BSNL Annual Plan
BSNL Annual Plan 2025: ಭಾರತದಲ್ಲಿ ಬಿಎಸ್ಎನ್ಎಲ್ ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚು ಪ್ರಯೋಜನಗಳನ್ನು ನೀಡುವ ಟೆಲಿಕಾಂ ಕಂಪನಿಗಳಲ್ಲಿ ಮೊದಲನೆಯದಾಗಿದೆ. ಕಂಪನಿ ತಮ್ಮ ಬಳಕೆದಾರರಿಗೆ ಕೈಗೆಟಕುವ ಬೆಲೆಗೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಹತ್ತಾರು ಯೋಜನೆಗಳನ್ನು ಹೊಂದಿದೆ. ಪ್ರಸ್ತುತ ಇಲ್ಲಿ ನಾನು ನಿಮಗೆ ಬಿಎಸ್ಎನ್ಎಲ್ ನೀಡುತ್ತಿರುವ ₹1,999 ರೂಗಳ ರಿಚಾರ್ಜ್ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹೌದು, ಈಗಾಗಲೇ ಮೇಲೆ ತಿಳಿಸಿರುವಂತೆ ಒಮ್ಮೆ ನೀವು ಈ ರಿಚಾರ್ಜ್ ಮಾಡಿಕೊಂಡ್ರೆ ವರ್ಷಪೂರ್ತಿ ಟೆನ್ಷನ್ ಇಲ್ಲದೆ ಅನ್ಲಿಮಿಟೆಡ್ ಕರೆ ಮತ್ತು 600GB ಡೇಟಾವನ್ನು ಆನಂದಿಸಬಹುದು. ಹಾಗಾದ್ರೆ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪರಿಶೀಲಿಸಬಹುದು.
ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ಅನೇಕ ವಾರ್ಷಿಕ ರಿಚಾರ್ಜ್ ಯೋಜನೆಗಳನ್ನು (BSNL Recharge Plan) ನೀಡುತ್ತಿದೆ. ಅವುಗಳಲ್ಲಿ ಒಂದಾಗಿರುವ ಈ ₹1,999 ರೂಗಳ ಯೋಜನೆಯ ಪ್ರಯೋಜನಗಳನ್ನು ನೋಡುವುದಾದರೆ ಇದರಲ್ಲಿ ನಿಮಗೆ ಬರೋಬ್ಬರಿ 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಅಲ್ಲದೆ ಇದರಲ್ಲಿ ಬಳಕೆದಾರರಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಬರೋಬ್ಬರಿ 600GB ಡೇಟಾವನ್ನು ಸಹ ಕಂಪನಿ ನೀಡುತ್ತಿದೆ.
ಅಂದ್ರೆ ಈ ಡೇಟಾವನ್ನು ನೀಡುವ ಯಾವುದೇ ಲಿಮಿಟ್ ಇಲ್ಲದೆ ಬಳಸಬಹುದು. ಅಂದ್ರೆ ಪೂರ್ತಿ 600GB ಡೇಟಾವನ್ನು ಒಂದೇ ದಿನ, ಒಂದೇ ವಾರ, ಒಂದೇ ತಿಂಗಳು ಅಥವಾ ವರ್ಷಪೂರ್ತಿಯಾಗಿ ಬಳಸಬಹುದು ಇದಕ್ಕೆ ಯಾವುದೇ ಮಿತಿ ಇಲ್ಲ. ಅಲ್ಲದೆ ಪ್ರತಿದಿನ 100 ಉಚಿತ SMS ಸಹ ಇದರಲ್ಲಿ ಲಭ್ಯವಿರುತ್ತದೆ. ಇದು ವರ್ಷವಿಡೀ ದುಬಾರಿ ರೀಚಾರ್ಜ್‌ಗಳ ಹೊರೆಯಿಂದ ಗ್ರಾಹಕರಿಗೆ ಪರಿಹಾರ ನೀಡುತ್ತದೆ. ಬಳಕೆದಾರರನ್ನು ಮತ್ತೆ ಮತ್ತೆ ರೀಚಾರ್ಜ್ ಮಾಡುವ ತೊಂದರೆಯಿಂದ ಮುಕ್ತಗೊಳಿಸುವುದು ಕಂಪನಿಯ ಉದ್ದೇಶವಾಗಿದೆ.
ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಏನೇನು ಲಭ್ಯವಿದೆ ಎನ್ನುವ ಪ್ರಶ್ನೆ ನಿಮಗಿದ್ದಾರೆ ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಸೌಲಭ್ಯಗಳನ್ನು ಯಾವುದೇ ಸಮಯದಲ್ಲಿ ಬಳಸಬಹುದು. 600GB ಡೇಟಾ ಬಳಕೆ ನಂತರ ಇಂಟರ್ನೆಟ್ ವೇಗ 80Kbps ಇಳಿಯುತ್ತದೆ. ಇದಲ್ಲದೆ ಬಳಕೆದಾರರು 30 ದಿನಗಳವರೆಗೆ PRBT, 30 ದಿನಗಳವರೆಗೆ Eros Now ಮನರಂಜನೆ ಮತ್ತು 30 ದಿನಗಳವರೆಗೆ Lokdhun ವಿಷಯಕ್ಕೆ ಪ್ರವೇಶವನ್ನು ಪಡೆಯುತ್ತಾರೆ. ನಿಮ್ಮ ಸಿಮ್ ಅನ್ನು ಸಕ್ರಿಯವಾಗಿಡಲು ವಿಶ್ವಾಸಾರ್ಹ ರೀಚಾರ್ಜ್ ಯೋಜನೆಯನ್ನು ನೀವು ಹುಡುಕುತ್ತಿದ್ದರೆ ಈ BSNL ಯೋಜನೆ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.