ರಿಲಯನ್ಸ್ ಜಿಯೋ (Reliance Jio) ಹಲವಾರು ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ ಮತ್ತು ಆಯ್ದ ಪೋಸ್ಟ್‌ಪೇಯ್ಡ್ ಯೋಜನೆಗಳು ಸಹ OTT ಸೇವೆಗಳೊಂದಿಗೆ ಬರುತ್ತವೆ. ಜಿಯೋ ನೀಡುತ್ತಿರುವ ಈ ರೂ.1549 ಬೆಲೆಯ ಪೋಸ್ಟ್‌ಪೇಯ್ಡ್ ಯೋಜನೆಯು ಅಂತರರಾಷ್ಟ್ರೀಯ ಪ್ರಯಾಣದ ಸಮಯದಲ್ಲಿ ಪ್ರೀಮಿಯಂ ಸೇವೆಗಳು ಮತ್ತು ಸಂಪರ್ಕವನ್ನು ಬಯಸುವ ಬಳಕೆದಾರರಿಗೆ ಸೂಕ್ತವಾಗಿದೆ. ಬಳಕೆದಾರರಿಗೆ ಪ್ರತಿ ಬಿಲ್ಲಿಂಗ್ ಚಕ್ರಕ್ಕೆ 300GB ಹೈ-ಸ್ಪೀಡ್ ಡೇಟಾವನ್ನು ನೀಡಲಾಗುತ್ತದೆ. ಬಳಕೆದಾರರು ಈ ಡೇಟಾ ಮಿತಿಯನ್ನು ಮೀರಿದರೆ ಹೆಚ್ಚುವರಿ ಡೇಟಾಗೆ ಪ್ರತಿ GB ಸುಮಾರು 10 ರೂಗಳ ಖರ್ಚು ಬರುತ್ತದೆ.
ರಿಲಯನ್ಸ್ ಜಿಯೋ ನೀಡುತ್ತಿರುವ ಈ ಜನಪ್ರಿಯ ರಿಚಾರ್ಜ್ ಯೋಜನೆಯಲ್ಲಿ ಪೋಸ್ಟ್‌ಪೇಯ್ಡ್ ಪ್ಲಾನ್ ಬಳಕೆದಾರರಿಗೆ ದಿನಕ್ಕೆ 100 ಉಚಿತ SMS ಮತ್ತು ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ನೀಡುತ್ತದೆ. ಅಲ್ಲದೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಈ ರೂ.1549 ಪೋಸ್ಟ್‌ಪೇಯ್ಡ್ ಯೋಜನೆ ನಿಮ್ಮ ಮೊಬೈಲ್ ಬಳಸಿಕೊಂಡು ಮಾನ್ಯತೆ ಇರುವವರೆಗೆ ಉಚಿತ ನೆಟ್‌ಪ್ಟಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆಯ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ: 55 ಇಂಚಿನ ಲೇಟೆಸ್ಟ್ Smart LED Google TV ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿರುವ ಅಮೆಜಾನ್!
ಈ ಮೂಲಕ ಇದು ಬಳಕೆದಾರರಿಗೆ ಸಾಕಷ್ಟು ಒಟಿಟಿ ವಿಷಯವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯು 500GB ವರೆಗಿನ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಸಹ ನೀಡುತ್ತದೆ. ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಜಿಯೋಟಿವಿ, ಜಿಯೋಸಿನಿಮಾ ಮತ್ತು ಜಿಯೋಕೌಡ್‌ನಂತಹ ಸೇವೆಗಳಿಗೆ ಪ್ರವೇಶವನ್ನು ಸಹ ಸೇರಿಸಲಾಗಿದೆ. ಇದು ಬಳಕೆದಾರರಿಗೆ ಲೈವ್ ಟಿವಿ, ಚಲನಚಿತ್ರಗಳು ಮತ್ತು ಕೌಡ್ ಸ್ಟೋರೇಜ್ ಅನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.
ರಿಲಯನ್ಸ್ ಜಿಯೋ (Reliance Jio) ಅಂತರರಾಷ್ಟ್ರೀಯವಾಗಿ ಪ್ರಯಾಣಿಸುವ ಬಳಕೆದಾರರಿಗೆ ಈ ಯೋಜನೆಯು USA ನಲ್ಲಿ 5GB ಹೈ-ಸ್ಪೀಡ್ ಡೇಟಾ ಮತ್ತು 500 ನಿಮಿಷಗಳ ಕರೆ (ಸ್ಥಳೀಯ ಮತ್ತು ಭಾರತಕ್ಕೆ) ಒಳಗೊಂಡಿದೆ. ಯುಎಇಯಲ್ಲಿ ಬಳಕೆದಾರರು 1GB ಡೇಟಾ ಮತ್ತು 300 ನಿಮಿಷಗಳ ಕರೆಯನ್ನು ಪಡೆಯುತ್ತಾರೆ. ವಿದೇಶ ಪ್ರವಾಸ ಮಾಡುವಾಗಲೂ ಸಂಪರ್ಕದಲ್ಲಿರಲು ಬಯಸುವ ಪ್ರಯಾಣಿಕರಿಗೆ ಈ ವೈಶಿಷ್ಟ್ಯವು ವಿಶೇಷವಾಗಿ ಉಪಯುಕ್ತವಾಗಿದೆ.
ರಿಲಯನ್ಸ್ ಜಿಯೋ (Reliance Jio) 1549 ರೂಪಾಯಿಗಳ ಪೋಸ್ಟ್ ಪೇಯ್ಡ್ ಯೋಜನೆಯು 5G ನೆಟ್‌ವರ್ಕ್‌ನಲ್ಲಿ ಅನಿಯಮಿತ ಡೇಟಾದ ಪ್ರಯೋಜನವನ್ನು ನೀಡುತ್ತದೆ. ಇದು ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್‌ನ ಲಾಭವನ್ನು ಪಡೆಯಲು ಅನುವು ಮಾಡಿಕೊಡುತ್ತದೆ, ಸ್ಟ್ರೀಮಿಂಗ್, ಗೇಮಿಂಗ್ ಮತ್ತು ಇತರ ಆನ್‌ಲೈನ್ ಚಟುವಟಿಕೆಗಳನ್ನು ಇನ್ನಷ್ಟು ಸುಲಭಗೊಳಿಸುತ್ತದೆ.