BSNL Plan 2025: ಭಾರತದಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ಕೇವಲ ವಾಯ್ಸ್ ಮತ್ತು SMS ನೀಡುವ ಎರಡು ಹೊಸ ₹99 ರೂ ಮತ್ತು ರೂ ₹439 ರೂಗಳ ಯೋಜನೆಗಳನ್ನು ಪರಿಚಯಿಸಿದೆ. ಕೊನೆಯದಾಗಿ ಈ BSNL ಸಹ ತನ್ನ ಹೊಸ ಡೇಟಾವಿಲ್ಲದ ಯೋಜನೆಗಳಲ್ಲಿ ಹೆಚ್ಚುವರಿಯ ಪ್ರಯೋಜನಗಳೊಂದಿಗೆ ಬಿಡುಗಡೆಗೊಳಿಸಿದೆ. ಹಾಗಾದ್ರೆ BSNL ತಂದಿರುವ ಈ ಹೊಸ ಯೋಜನಗೆಳ ಬೆಲೆ ಎಷ್ಟು ಮತ್ತು ಇವುಗಳ ಪ್ರಯೋಜನಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಸಾಮಾನ್ಯವಾಗಿ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್ಎಲ್‌ನಿಂದ ಅನೇಕ ಬೆಸ್ಟ್ ಯೋಜನೆಗಳನ್ನು ಪಡೆಯಬಹುದು. ಅಂದ್ರೆ ಪ್ರೈವೆಟ್ ಕಂಪನಿಗಳಾಗಿರುವ Jio, Airtel ಮತ್ತು Vi ಕಂಪನಿಗಳ ಬೆಲೆಗೆ ಹೋಲಿಸಿದರೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನಗಳನ್ನು ನೀಡುವ ಏಕೈಕ ಟೆಲಿಕಾಂ ಕಂಪನಿ BSNL ಆಗಿದೆ.
ಆದರೆ ಜನರು ಇದರ ನೆಟ್ವರ್ಕ್ ಅಷ್ಟಾಗಿ ಉತ್ತಮವಲ್ಲದ ಕಾರಣ ಹೆಚ್ಚು ಗಮನ ಹರಿಸುತ್ತಿಲ್ಲ. ಆದರೆ ಬಳಕೆದಾರರೆ ನಿಮ್ಮ ಗಮನಕ್ಕೆ ಹೇಳುವುದಾದರೆ ಕಂಪನಿ ಈಗಾಗಲೇ 5G ಸೇವೆಯನ್ನು ನೀಡಲು ಈಗಾಗಲೇ ಪರೀಕ್ಷಿಸುತ್ತಿದೆ. ಅಲ್ಲದೆ BSNL ನೆಟ್ವರ್ಕ್ ಅನ್ನು ಸುಧಾರಿಸುವ ಕೆಲಸಕ್ಕಾಗಿ TATA TCS ಅನ್ನು ಆಯ್ದು ಈಗಾಗಲೇ 15,000 ಕೋಟಿಯ ಟೆಂಡರ್ ಸಹ ನೀಡಿದೆ. ಅಂದ್ರೆ ನೆಟ್ವರ್ಕ್ ನಿಜಕ್ಕೂ ಉತ್ತಮವಾಗಲಿದೆ.
BSNL ನ ರೂ 99 ಪ್ರಿಪೇಯ್ಡ್ ಯೋಜನೆಯು 17 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ ಮತ್ತು ಬೇರೇನೂ ಇಲ್ಲ. ಇದು ಮೂಲತಃ ಅನಿಯಮಿತ ವಾಯ್ಸ್ ಕರೆಯೊಂದಿಗೆ ಕರೆ ಮಾಡುವ ವೋಚರ್ ಆಗಿದೆ. ಇದು ಮುಂಬೈ ಮತ್ತು ದೆಹಲಿ ಸೇರಿದಂತೆ ಭಾರತದ ಎಲ್ಲೆಡೆ ಕೆಲಸ ಮಾಡುತ್ತದೆ.
Also Read: Jio vs Airtel: ಜಿಯೋ ಮತ್ತು ಏರ್‌ಟೆಲ್‌ನ ಹೊಸ Voice ಮತ್ತು SMS ನೀಡುವ ಈ ಯೋಜನೆಯಲ್ಲಿ ಯಾವುದು ಬೆಸ್ಟ್?
BSNL ನಿಂದ ರೂ 439 ಯೋಜನೆಯೊಂದಿಗೆ ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ಒಟ್ಟು 300 SMS ಅನ್ನು ಪಡೆಯುತ್ತಾರೆ. ಈ ಯೋಜನೆಯ ಸೇವಾ ಮಾನ್ಯತೆ 90 ದಿನಗಳಾಗಿವೆ. ತುಲನಾತ್ಮಕವಾಗಿ ಧ್ವನಿ ಮತ್ತು SMS ಗಾಗಿ BSNL ನ ಮಧ್ಯಮ-ಅವಧಿಯ ಯೋಜನೆಯು ನೀವು Airtel, Jio ಮತ್ತು Vi ನೊಂದಿಗೆ ಪಡೆಯುವುದಕ್ಕಿಂತ ಕಡಿಮೆಯಾಗಿದೆ.