BSNL Plan: ಒಮ್ಮೆ ರಿಚಾರ್ಜ್ ಮಾಡಿಕೊಂಡರೆ 2 ತಿಂಗಳಿಗಿಂತ ಅಧಿಕ ದಿನಗಳಿಗೆ ಜಬರದಸ್ತ್ ಪ್ರಯೋಜನ ಆನಂದಿಸಿ!

Updated on 26-Sep-2025
HIGHLIGHTS

ಬಿಎಸ್ಎನ್ಎಲ್ 27ನೇ ಸೆಪ್ಟೆಂಬರ್ 2025 ರಿಂದ ದೇಶದಾದ್ಯಂತ ತನ್ನ 4G ಸೇವೆಯನ್ನು ಪ್ರಾರಂಭಿಸಲಿದೆ

BSNL Plan ಅಡಿಯಲ್ಲಿ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ 72 ದಿನಗಳ ಯೋಜನೆಯನ್ನು ಸಹ ಘೋಷಿಸಿದೆ.

ಈ ರೀಚಾರ್ಜ್ ಪ್ಲಾನ್ ಅನ್ಲಿಮಿಟೆಡ್ ಕರೆ ಮತ್ತು ಡೇಟಾದೊಂದಿಗೆ ಹಲವಾರು ಇತರ ಪ್ರಯೋಜನಗಳನ್ನು ನೀಡುತ್ತದೆ.

BSNL Plan: ಭಾರತದಾದ್ಯಂತ ತನ್ನ 4G ಸೇವೆಯನ್ನು ಬಿಡುಗಡೆ ಮಾಡಲಿದ್ದು ಇದನ್ನು 27ನೇ ಸೆಪ್ಟೆಂಬರ್ 2025 ರಂದು ದೇಶದ ಪ್ರತಿಯೊಂದು ಟೆಲಿಕಾಂ ವೃತ್ತದಲ್ಲಿ ತನ್ನ 4G ಸೇವೆಯನ್ನು ಪ್ರಾರಂಭಿಸಲಿದೆ. ಇದರೊಂದಿಗೆ ಬಿಎಸ್ಎನ್ಎಲ್ ಪೂರ್ತಿ 72 ದಿನಗಳಿಗೆ ಅತಿ ಕಡಿಮೆ ಬೆಲೆಯ ಯೋಜನೆಯನ್ನು 485 ರೂಗಳಿಗೆ ಬಿಡುಗಡೆ ಮಾಡಿದೆ. BSNL ದೇಶದ ಪ್ರತಿಯೊಂದು ಟೆಲಿಕಾಂ ಪ್ರದೇಶದಲ್ಲಿ 1 ಲಕ್ಷ ಹೊಸ 4G/5G ಟವರ್‌ಗಳನ್ನು ಸ್ಥಾಪಿಸಿದ್ದು 4G ಸೇವೆಯ ಪ್ರಾರಂಭದೊಂದಿಗೆ ತಮ್ಮ ಬಳಕೆದಾರರು ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಪಡೆಯುವುದರ ಜೊತೆಗೆ ಕರೆ ಸಂಪರ್ಕ ಕಡಿತ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾರೆ.

Also Read: ಅಮೆಜಾನ್ ಸೇಲ್‌ನಲ್ಲಿ Samsung Galaxy A36 5G ಸ್ಮಾರ್ಟ್ ಫೋನ್ ಭರ್ಜರಿ ಡಿಸ್ಕೌಂಟ್‌ಗಳೊಂದಿಗೆ ಲಭ್ಯ!

ಬಿಎಸ್‌ಎನ್‌ಎಲ್‌ನ 72 ದಿನಗಳ ವ್ಯಾಲಿಡಿಟಿಯ ಪ್ಲಾನ್ (BSNL Plan)

ಬಿಎಸ್ಎನ್ಎಲ್ ಪೂರ್ತಿ 72 ದಿನಗಳಿಗೆ ಅತಿ ಕಡಿಮೆ ಬೆಲೆಯ ಯೋಜನೆಯನ್ನು 485 ರೂಗಳಿಗೆ ಬಿಡುಗಡೆ ಮಾಡಿದೆ. ಈ ಯೋಜನೆಯಡಿಯಲ್ಲಿ ಬಳಕೆದಾರರು ಭಾರತದಾದ್ಯಂತ ಯಾವುದೇ ಸಂಖ್ಯೆಗೆ ಅನಿಯಮಿತ ಉಚಿತ ಕರೆ ಮಾಡುವ ಪ್ರಯೋಜನವನ್ನು ಪಡೆಯುತ್ತಾರೆ. ಇದರ ಹೊರತಾಗಿ ಬಳಕೆದಾರರು ಉಚಿತ ರಾಷ್ಟ್ರೀಯ ರೋಮಿಂಗ್ ಸೇರಿದಂತೆ ಹಲವು ಇತರ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.

ಈ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 2GB ಹೈ-ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ ಅಂದರೆ ಒಟ್ಟು 144GB ಡೇಟಾ. ಇದು ಮಾತ್ರವಲ್ಲದೆ BSNL ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 100 ಉಚಿತ SMS ಗಳ ಪ್ರಯೋಜನವನ್ನು ಸಹ ಪಡೆಯುತ್ತಾರೆ. BSNL ತನ್ನ X ಹ್ಯಾಂಡಲ್‌ನಿಂದ ಈ ಯೋಜನೆಯನ್ನು ಪ್ರಕಟಿಸಿದೆ.

ಬಿಎಸ್ಎನ್ಎಲ್ ತಮ್ಮ BiTV ಉಚಿತ ಪ್ರವೇಶ:

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯು ತನ್ನ ಎಲ್ಲಾ ಮೊಬೈಲ್ ಬಳಕೆದಾರರಿಗೆ BiTV ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯು ಬಳಕೆದಾರರಿಗೆ 300 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು ಮತ್ತು OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಒಂದು ಪೋಸ್ಟ್‌ನಲ್ಲಿ BSNL ಅಕ್ಟೋಬರ್ 15 ರವರೆಗೆ ಈ ಯೋಜನೆಗೆ ಕೊಡುಗೆಯನ್ನು ಘೋಷಿಸಿದೆ. ಅಂದರೆ ಬಳಕೆದಾರರು 15ನೇ ಅಕ್ಟೋಬರ್ 2025 ರವರೆಗೆ ಮಾತ್ರ ರೀಚಾರ್ಜ್ ಮಾಡಬಹುದು.

Also Read: Check PF Balance: ಪ್ರತಿ ತಿಂಗಳ ಸಂಬಳದಿಂದ ಕಡಿತವಾದ ಪಿಎಫ್ ಬ್ಯಾಲೆನ್ಸ್ ಈ ರೀತಿ ಚೆಕ್ ಮಾಡಿಕೊಳ್ಳಬಹುದು!

ಈ ಕೊಡುಗೆಯ ಅಡಿಯಲ್ಲಿ ಬಳಕೆದಾರರು BSNL ಸೆಲ್ಫ್‌ಕೇರ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ತಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಿದರೆ 2% ಕ್ಯಾಶ್‌ಬ್ಯಾಕ್ ಅನ್ನು ಪಡೆಯುತ್ತಾರೆ ಅಂದರೆ ಅವರು ₹10 ವರೆಗೆ ಪ್ರಯೋಜನ ಪಡೆಯಬಹುದು. 4G ನೆಟ್‌ವರ್ಕ್ ಜೊತೆಗೆ 5G ನೆಟ್‌ವರ್ಕ್‌ಗಳನ್ನು ಹೊರತರಲು ಸಿದ್ಧತೆ ನಡೆಸುತ್ತಿದೆ. ಕಂಪನಿಯು ಇತ್ತೀಚೆಗೆ ಹೈದರಾಬಾದ್ ಸೇರಿದಂತೆ ಹಲವಾರು ನಗರಗಳಲ್ಲಿ ಮತ್ತು ಬೆಂಗಳೂರು ಸೇರಿದಂತೆ ಹಲವಾರು ದಕ್ಷಿಣ ಭಾರತದ ನಗರಗಳಲ್ಲಿ ತನ್ನ 5G FWA ನೆಟ್‌ವರ್ಕ್ ಅನ್ನು ಪ್ರಾರಂಭಿಸಿತು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :