BSNL affordbale Plan Details
BSNL Rs.247 Plan Details: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತಮ್ಮ ಬಳಕೆದಾರರಿಗೆ ಕೇವಲ 247 ರೂಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಪೂರ್ತಿ 30 ದಿನಗಳ ಮಾನ್ಯತೆಯನ್ನು ನೀಡುತ್ತಿದೆ. ಅಷ್ಟೇಯಲ್ಲದೆ ಈ BSNL ಪ್ರಿಪೇಯ್ಡ್ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಒಟ್ಟಾರೆಯಾಗಿ 50GB ಡೇಟಾವನ್ನು ನೀಡುತ್ತದೆ. ಬಿಎಸ್ಎನ್ಎಲ್ (BSNL) ಬಿಟ್ಟು ಬೇರೆ ಯಾರೂ ಇಷ್ಟು ಕಡಿಮೆ ಬೆಲೆಗೆ ಇಂತಹ ಪ್ರಯೋಜನಗಳನ್ನು ನಿಡುತಿಲ್ಲ ಬಿಡಿ. ಹಾಗಾದ್ರೆ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪಡೆಯಿರಿ.
ಈ ವಿಶೇಷ ಕಾಂಬೋ ವೋಚರ್ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳೊಂದಿಗೆ ಒಟ್ಟಾರೆಯಾಗಿ 50GB ಡೇಟಾವನ್ನು ನೀಡುತ್ತದೆ. ಹೈ-ಸ್ಪೀಡ್ ಮಿತಿಯನ್ನು ತಲುಪಿದ ನಂತರ ವೇಗವನ್ನು 80Kbps ಇಳಿಸಲಾಗುತ್ತದೆ. ಈ BSNL ಯೋಜನೆಯೊಂದಿಗೆ ಕರೆಗಳಿಗೆ FUP ಮಿತಿ 250 ನಿಮಿಷಗಳು. ಈ ಯೋಜನೆಯೊಂದಿಗೆ ಯೋಜನೆಯು ದಿನಕ್ಕೆ 100 SMS ಅನ್ನು ಸಹ ನೀಡುವುದರೊಂದಿಗೆ 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ನಿಮಗೊತ್ತಾ ಮೊದಲು ಈ ಪ್ಲಾನ್ ಪ್ರಚಾರದ ಅವಧಿಗೆ ಯೋಜನೆಯೊಂದಿಗೆ 40 ದಿನಗಳ ಮಾನ್ಯತೆಯನ್ನು ನೀಡುತ್ತಿತ್ತು ಆದರೆ ಈಗ ವ್ಯಾಲಿಡಿಟಿ 30 ದಿನಕ್ಕೆ ನಿಗದಿಪಡಿಸಲಾಗಿದೆ.
ಮತ್ತೊಂದು ವಿಶೇಷ ಯೋಜನೆಯನ್ನು ನೋಡುವುದಾದರೆ BSNL Combo_345 ಸಹ ಪರಿಗಣಿಸಬಹುದು. ಯಾಕೆಂದರೆ ಈ ರಿಚಾರ್ಜ್ ಯೋಜನೆಯಲ್ಲಿ ನಿಮಗೆ ಬರೋಬ್ಬರಿ 60 ದಿನಗಳ ವ್ಯಾಲಿಡಿಟಿಯನ್ನು ಕಂಪನಿ ನೀಡುತ್ತಿದೆ. BSNL Recharge ನೀಡುತ್ತಿರುವ 345 ರೂಗಳ ಪ್ರಿಪೇಯ್ಡ್ ಯೋಜನೆಯು 1GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಗಳೊಂದಿಗೆ ಬರುತ್ತದೆ. ಈ ಯೋಜನೆಯು 60 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ.
Also Read: ಮುಂಬರಲಿರುವ POCO M7 5G ಸ್ಮಾರ್ಟ್ಫೋನ್ ಲಾಂಚ್ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಈ BSNL ರಿಚಾರ್ಜ್ ಯೋಜನೆ ನಿಮಗೆ FUP (ನ್ಯಾಯಯುತ ಬಳಕೆಯ ನೀತಿ) ಡೇಟಾ ಬಳಕೆಯ ನಂತರ ವೇಗವು 40 Kbps ಗೆ ಕಡಿಮೆಯಾಗುತ್ತದೆ. ಇದು BSNL ನಿಂದ ಸ್ಪರ್ಧಾತ್ಮಕ ಕೊಡುಗೆಯಾಗಿದ್ದು ಖಂಡಿತವಾಗಿಯೂ ಗಮನ ಸೆಳೆಯುವ ವಿಷಯವಾಗಿದೆ. ಏಕೆಂದರೆ ಖಾಸಗಿ ಟೆಲ್ಕೋಗಳು 60 ದಿನಗಳ ಸೇವಾ ಮಾನ್ಯತೆಯೊಂದಿಗೆ ಯೋಜನೆಯನ್ನು ನೀಡುವುದಿಲ್ಲ.