BSNL Rs 397 Recharge Plan Explained
BSNL Plan 2025: ಪ್ರಸ್ತುತ ಸರ್ಕಾರೀ ಸೌಮ್ಯದ ಟೆಲಿಕಾಂ ಕಂಪನಿ ಗ್ರಾಹಕರ ಕೈಗೆಟಕುವ ಮತ್ತು ಬಜೆಟ್‌ಗೆ ಅನುಗುಣವಾಗಿ ಸುಮಾರು 2 ದಿನಗಳ ವ್ಯಾಲಿಡಿಟಿಯಿಂದ 365 ದಿನಗಳ ವ್ಯಾಲಿಡಿಟಿಯವರೆಗೆ ಎಲ್ಲಾ ರೀತಿಯ ಅಗತ್ಯಗಳಿಗೆ ಸರಿಹೊಂದುವಂತೆ ಅನೇಕ ಪ್ರಿಪೇಯ್ಡ್ ಯೋಜನೆಗಳನ್ನು (Recharge Plan) ಹೊಂದಿದೆ. ಪ್ರಸ್ತುತ ಬಿಎಸ್ಎನ್ಎಲ್ ಈ 397 ರೂಗಳ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 2GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆಗಳನ್ನು ಬರೋಬ್ಬರಿ 150 ದಿನಗಳಿಗೆ ಅನ್ಲಿಮಿಟೆಡ್ ಕರೆಗಳನ್ನು ನೀಡುತ್ತಿದೆ. ನೀವು ಕಡಿಮೆ ಬೆಲೆಯಲ್ಲಿ ದೀರ್ಘ ಮಾನ್ಯತೆಯೊಂದಿಗೆ ಉತ್ತಮ ರೀಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ ಈ ಯೋಜನೆ ನಿಮಗೆ ಸೂಕ್ತವಾಗಲಿದೆ.
ಹೌದು ಈ ರಿಚಾರ್ಜ್ ಯೋಜನೆ ಬರೋಬ್ಬರಿ 5 ತಿಂಗಳಿಗೆ ಅಂದ್ರೆ 150 ದಿನಗಳಿಗೆ ಯಾವುದೇ ರಿಚಾರ್ಜ್ ಮಡುವ ತಲೆನೋವಿನಿಂದ ದೂರವಿಡುತ್ತದೆ ಈ ಮೂಲಕ ಒಮ್ಮೆ ಪರಿಶೀಲಿಸಲೇಬೇಕು ಯಾಕೆಂದರೆ ಈ ಬೆಲೆಗೆ ಇಷ್ಟು ಪ್ರಯೋಜನಗಳನ್ನು ಯಾರೂ ನೀಡುತ್ತಿಲ್ಲ. ಬಿಎಸ್ಎನ್ಎಲ್ (BSNL) ಕೈಗೆಟಕುವ ಬೆಲೆಗೆ ಹತ್ತಾರು ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ.
BSNL ಯೋಜನೆಯಲ್ಲಿ ಪ್ರತಿದಿನ 2GB ಡೇಟಾದೊಂದಿಗೆ ಉಚಿತ SMS ಸೌಲಭ್ಯವನ್ನು ನೀಡುತ್ತಿದೆ. ಪ್ರಸ್ತುತ ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ತನ್ನ ಗ್ರಾಹಕರಿಗೆ ಉತ್ತಮ ಮತ್ತು ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ.
BSNL ಇದರಲ್ಲಿ ನೀವು ಅನಿಯಮಿತ ಕರೆಯೊಂದಿಗೆ ದೀರ್ಘ ಮಾನ್ಯತೆಯನ್ನು ಪಡೆಯುತ್ತೀರಿ. ಅಲ್ಲದೆ ಮೇಲೆ ಹೇಳಿರುವಂತೆ 150 ದಿನಗಳ ಮಾನ್ಯತೆಯೊಂದಿಗೆ ಈ ಬೆಲೆಗೆ ಇಷ್ಟು ಪ್ರಯೋಜನಗಳನ್ನು ಯಾರೂ ನೀಡುತ್ತಿಲ್ಲ ಎನ್ನುವುದು ಗಮನಿಸಬೇಕಿದೆ. BSNL Recharge ಯೋಜನೆಯಲ್ಲಿ ನೀವು ದಿನಕ್ಕೆ 2GB ದೈನಂದಿನ ಡೇಟಾದ ಮಿತಿಯನ್ನು ಪಡೆಯುತ್ತೀರಿ. ದೈನಂದಿನ ಡೇಟಾ ಮಿತಿಯನ್ನು ಮೀರಿದ ನಂತರ ವೇಗವನ್ನು 40Kbps ಗೆ ಇಳಿಸಲಾಗುತ್ತದೆ.
Also Read: ಅಮೆಜಾನ್‌ನಲ್ಲಿ 6GB RAM ಮತ್ತು 50MP Sony AI ಕ್ಯಾಮೆರಾದ iQOO Z9 Lite 5G ಅತಿ ಕಡಿಮೆ ಬೆಲೆಗೆ ಮಾರಾಟ
BSNL ಈ ಯೋಜನೆಯಲ್ಲಿ ನೀವು BSNL ಟ್ಯೂನ್‌ಗಳು ಮತ್ತು ಇತರ ಹಲವು ಸೌಲಭ್ಯಗಳನ್ನು ಸಹ ಪಡೆಯುತ್ತೀರಿ. ದೀರ್ಘಾವಧಿಯ ಮಾನ್ಯತೆ ಮತ್ತು ಇಂಟರ್ನೆಟ್ ಬಳಕೆಗಾಗಿ ಇದು ಉತ್ತಮ ರೀಚಾರ್ಜ್ ಯೋಜನೆಯಾಗಿದೆ. ಇವುಗಳ ಜೊತೆಗೆ ಬಳಕೆದಾರರು ಪ್ರತಿದಿನ 100 ಉಚಿತ SMS ಮತ್ತು ಉಚಿತ ವೈಯಕ್ತಿಕಗೊಳಿಸಿದ ರಿಂಗ್ ಬ್ಯಾಕ್ ಟೋನ್ (PRBT) ಅನ್ನು ಪಡೆಯುತ್ತಾರೆ.