Vodafone idea 5G launch
Vodafone idea 5G launch confirmed: ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಐಡಿಯಾ (Vi) ತನ್ನ ನೆಟ್ವರ್ಕ್ ಅನ್ನು ಮತ್ತಷ್ಟು ಸುಧಾರಿಸಿ ಈಗ ಜಿಯೋ ಮತ್ತು ಏರ್ಟೆಲ್ ಮಾರ್ಗದಲ್ಲಿ ನಡೆಯಲು ಇದೆ ಮಾರ್ಚ್ 2025 ರಿಂದ ತಮ್ಮ ಹೊಸ Vodafone idea 5G ಸೇವೆಯನ್ನು ಮೊದಲಿಗೆ ಕೆಲ ಆಯ್ದ ಮೆಟ್ರೋ ನಗರಗಳಲ್ಲಿ ಆರಂಭಿಸುವುದಾಗಿ ಖಚಿತಪಡಿಸಿದೆ. ಈ ವೊಡಾಫೋನ್ ಐಡಿಯಾದ 5G ಸೇವೆಯನ್ನು ಪ್ರಸ್ತುತ ದೆಹಲಿ, ಬೆಂಗಳೂರು, ಚಂಡೀಘರ್, ಮುಂಬೈ ಮತ್ತು ಪಟ್ನಾದಲ್ಲಿ ಆರಂಭಿಸಲು ಸಜ್ಜಾಗಿದೆ. ಇದರ ನಂತರ ಹಂತ ಹಂತವಾಗಿ ದೇಶಾದ್ಯಂತ ತಮ್ಮ Vi 5G ಸೇವೆಯನ್ನು ವಿಸ್ತರಿಸಲಿದೆ.
ವೊಡಾಫೋನ್ ಐಡಿಯಾ ತನ್ನ ಇತ್ತೀಚಿನ ಹಣಕಾಸು ವರದಿಯಲ್ಲಿ ಮಾರ್ಚ್ 2025 ರಿಂದ ತನ್ನ 5G ಸೇವೆಯನ್ನು ಹೊರತರಲು ಪ್ರಾರಂಭಿಸುವುದಾಗಿ ಘೋಷಿಸಿದೆ. ವೊಡಾಫೋನ್ ಐಡಿಯಾ ಅಂದರೆ VI ತನ್ನ 5G ಸೇವೆಯ ಪ್ರಾರಂಭದ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಕಂಪನಿಯು ತನ್ನ 5G ಸೇವೆಯನ್ನು ಮಾರ್ಚ್ 2025 ರಲ್ಲಿ ಮುಂಬೈನಲ್ಲಿ ಮೊದಲು ಪ್ರಾರಂಭಿಸುವುದಾಗಿ ಹೇಳಿದೆ.
ಅದಾದ ನಂತರ ಏಪ್ರಿಲ್ 2025 ರಲ್ಲಿ ಅವರ 5G ಸೇವೆಯು ಮೆಟ್ರೋ ನಗರಗಳಲ್ಲಿ ಪ್ರಾರಂಭವಾಗುತ್ತದೆ. ವೊಡಾಫೋನ್ ಐಡಿಯಾ 2024-25ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯಲ್ಲಿ ಈ ಮಾಹಿತಿಯನ್ನು ನೀಡಿದೆ. ನಾವು ಹೂಡಿಕೆಯನ್ನು ಹೆಚ್ಚಿಸುತ್ತಿದ್ದೇವೆ ಮತ್ತು ಮುಂದಿನ ತ್ರೈಮಾಸಿಕದಲ್ಲಿ ಖರ್ಚಿನ ವೇಗ ಹೆಚ್ಚಾಗುತ್ತದೆ. ಇದಲ್ಲದೆ ಕಂಪನಿಯು 5G ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸಲಿದೆ” ಎಂದು ಕಂಪನಿಯ ಸಿಇಒ ಅಕ್ಷಯ್ ಮುಂದ್ರಾ ಹೇಳಿದ್ದಾರೆ.
Also Read: Reliance Jio Plan: ಜಿಯೋದಿಂದ 900 ರೂಗಳಿಗೆ ವರ್ಷಪೂರ್ತಿ ಅನ್ಲಿಮಿಟೆಡ್ ಕರೆ ಮತ್ತು ಡೇಟಾದ ಮಸ್ತ್ ಪ್ಲಾನ್!
ವೊಡಾಫೋನ್ ಐಡಿಯಾ ತನ್ನ 5G ಸೇವೆಯ ಬಿಡುಗಡೆಯನ್ನು ಘೋಷಿಸುವುದರ ಜೊತೆಗೆ ಕಳೆದ ಒಂಬತ್ತು ತಿಂಗಳಲ್ಲಿ ದೇಶಾದ್ಯಂತ 4G ಸೇವೆಯ ವಿಸ್ತರಣೆಯ ವರದಿಯನ್ನು ಸಹ ಪ್ರಸ್ತುತಪಡಿಸಿದೆ. ಕಂಪನಿಯು ಮಾರ್ಚ್ 2024 ರ ವೇಳೆಗೆ ತನ್ನ 4G ಸೇವೆಯನ್ನು 1.03 ಬಿಲಿಯನ್ ಜನಸಂಖ್ಯೆಗೆ ವಿಸ್ತರಿಸುವುದಾಗಿ ಹೇಳಿದೆ ಆದರೆ ವೊಡಾಫೋನ್ ಐಡಿಯಾದ 4G ಸೇವೆಯು ಡಿಸೆಂಬರ್ 2024 ರ ಅಂತ್ಯದ ವೇಳೆಗೆ 1.07 ಬಿಲಿಯನ್ ಬಳಕೆದಾರರನ್ನು ತಲುಪಲಿದೆ. ಇದಲ್ಲದೆ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯದಲ್ಲಿ (ARPU) ಶೇ. 4.7 ರಷ್ಟು ಹೆಚ್ಚಳವನ್ನು ಸಾಧಿಸಿದೆ ಎಂದು VI ತನ್ನ ವರದಿಯಲ್ಲಿ ತಿಳಿಸಿದೆ.