BSNL ಟೆಲಿಕಾಂನ ಈ ಎರಡು ಜನಪ್ರಿಯ ರೀಚಾರ್ಜ್ ಪ್ಲಾನ್ಗಳಲ್ಲಿ ಈಗ ಭಾರೀ ಬದಲಾವಣೆ!
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಸಂಸ್ಥೆಯು ತನ್ನ 2,799 ರೂ.ಗಳ ಮತ್ತು 2,449 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ವ್ಯಾಲಿಡಿಟಿಯನ್ನು ಹೆಚ್ಚಿಸಿದೆ. ಈಗಾಗಲೇ ದೀರ್ಘಾವಧಿಯ ವ್ಯಾಲಿಡಿಟಿ ಹೊಂದಿದ್ದ ಈ ಎರಡೂ ಪ್ಲಾನ್ಗಳಿಗೆ ಕಂಪನಿಯು ಹೆಚ್ಚುವರಿ ದಿನಗಳನ್ನು ಸೇರಿಸಿದ್ದು, ಗ್ರಾಹಕರಿಗೆ ಮತ್ತಷ್ಟು ಪ್ರಯೋಜನ ನೀಡಿದೆ. ಈ ಯೋಜನೆಗಳಲ್ಲಿ ಪ್ರತಿದಿನದ ಡೇಟಾ, ಅನಿಯಮಿತ ವಾಯ್ಸ್ ಕರೆ ಹಾಗೂ ಎಸ್ಎಮ್ಎಸ್ ಸೌಲಭ್ಯಗಳು ಲಭ್ಯವಿವೆ. ಪ್ರಮುಖವಾಗಿ ದೀರ್ಘಾವಧಿಯ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ರೀಪೇಯ್ಡ್ ಯೋಜನೆಗಳು ಉತ್ತಮ ಆಕರ್ಷಕ ಎನಿಸಬಹುದು. ಹಾಗಾದರೆ ಬಿಎಸ್ಎನ್ಎಲ್ ಟೆಲಿಕಾಂನ 2,799 ರೂ.ಗಳ ಮತ್ತು 2,449 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಮುಂದೆ ತಿಳಿಯೋಣ.
BSNL 2,799 ರೂ.ಗಳ ಪ್ಲಾನ್ ಪ್ರಯೋಜನಗಳು
BSNL ಟೆಲಿಕಾಂನ 2,799 ರೂ.ಗಳ ಪ್ರಿಪೇಯ್ಡ್ ಯೋಜನೆಯು ಪ್ರತಿದಿನ 3GB ಹೈಸ್ಪೀಡ್ ಡೇಟಾ, ಅನಿಯಮಿತ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 ಎಸ್ಎಮ್ಎಸ್ ಸೌಲಭ್ಯವನ್ನು ನೀಡುತ್ತದೆ. ನಿಗದಿತ ದೈನಂದಿನ ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್ ವೇಗವು 40 Kbps ಗೆ ಇಳಿಕೆಯಾಗುತ್ತದೆ. ಈ ಯೋಜನೆಯ ಸಾಮಾನ್ಯ ವ್ಯಾಲಿಡಿಟಿ 365 ದಿನಗಳಾಗಿದ್ದು, ಇದೀಗ ಅದನ್ನು 395 ದಿನಗಳಿಗೆ ಹೆಚ್ಚಿಸಲಾಗಿದೆ. ಗ್ರಾಹಕರಿಗೆ ಹೆಚ್ಚುವರಿಯಾಗಿ 30 ದಿನಗಳ ವ್ಯಾಲಿಡಿಟಿ ಸಿಗಲಿದೆ.
ಬಿಎಸ್ಎನ್ಎಲ್ 2,449 ರೂ.ಗಳ ಪ್ಲಾನ್ ಪ್ರಯೋಜನಗಳು
ಬಿಎಸ್ಎನ್ಎಲ್ ಟೆಲಿಕಾಂನ 2,449 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿಯೂ ಗ್ರಾಹಕರಿಗೆ ಹೆಚ್ಚುವರಿ ವ್ಯಾಲಿಡಿಟಿ ನೀಡಲಾಗಿದೆ. ಈ ಯೋಜನೆಯು ಈಗ ಒಟ್ಟು 380 ದಿನಗಳ ವ್ಯಾಲಿಡಿಟಿ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಈ ಪ್ಲಾನಿನಲ್ಲಿ ಪ್ರತಿದಿನ 2GB ಡೇಟಾ, ಅನಿಯಮಿತ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 ಎಸ್ಎಮ್ಎಸ್ ಸೌಲಭ್ಯಗಳು ಲಭ್ಯವಿವೆ. ದೀರ್ಘಾವಧಿಯ ರೀಚಾರ್ಜ್ ಬಯಸುವವರಿಗೆ ಇದು ಕೈಗೆಟುಕುವ ಆಯ್ಕೆಯಾಗಿದೆ.
ಬಿಎಸ್ಎನ್ಎಲ್ ಟೆಲಿಕಾಂನ 2,799 ರೂ.ಗಳ ಮತ್ತು 2,449 ರೂ.ಗಳ ರೀಚಾರ್ಜ್ ಯೋಜನೆಗಳಿಗೆ ಹೆಚ್ಚುವರಿ ವ್ಯಾಲಿಡಿಟಿ ನೀಡಿರುವುದು ದೀರ್ಘಾವಧಿಯ ಪ್ಲಾನ್ಗಳನ್ನು ಬಯಸುವ ಗ್ರಾಹಕರಿಗೆ ಅನುಕೂಲಕರವಾಗಿದೆ. 2,799 ರೂ.ಗಳ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಸಿಗಲಿದ್ದು, ಹೆಚ್ಚಿನ ಡೇಟಾ ಬಳಸುವವರಿಗೆ ಇದು ಸೂಕ್ತವಾಗಿದೆ. ಇನ್ನು ಕಡಿಮೆ ದರದಲ್ಲಿ ದೀರ್ಘಾವಧಿಯ ವ್ಯಾಲಿಡಿಟಿ ಬಯಸುವವರು 2,449 ರೂ.ಗಳ ಯೋಜನೆಯನ್ನು ಪರಿಗಣಿಸಬಹುದು.