bsnl launch soon 5G service Quantum 5G FWA in Select Circles
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕೊನೆಗೂ ತನ್ನ ಮೊಬೈಲ್ 5G ಸೇವೆಗಳನ್ನು ಮೊದಲಿಗೆ ಆಯ್ದ ನಗರಗಳಲ್ಲಿ ಕೆಲವೇ ತಿಂಗಳುಗಳಲ್ಲಿ ಆರಂಭಿಸುವುದಾಗಿ ಅಧಿಕೃತ ಮಾಹಿತಿಯನ್ನು ಬಿಎಸ್ಎನ್ಎಲ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. “ನಾವು ದೆಹಲಿಯಲ್ಲಿ ನೆಟ್‌ವರ್ಕ್ ಆಸ್ ಎ ಸರ್ವಿಸ್ (NaaS) ಮೂಲಕ BSNL 5G ನೆಟ್‌ವರ್ಕ್ ಅನ್ನು ಹೊರತರಲು ಸಿದ್ದರಾಗಿದ್ದೇವೆ ಈಗ ನಾವು ಇದರ ವೇಗದತ್ತ ಕೆಲಸ ಮಾಡುತ್ತಿದ್ದು ಕೆಲವೇ ತಿಂಗಳುಗಳಲ್ಲಿ ಮೊದಲಿಗೆ ಪ್ರಮುಖ ನಗರಗಳನ್ನು ಆಯ್ಕೆ ಮಾಡಿದ ನಂತರ ಸಾಧ್ಯವಾದಷ್ಟು ಬೇಗ BSNL 5G ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಿದ್ದೇವೆ” ಎಂದು ಬಿಎಸ್ಎನ್ಎಲ್ ಕಂಪನಿಯ ಸಿಎಂಡಿ ಆಗಿರುವ ರಾಬರ್ಟ್ ಜೆ ರವಿ ತಿಳಿಸಿದ್ದಾರೆ.
ಈಗಾಗಲೇ ಬಿಎಸ್ಎನ್ಎಲ್ ತನ್ನ ಈ 5G ನೆಟ್ವರ್ಕ್ ಅನ್ನು ಆಯ್ದ 3 ಜನಪ್ರಿಯ ದೆಹಲಿಯ ಪ್ರದೇಶಗಳಾಗಿರುವ ನೆಹರು ಪ್ಲೇಸ್, ಚಾಣಿಕ್ಯಪುರಿ ಮತ್ತು ಮಿಂಟೋ ರೋಡ್ ಅಲ್ಲಿ ಹಲವು ತಿಂಗಳುಗಳಿಂದ ಪರೀಕ್ಷೆ ಮಾಡುತ್ತಿದೆ. ಪ್ರಸ್ತುತ ಉತ್ತಮ ಫಲಿತಾಂಶವನ್ನು ಪಡೆದಿರುವ BSNL ಶೀಘ್ರದಲ್ಲೇ ಜನಸಾಮಾನ್ಯರ ಬಳಕೆಗೆ ಲಭ್ಯಗೊಳಿಸಲಿದೆ.
ಈಗಷ್ಟೇ ದೆಹಲಿಯಲ್ಲಿ ನಡೆದ ETTelecom 2025 ಪ್ರಶಸ್ತಿಗಳ ಕಾರ್ಯಕ್ರಮದಲ್ಲಿ ಉನ್ನತ ಟೆಲಿಕಾಂ ಆಪರೇಟರ್‌ಗಳಾದ Jio, Airtel, BSNL ಮತ್ತು Vi ಜೊತೆಗೆ ದೂರಸಂಪರ್ಕ ಇಲಾಖೆ (DoT) ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹಿರಿಯ ಸರ್ಕಾರಿ ಮತ್ತು ನಿಯಂತ್ರಕ ಅಧಿಕಾರಿಗಳ ಹಾಜರಿಯಲ್ಲಿ ಮುಂಬರಲಿರುವ ಈ BSNL 5G ಪ್ರಸ್ತಾಪವನ್ನು ಇಟ್ಟಿದ್ದು ಪ್ರೈವೇಟ್ ಕಂಪನಿಗಳಿಗೆ ತಲೆ ಕೇಡಿಸಿದೆ.
Also Read: ಸ್ಯಾಮ್‌ಸಂಗ್‌ನಿಂದ 4K ವಿಡಿಯೋ ರೆಕಾರ್ಡ್ ಮಾಡುವ Galaxy A26 5G ಭಾರಿ ಡಿಸ್ಕೌಂಟ್‌ನೊಂದಿಗೆ ಮಾರಾಟ!
ಬಿಎಸ್ಎನ್ಎಲ್ ಟೆಲಿಕಾಂ ಕಂಪನಿ ತನ್ನ ನೆಟ್‌ವರ್ಕ್‌ನಲ್ಲಿ 4G ಜೊತೆಗೆ ಏಕಕಾಲದಲ್ಲಿ 5G ಸೇವೆಗಳನ್ನು ಸಕ್ರಿಯಗೊಳಿಸಲು ನೋಡುತ್ತಿದೆ. ಕಳೆದ ವರ್ಷ ಬಿಎಸ್‌ಎನ್‌ಎಲ್ ದೆಹಲಿಯಲ್ಲಿ ಸ್ಥಳೀಯ ಮಾರಾಟಗಾರರೊಂದಿಗೆ NaaS ಮಾದರಿಯನ್ನು ಆಧರಿಸಿದ 5G ಸೇವೆಗಳಿಗಾಗಿ ಪೈಲಟ್ ಕಾರ್ಯಕ್ರಮವನ್ನು ನಡೆಸಿತು. ಮುಂಬೈ ಮೂಲದ ಟಾಟಾ ಕನ್ಸಲೆನ್ಸಿ ಸರ್ವೀಸಸ್ (TCS) ನೇತೃತ್ವದ ಒಕ್ಕೂಟವು ಸರ್ಕಾರಿ ಸ್ವಾಮ್ಯದ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DoT) ಅನ್ನು ಒಳಗೊಂಡಿದ್ದು, ಪ್ರಸ್ತುತ ಬಿಎಸ್‌ಎನ್‌ಎಲ್ ವಾಣಿಜ್ಯ 4G ಸೇವೆಗಳಿಗಾಗಿ 1 ಲಕ್ಷ ಸೈಟ್‌ಗಳನ್ನು ನಿಯೋಜಿಸುತ್ತಿದೆ. 5G ತಂತ್ರಜ್ಞಾನವು ಉದ್ಯಮವು ಸಮಾಜಕ್ಕೆ ಸೇವೆ ಸಲ್ಲಿಸಲು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಹಾಯ ಮಾಡಲು ಸಜ್ಜಾಗಿದೆ.