BSNL 150 Days Plan: ಪ್ರಸ್ತುತ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಬಳಕೆದಾರರಿಗೆ ಅತ್ಯುತ್ತಮ ರಿಚಾರ್ಜ್ ಯೋಜನೆಗಳನ್ನು ಕೈಗೆಟಕುವ ಬೆಲೆಗೆ ನೀಡುವುದು ನಿಮಗೆ ತಿಳಿದಿದೆ. ಈ ಮೂಲಕ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಈ 397 ರೂಗಳ ಪ್ರಿಪೇಯ್ಡ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಪ್ರಸ್ತುತ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ನೀಡದ ಜಬರ್ದಸ್ತ್ ಆಫರ್ ಬಿಎಸ್ಎನ್ಎಲ್ (BSNL) ನೀಡುತ್ತಿದೆ. ಕೇವಲ 397 ರೂಗಳಿಗೆ ಬರೋಬ್ಬರಿ 5 ತಿಂಗಳ ರಿಚಾರ್ಜ್ ಯೋಜನೆಯನ್ನು ಅನ್ಲಿಮಿಟೆಡ್ ಕರೆ ಮತ್ತು ಡೇಟಾದೊಂದಿಗೆ ನೀಡುತ್ತಿದೆ.
ಬಿಎಸ್ಎನ್ಎಲ್ (BSNL) ಕಂಪನಿಯ ರೂ 397 ಯೋಜನೆಯು ಬರೋಬ್ಬರಿ 150 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಮಾತನಾಡಲು ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ. ಇದಲ್ಲದೆ ಯೋಜನೆಯಲ್ಲಿ ಪ್ರತಿದಿನ 100 SMS ಸಹ ಲಭ್ಯವಿದೆ. ಈ ಯೋಜನೆಯು ಇಂಟರ್ನೆಟ್ ಬಳಕೆಗಾಗಿ ಪ್ರತಿದಿನ 2GB ಡೇಟಾವನ್ನು ಒದಗಿಸುತ್ತದೆ. ದೈನಂದಿನ ಮಿತಿಯ ನಂತರ ವೇಗವು 40 Kbps ಗೆ ಕಡಿಮೆಯಾಗುತ್ತದೆ.
ಈ ಬಿಎಸ್ಎನ್ಎಲ್ ಯೋಜನೆಯಲ್ಲಿ ನಿಮಗೆ ಒಟ್ಟು 60GB ಡೇಟಾವನ್ನು ನೀಡುತ್ತದೆ. ಆದರೆ ಇದರಲ್ಲಿ ನೀವು ಗಮನಿಸಬೇಕಾದ ವಿಷಯವೆಂದರೆ ಇದರಲ್ಲಿ ಮೊದಲ 30 ದಿನಗಳವರೆಗೆ ಪೂರ್ಣ ಪ್ರಯೋಜನ ಲಭ್ಯವಿದೆ. ಆದರೆ ಸಿಮ್ 150 ದಿನಗಳವರೆಗೆ ಸಕ್ರಿಯವಾಗಿರುತ್ತದೆ. ಬಿಎಸ್ಎನ್ಎಲ್ (BSNL) ಈ ಯೋಜನೆಯು ನಿಮ್ಮ ಸಂಖ್ಯೆಯನ್ನು ಕಡಿಮೆ ಬೆಲೆಗೆ ಸಕ್ರಿಯವಾಗಿಡಲು ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸಬಹುದು.
ಇದನ್ನೂ ಓದಿ: OnePlus 13s Launch: ಮುಂಬರಲಿರುವ ಒನ್ಪ್ಲಸ್ ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು!
ಭಾರತ ಸರ್ಕಾರದ ಟೆಲಿಕಾಂ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕಡಿಮೆ ಬೆಲೆಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುವಲ್ಲಿ ಹೆಚ್ಚು ಹೆಸರುವಾಸಿಯಾಗಿರುವುದು ನಿಮಗೆ ತಿಳಿದಿದೆ. ನಿಮಗೆ Jio, Airtel ಅಥವಾ Vi ಈ ವ್ಯಾಲಿಡಿಟಿಯನ್ನು ಸುಮಾರು 150 ದಿನಗಳ ಮಾನ್ಯತೆಯ ಯೋಜನೆಯನ್ನು ನೋಡುವುದಾದರೆ ಸುಮಾರು 1500 ರೂಗಳಿಗೂ ಅಧಿವಾಗಿರುವುದನ್ನು ಗಮನಿಸಬಹುದು. ಆದರೆ ಅದೇ 150 ದಿನಗಳ ಮಾನ್ಯತೆಯನ್ನು ಕೇವಲ 397 ರೂಗಳಿಗೆ ನೀಡುತ್ತಿರುವ ಏಕೈಕ ಟೆಲಿಕಾಂ ಕಂಪನಿ ಅಂದರೆ ತಪ್ಪಿಲ್ಲ ಬಿಡಿ.