕ್ ಸ್ಟಾಕ್ ಅನ್ನು ಪ್ರಾರಂಭಿಸಿದರು. ಈ ನೆಟ್‌ವರ್ಕ್ ಅನ್ನು ಭಾರತದಲ್ಲೇ ತಯಾರಿಸಲಾಗಿದ್ದು ಭಾರತವು ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ, ಮತ್ತು ಚೀನಾ ದಂತಹ ದೇಶಗಳ ಗುಂಪಿಗೆ ಸೇರಿದೆ.
ಅಂದರೆ ನಮ್ಮದೇ ಬಿಎಸ್ಎನ್ಎಲ್ ಟೆಲಿಕಾಂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಜಗತ್ತಿನ ಟಾಪ್ 5 ದೇಶಗಳಲ್ಲಿ ಈಗ ಭಾರತವೂ ಒಂದು. ಬಿಎಸ್ಎನ್ಎಲ್ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಒಡಿಶಾದ ಜಾರ್ಖಂಡ್‌ನಿಂದ ಪ್ರಧಾನಿ ಅವರು ಇದನ್ನು ಪ್ರಾರಂಭಿಸಿದರು. ಇದು ಕೇವಲ ತಂತ್ರಜ್ಞಾನದ ಗೆಲುವಲ್ಲ ದೂರದ ಗಡಿ ಪ್ರದೇಶದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಇರುವ ಒಂದು ದೊಡ್ಡ ರಾಷ್ಟ್ರೀಯ ಯೋಜನೆ ಆಗಿದೆ.
Also Read: 65 Inch Smart TV: ಅಮೆಜಾನ್ ಸೇಲ್‌ನಲ್ಲಿ 65 ಇಂಚಿನ VW ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಡಿಸ್ಕೌಂಟ್‌ಗಳು!
ಬಿಎಸ್ಎನ್ಎಲ್ ಈ ಹೊಸ 4G ನೆಟ್‌ವರ್ಕ್‌ನ ಮುಖ್ಯ ವಿಶೇಷತೆ ಅದರ ‘ಸ್ವದೇಶಿ’ ಮೂಲ ಸಂಪೂರ್ಣ ನೆಟ್‌ವರ್ಕ್ ಸ್ಟಾಕ್ C-DOT ಅಭಿವೃದ್ಧಿಪಡಿಸಿದ ಕೋರ್ ನೆಟ್‌ವರ್ಕ್ (Core Network) ನಿಂದ ಹಿಡಿದು. Tejas Networks ರೇಡಿಯೋ ಆಕ್ಸೆಸ್ ನೆಟ್‌ವರ್ಕ್ (RAN), ಮತ್ತು TCS ನ ಸಿಸ್ಟಮ್ ಇಂಟಿಗ್ರೇಷನ್ ವರೆಗೆ ಎಲ್ಲವನ್ನೂ ಭಾರತದಲ್ಲೇ ವಿನ್ಯಾಸಗೊಳಿಸಿ ಉತ್ಪಾದನೆ ಮಾಡಲಾಗಿದೆ.
ಇದು ಭಾರತವನ್ನು ಜಾಗತಿಕ ಟೆಲಿಕಾಂ ತಂತ್ರಜ್ಞಾನದ ಗ್ರಾಹಕನ ಸ್ಥಾನದಿಂದ ತಯಾರಕನ ಸ್ಥಾನಕ್ಕೆ ಕೊಂಡೊಯ್ಯುತ್ತಿದೆ. ಪ್ರಧಾನಿ ಅವರು ಇದನ್ನು ‘ಪರಾಧೀನತೆಯಿಂದ ವಿಶ್ವಾಸದ ಕಡೆಗೆ’ ಒಂದು ಪಯಣ ಎಂದು ಕರೆದರು. ಈ ಕ್ಲೌಡ್ ಆಧಾರಿತ ನೆಟ್‌ವರ್ಕ್ ಮುಂದಿನ ದಿನಗಳಿಗೆ ಸಿದ್ಧವಾಗಿದೆ ಮತ್ತು ಸುಲಭವಾಗಿ 5G ಗೆ ಅಪ್‌ಗ್ರೇಡ್ ಆಗಬಲ್ಲದು.
