4G BSNL Plans: 10GB ಡೇಟಾ Rs100 ರೂಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ

Updated on 13-Feb-2020
HIGHLIGHTS

ಹೆಚ್ಚಿನ ಡೇಟಾ ಬಳಸುವ ಅಭ್ಯಾಸವನ್ನು ಹೊಂದಿರುವ ಬಳಕೆದಾರರಿಗಾಗಿ BSNL ಎರಡು ಅತ್ಯಂತ ಸ್ಫೋಟಕ ಪ್ಲಾನ್ ನೀಡುತ್ತಿದೆ

ಭಾರತದಲ್ಲಿ ಬಹುತೇಕ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಸುಂಕ ಪ್ಲಾನ್ಗಳ ಬೆಲೆಯನ್ನು 2019 ರ ಅಂತ್ಯದ ವೇಳೆಗೆ ಹೆಚ್ಚಿಸಿದ್ದರೂ BSNL ತನ್ನ ಬಳಕೆದಾರರಿಗಾಗಿ ಈ ಕೆಲಸವನ್ನು ಇನ್ನೂ ಮಾಡಿಲ್ಲ ಅಂದರೆ ಬಿಎಸ್‌ಎನ್‌ಎಲ್‌ನಿಂದ ಇದುವರೆಗೆ ಅದರ ಸುಂಕ ಯೋಜನೆಗಳ ಬೆಲೆಯಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ. ಆದರೆ ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್-ಐಡಿಯಾ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಆದರೆ ಇಲ್ಲಿಯವರೆಗೆ ಯೋಜನೆಗಳನ್ನು BSNL ಮೊದಲಿನಂತೆಯೇ ಅದೇ ದರದಲ್ಲಿ ಒದಗಿಸುತ್ತಿದೆ. ಈ ಪ್ಲಾನ್ಗಳಲ್ಲಿ ನಿಮಗೆ ಪ್ರತಿದಿನ 10GB ಡೇಟಾವನ್ನು ನೀಡಲಾಗುತ್ತಿದೆ. ಈ ಪ್ಲಾನ್ಗಳ ವ್ಯಾಲಿಡಿಟಿ ಕ್ರಮವಾಗಿ 28 ಮತ್ತು 84 ದಿನಗಳಾಗಲಿವೆ.

ಮೊದಲಿದೆ ಈ 96 ರೂಗಳ ಬೆಲೆಯಲ್ಲಿ ಈ ಯೋಜನೆಯನ್ನು ಕಂಪನಿಯು 28 ದಿನಗಳ ಮಾನ್ಯತೆಯೊಂದಿಗೆ ಪ್ರಾರಂಭಿಸಿದೆ. ಇದಲ್ಲದೆ ಈ ಯೋಜನೆಯಲ್ಲಿ ಪ್ರತಿದಿನ 10GB ಡೇಟಾವನ್ನು ನೀಡಲಾಗುತ್ತಿದೆ. ಇದರೊಂದಿಗೆ ಈ ಯೋಜನೆಯಲ್ಲಿ ನೀವು ಒಟ್ಟು 280GB ಡೇಟಾವನ್ನು ಪಡೆಯುತ್ತಿರುವಿರಿ. ಹಾಗೆಯೇ ಈ ಮಶವನ್ನು ಗಮನದಲ್ಲಿಡಿ ಇದು ಕೇವಲ ಡೇಟಾ ಪ್ಲಾನ್ ಆಗಿದ್ದು ಈ ಪ್ಲಾನಲ್ಲಿ ನಿಮಗೆ ಬೇರೆ ಯಾವುದೇ ಪ್ರಯೋಜನ ಸಿಗೋದಿಲ್ಲ ಅಂದರೆ ನಿಮಗೆ ಕರೆ ಮತ್ತು ಎಸ್‌ಎಂಎಸ್ ಸೌಲಭ್ಯ ಸಿಗುತ್ತಿಲ್ಲ.

ಮತ್ತೊಂದು 236 ರೂಗಳ ಬೆಲೆಯಲ್ಲಿ ಈ ಯೋಜನೆಯನ್ನು ಕಂಪನಿಯು 84 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮತ್ತು ಈ ಯೋಜನೆಯಲ್ಲಿ ನಿಮಗೆ 10GB ದೈನಂದಿನ ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ನೀವು ಡೇಟಾ ಪ್ರಯೋಜನಗಳನ್ನು ಮಾತ್ರ ಪಡೆಯುತ್ತಿರುವಿರಿ. ಇದಲ್ಲದೆ ಕರೆ ಮತ್ತು ಎಸ್‌ಎಂಎಸ್ ಅಥವಾ ಇತರ ಯಾವುದೇ ಪ್ರಯೋಜನಗಳೂ ಸಹ ಈ ಯೋಜನೆಯಲ್ಲಿ ಲಭ್ಯವಿಲ್ಲ. ಈ ಯೋಜನೆಯಲ್ಲಿ ನೀವು 10Mbps ವೇಗವನ್ನು ಪಡೆಯುತ್ತಿದ್ದೀರಿ ಅಂದರೆ ಈ ಸಂದರ್ಭದಲ್ಲಿ ಕಂಪನಿಯು ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ಅನ್ನು ಹಿಂದಕ್ಕೆ ಇಟ್ಟಿದೆ.

ಇತ್ತೀಚೆಗೆ ನಮಗೆ ತಿಳಿದಿರುವಲ್ಲಿ BSNL ತನ್ನ 4G ನೆಟ್ವರ್ಕ್ ಅನ್ನು ದೊಡ್ಡ ರೀತಿಯಲ್ಲಿ ವಿಸ್ತರಿಸಿದೆ. ಆದರೆ ಇಲ್ಲಿಯವರೆಗೆ ಅಂದ್ರೆ ಸದ್ಯಕ್ಕೆ ಈ ಯೋಜನೆಗಳನ್ನು ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಕೋಲ್ಕತಾ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಚೆನ್ನೈ, ತಮಿಳುನಾಡು, ಮತ್ತು ಮಧ್ಯಪ್ರದೇಶ ವಲಯಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಅತಿ ಶೀಘ್ರದಲ್ಲೇ ದೇಶದಾದ್ಯಂತ ಬರುವ ನಿರೀಕ್ಷೆಯಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :