BSNL Recharge Plan
BSNL Plan 2025: ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿಯಾಗಿರುವ BSNL ಈಗ ಅತಿ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆಯೊಂದನ್ನು ಪರಿಚಯಿಸಿದೆ. ನೀವು ಪ್ರಸ್ತುತ ದುಬಾರಿ ರೀಚಾರ್ಜ್ ಯೋಜನೆಗಳಿಂದ ತುಂಬಿರುವ Jio, Airtel ಮತ್ತು Vi ಕಂಪನಿಗಳ ಅಡಿಯಲ್ಲಿ ಈ ಎಚ್ಚಳಕ್ಕೆ ಹೊಸ ಪರಿಹಾರ ಪಡೆಯಲು ಬಯಸಿದರೆ ನೇರವಾಗಿ BSNL ಸಿಮ್ ಖರೀದಿ ಮಾಡಿ ಒಂದು ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಸರ್ಕಾರಿ ಕಂಪನಿಯು ಅನೇಕ ಕೈಗೆಟುಕುವ ಯೋಜನೆಗಳನ್ನು ನೀಡುತ್ತಿದ್ದರೂ ಕಡಿಮೆ ವೆಚ್ಚದಲ್ಲಿ ಅನಿಯಮಿತ ಕರೆಯಂತಹ ಪ್ರಯೋಜನಗಳನ್ನು ಬಯಸುವವರಿಗೆ ಸೂಕ್ತವಾದ ಕೆಲವು ಯೋಜನೆಗಳಿವೆ.
BSNL ಪರಿಚಯಿಸಿರುವ ಈ ಹೊಸ ರಿಚಾರ್ಜ್ ಯೋಜನೆಯಿಂದಾಗಿ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳಿಗೆ ಸಮಸ್ಯೆಗಳು ಉದ್ಭವಿಸಬಹುದು. ಯಾಕೆಂದರೆ ಪ್ರತಿ ಬಾರಿ ಬೆಲೆ ಏರಿಸುತ್ತಿರುವ ಈ ಟೆಲಿಕಾಂ ಕಂಪನಿಗಳ ಸ್ಪರ್ಧೆಯಲ್ಲಿ BSNL ಈ ರೀತಿಯ ಕಡಿಮೆ ಬೆಲೆಯ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ.
ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿರುವುದು ಪ್ರೈವೈಟ್ ಕಂಪನಿಗಳಿಗೆ ನಿಜಕ್ಕೂ ಸಹಿಸುತಿಲ್ಲ ಎನ್ನುವುದು ಸ್ಪಷ್ಟವಾಗಿ ಭಾಷಾವಾಗುತ್ತದೆ. ಅಲ್ಲದೆ ಈ BSNL ರೀತಿಯ ಕಂಪನಿ ಮಾರುಕಟ್ಟೆಯಲ್ಲಿ ಇರಲೇಬೇಕು ಇಲ್ಲವಾದರೆ ಲಗಾಮಿಲ್ಲದೆ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಬೆಲೆ ಸೇರಿಸಲು ಜನ ಸಾಮಾನ್ಯರ ಪರಿಸ್ಥಿಯಿತಿಯ ಬಗ್ಗೆ ಒಂದಿಷ್ಟು ಚಿಂತಿಸೋದೆ ಇಲ್ಲ.
Also Read: Infinix Smart 9 HD ಇಂದಿನಿಂದ ಮಾರಾಟಕ್ಕೆ ಲಭ್ಯ! ಕೇವಲ ₹6,199 ರೂಗಳ ಆಫರ್ನೊಂದಿಗೆ ಫೀಚರ್ಗಳೇನು ತಿಳಿಯಿರಿ!
ಬಿಎಸ್ಎನ್ಎಲ್ ರೂ. 99 ಅತಿ ಕಡಿಮೆ ಬೆಲೆಯ ಯೋಜನೆಯಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ 17 ದಿನಗಳ ವ್ಯಾಲಿಡಿಟಿ ಹೊಸ ಪ್ಲಾನ್ ಪರಿಚಯಿಸಿದೆ. ಬಿಎಸ್ಎನ್ಎಲ್ ನೀಡುತ್ತಿರುವ ಈ 99 ರೂಗಳ ರಿಚಾರ್ಜ್ ಯೋಜನೆಯು ನಿಮಗೆ 17 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದರಲ್ಲಿ ಅನಿಯಮಿತ ಕರೆ ಸೌಲಭ್ಯ ಮಾತ್ರ ಲಭ್ಯವಿದೆ. ನೀವು BSNL ಸಿಮ್ ಅನ್ನು ಸೆಕೆಂಡರಿ ಸಿಮ್ ಆಗಿ ಬಳಸುತ್ತಿದ್ದರೆ ಇದು ನಿಮಗೆ ಸರಿಯಾದ ಯೋಜನೆಯಾಗಿರಬಹುದು.
BSNL ಕಡಿಮೆ ವೆಚ್ಚದಲ್ಲಿ ತಮ್ಮ ಸಿಮ್ ಅನ್ನು ಸಕ್ರಿಯವಾಗಿಡಲು ಬಯಸುವವರಿಗೆ ಸರ್ಕಾರಿ ಕಂಪನಿಯ ಈ ಯೋಜನೆ ಅತ್ಯುತ್ತಮವಾಗಿದೆ. ಮತ್ತೊಂದೆಡೆ ಸಿಮ್ ಅನ್ನು ಸಕ್ರಿಯವಾಗಿಡಲು ಏರ್‌ಟೆಲ್-ಜಿಯೋ ಯೋಜನೆಗಳು ದುಬಾರಿಯಾಗಿವೆ. ನೀವು ಜಿಯೋ ಅಥವಾ ಏರ್‌ಟೆಲ್ ಸಿಮ್ ಅನ್ನು ಸೆಕೆಂಡರಿ ಸಿಮ್ ಆಗಿ ಬಳಸಿದರೆ ನೀವು ಅದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಆದರೆ ಬಿಎಸ್‌ಎನ್‌ಎಲ್‌ನಲ್ಲಿ ಹಾಗಲ್ಲ.