ಬಿಎಸ್ಎನ್ಎಲ್ 4G ಜಾರಿ (rollout) ಯು ಡಿಜಿಟಲ್ ಸೇರ್ಪಡೆಗೆ ಒಂದು ದೊಡ್ಡ ಬದಲಾವಣೆಯನ್ನು ತರಲಿದೆ. ಈ ಪ್ರಾರಂಭದ ಜೊತೆಗೆ ಪ್ರಧಾನಿ ಮೋದಿ ಅವರು ದೇಶಾದ್ಯಂತ 97,500 ಕ್ಕೂ ಹೆಚ್ಚು ಮೊಬೈಲ್ 4G ಟವರ್‌ಗಳನ್ನು ಲೋಕಾರ್ಪಣೆ ಮಾಡಿದರು. ಸುಮಾರು ₹37,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಟವರ್‌ಗಳು ಒಡಿಶಾ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿವೆ.
ಅತ್ಯಂತ ಮುಖ್ಯವಾಗಿ ಈ ಬೃಹತ್ ಮೂಲಸೌಕರ್ಯವು ಡಿಜಿಟಲ್ ಭಾರತ್ ನಿಧಿ (Digital Bharat Nidhi) ಅಡಿಯಲ್ಲಿ ಹಣ ಪಡೆದ ಸಾವಿರಾರು ಟವರ್‌ಗಳನ್ನು ಒಳಗೊಂಡಿದೆ. ಈ ಯೋಜನೆಯು ದೂರದ ಗಡಿ ಪ್ರದೇಶ ಮತ್ತು ನಕ್ಸಲ್ ಪೀಡಿತ ಪ್ರದೇಶಗಳ 26,700 ಕ್ಕೂ ಹೆಚ್ಚು ಹಳ್ಳಿಗಳಿಗೆ 4G ಸಂಪರ್ಕವನ್ನು ನೀಡುತ್ತದೆ. ಇದರಿಂದ 20 ಲಕ್ಷಕ್ಕೂ ಹೆಚ್ಚು ಹೊಸ ಗ್ರಾಹಕರು ಉತ್ತಮ ಮತ್ತು ವೇಗದ 4G ಸೇವೆಗಳನ್ನು ಪಡೆಯುತ್ತಾರೆ.
ಬಿಎಸ್ಎನ್ಎಲ್ ಸ್ವದೇಶಿ 4G ಯೋಜನೆಯು ಸುಸ್ಥಿರ ಮೂಲಸೌಕರ್ಯಕ್ಕೆ ಹೊಸ ಮಾನದಂಡಗಳನ್ನು ಹಾಕಿದೆ. ಪ್ರಾರಂಭಿಸಲಾದ ಟವರ್‌ಗಳಲ್ಲಿ ಹೆಚ್ಚಿನವು ಸೌರ-ಶಕ್ತಿಯಿಂದ ಕಾರ್ಯನಿರ್ವಹಿಸುತ್ತವೆ. ಇದು ದೇಶದ ಹಸಿರು ಟೆಲಿಕಾಂ ಸೈಟ್‌ಗಳ ದೊಡ್ಡ ಸಮೂಹಗಳಲ್ಲಿ ಒಂದಾಗಿದೆ. ಪರಿಸರ-ಸ್ನೇಹಿ ತಂತ್ರಜ್ಞಾನವನ್ನು ಅಳವಡಿಸುವ ಈ ಕ್ರಮವು ಸಂಪರ್ಕ ವಿಸ್ತರಣೆ ಮತ್ತು ಪರಿಸರ ಗುರಿಗಳೆರಡರ ನಡುವೆ ಸಮತೋಲನ ಕಾಯ್ದುಕೊಳ್ಳುತ್ತದೆ.
ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಿದ ತಂತ್ರಜ್ಞಾನದ ಸ್ಟಾಕ್‌ನಿಂದಾಗಿ ಈ ನೆಟ್‌ವರ್ಕ್ ಉತ್ತಮ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ನೀಡುತ್ತದೆ. ಇದು ‘ವಿಕಸಿತ ಭಾರತ’ಕ್ಕೆ ಸುರಕ್ಷಿತ ಡಿಜಿಟಲ್ ಬೆನ್ನೆಲುಬನ್ನು ಒದಗಿಸುತ್ತದೆ. ಡಿಜಿಟಲ್ ಸೌಲಭ್ಯಗಳು ಪ್ರತಿಯೊಬ್ಬ ನಾಗರಿಕನನ್ನೂ ತಲುಪುವುದನ್ನು ಖಚಿತಪಡಿಸುತ್ತದೆ.