BSNL Rs 897 recharge plan for 180 days validity and unlimited call
BSNL Recharge Plans: ಭಾರತದ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತಮ್ಮ ಬಳಕೆದಾರರಿಗೆ ಕೈಗೆಟುಕುವ ಧೀರ್ಘ ಕಾಲದ ಮಾನ್ಯತೆವುಳ್ಳ ಅತ್ಯುತ್ತಮ ರೀಚಾರ್ಜ್ ಯೋಜನೆಗಳೊಂದಿಗೆ ಬರುತ್ತದೆ. ಬಳಕೆದಾದರಿಗೆ ಈ 897 ರೂಗಳ ರಿಚಾರ್ಜ್ ಯೋಜನೆಯಲ್ಲಿ ಬರೋಬ್ಬರಿ 180 ದಿನಗಳಿಗೆ ಅಂದರೆ ಬರೋಬ್ಬರಿ 6 ತಿಂಗಳಿಗೆ ಕೈಗೆಟಕುವ ಬೆಲೆಗೆ ಅದ್ದೂರಿಯ ರಿಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಹಾಗಾದ್ರೆ ಈ ಬೆಸ್ಟ್ ರಿಚಾರ್ಜ್ ಯೋಜನೆಯ ಪ್ರಯೋಜನಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಭಾರತದಲ್ಲಿ ಪ್ರೈವೇಟ್ ಟೆಲಿಕಾಂ ಕಂಪನಿಗಳಿಗೆ ನೇರವಾಗಿ ಠಕ್ಕರ್ ನೀಡುವ ಏಕೈಕ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ (BSNL) ತಮ್ಮ ಗ್ರಾಹಕರಿಗೆ ಕೈಗೆಟಕುವ ಬೆಲೆಗೆ ಹತ್ತಾರು ರಿಚಾರ್ಜ್ ಯೋಜನೆಗಳನ್ನು ನೀಡುತ್ತಿವೆ. ಇದರೊಂದಿಗೆ ಅತಿ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನಗೆಳನ್ನು ನೀಡುವ ಪ್ಲಾನ್ ಹೊಂದಿದೆ. ಅಲ್ಲದೆ ಕಳೆದ ಕೆಲವು ತಿಂಗಳಿಂದ BSNL ನೆಟ್ವರ್ಕ್ ಸುಧಾರಿಸುವ ಕೆಲಸವನ್ನು ಮಾಡಿದ್ದು ಹೆಚ್ಚು ಗಮನ ಹರಿಸಿ ಸಿಕ್ಕಾಪಟ್ಟೆ ಕೆಲಸ ಮಾಡುತ್ತಿರುವ TCS (Tata Consultancy Services) ಬಳಕೆದಾದರಿಗೆ ನೆಟ್ವರ್ಕ್ ಅನ್ನು ಉತ್ತಮವಾಗಿ ನೀಡಲು ಇನ್ನೂ ಹೆಚ್ಚು ಅಪ್ಡೇಟ್ ಮಾಡುತ್ತಿದೆ.
Also Read: 7000mAh ಬ್ಯಾಟರಿಯ OPPO K13 5G ಸ್ಮಾರ್ಟ್ಫೋನ್ ಬಿಡುಗಡೆ! ಆಫರ್ ಬೆಲೆ ಮತ್ತು ಟಾಪ್ ಫೀಚರ್ಗಳೇನು?
ಸರ್ಕಾರಿ ಕಂಪನಿಯ ಈ 897 ರೂಗಳ ಈ ರಿಚಾರ್ಜ್ ಯೋಜನೆಯು ಹೊಂದಿರುವ ಗ್ರಾಹಕರಿಗೆ ಹೆಚ್ಚು ಆರ್ಥಿಕ ಮತ್ತು ಪ್ರಯೋಜನಕಾರಿಯಾಗಿದೆ. ಸರ್ಕಾರಿ ಕಂಪನಿಯು ಸಂಪೂರ್ಣ ಮಾನ್ಯತೆಯ ಅವಧಿಗೆ ಒಟ್ಟು 90GB ಡೇಟಾವನ್ನು ಗ್ರಾಹಕರಿಗೆ ನೀಡುತ್ತಿದೆ. ಹೆಚ್ಚುವರಿಯ ಡೇಟಾ ಮಿತಿ ಮುಗಿದ ನಂತರ ನಿಮಗೆ 40Kbps ವೇಗ ಸಿಗುತ್ತದೆ. ಇದರ ಜೊತೆಗೆ ಈ ಯೋಜನೆಯಲ್ಲಿ ನೀವು ಪ್ರತಿದಿನ 100 ಉಚಿತ SMS ಗಳನ್ನು ಸಹ ಪಡೆಯುತ್ತೀರಿ. ಬಿಎಸ್ಎನ್ಎಲ್ ಬಳಕೆದಾರರು ಇದಕ್ಕಾಗಿ ಪ್ರತಿ ತಿಂಗಳು ಸುಮಾರು ರೂ 150 ಖರ್ಚು ಮಾಡಬೇಕಾಗುತ್ತದೆ.
ಈ ರಿಚಾರ್ಜ್ ಯೋಜನೆಯಲ್ಲಿ ನಿಮಗೆ ಬರೋಬ್ಬರಿ 180 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. BSNL Recharge ಈ ಯೋಜನೆ ತುಂಬಾ ದುಬಾರಿಯಾಗಿದೆ ಎಂದು ನೀವು ಭಾವಿಸಿದರೆ ಇದರ ಬೆಲೆ ಒಂದು ಸಾವಿರ ರೂಪಾಯಿಗಳಿಗಿಂತ ಕಡಿಮೆಯಾಗಿದೆ. ನೀವು 180 ದಿನಗಳವರೆಗೆ ರೀಚಾರ್ಜ್ ಮಾಡುವ ತೊಂದರೆಯಿಂದ ಮುಕ್ತರಾಗಲು ಬಯಸಿದರೆ ಇದಕ್ಕಾಗಿ ನೀವು 897 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯೊಂದಿಗೆ ನೀವು ಸಂಪೂರ್ಣ ಆರು ತಿಂಗಳು ಸಂಪೂರ್ಣವಾಗಿ ಉಚಿತವಾಗಿರುತ್ತೀರಿ.