BSNL
BSNL Affordable Plans: ಪ್ರಸ್ತುತ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಕೈಗೆಟುಕುವ ರೀಚಾರ್ಜ್ ಯೋಜನೆಗಳೊಂದಿಗೆ ಮತ್ತೊಮ್ಮೆ ಗ್ರಾಹಕರನ್ನು ಆಕರ್ಷಿಸಿದೆ. ಬಿಎಸ್ಎನ್ಎಲ್ ವಿಶೇಷ ಯೋಜನೆಯು 180 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ಕರೆ ಸೇರಿದಂತೆ ಹಲವು ಉತ್ತಮ ಪ್ರಯೋಜನಗಳಿವೆ. ದುಬಾರಿ ರೀಚಾರ್ಜ್ ಯೋಜನೆಗಳಿಂದ ನಿಮ್ಮ ತಲೆ ನೋವಾಗಿದ್ದರೆ ಈ ಕಡಿಮೆ ವೆಚ್ಚದಲ್ಲಿ ದೀರ್ಘ ಮಾನ್ಯತೆಯ ಆಯ್ಕೆಯನ್ನು ಹುಡುಕುತ್ತಿದ್ದರೆ Bharat Sanchar Nigam Limited ನಿಮಗೊಂದು ಒಳ್ಳೆಯ ಸುದ್ದಿಯನ್ನು ನೀಡುತ್ತಿದೆ.
ಪ್ರಸ್ತುತ ಈ ಸರ್ಕಾರಿ ದೂರಸಂಪರ್ಕ ಕಂಪನಿ ಬಿಎಸ್ಎನ್ಎಲ್ ಹೊಸ ಬಜೆಟ್ ಸ್ನೇಹಿ ಯೋಜನೆಯನ್ನು ಪರಿಚಯಿಸಿದೆ. ಇದರ ಬೆಲೆ ಕೇವಲ ₹750 ರೂಗಳಾಗಿದ್ದು ಇದರ ವ್ಯಾಲಿಡಿಟಿ ಪೂರ್ತಿ 6 ತಿಂಗಳು ಅಥವಾ 180 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಸೂಪರ್ ಕೂಲ್ ರಿಚಾರ್ಜ್ ಯೋಜನೆಯನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಆರ್ಥಿಕ ದೀರ್ಘಾವಧಿಯ ರೀಚಾರ್ಜ್ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಯೋಜನೆಯಲ್ಲಿ ಏನು ವಿಶೇಷತೆಗಳಿವೆ ಎಲ್ಲವನ್ನು ಈ ಕೆಳಗೆ ವಿವರವಾಗಿ ಕಾಣಬಹುದು.
BSNL ಈ ಯೋಜನೆಯನ್ನು ಕೇವಲ GP-2 ವರ್ಗದ ಅಡಿಯಲ್ಲಿ ಇಟ್ಟಿದ್ದು ಈ ಅರ್ಹತೆಯಡಿಯಲ್ಲಿ ಬರುವ ಬಳಕೆದಾರರಿಗಾಗಿ ಮಾತ್ರ ವಿಶೇಷವಾಗಿ ಪರಿಚಯಿಸಲಾಗಿರುವ ಪ್ಲಾನ್ ಆಗಿದೆ. ಅಂದರೆ ತಮ್ಮ ಹಿಂದಿನ ರೀಚಾರ್ಜ್ ಅವಧಿ ಮುಗಿದ 7 ದಿನಗಳ ಒಳಗೆ ರೀಚಾರ್ಜ್ ಮಾಡದ ಬಳಕೆದಾರರಿಗಾಗಿ ಈ ಯೋಜನೆ ಅತ್ಯುತ್ತಮ ಆಯ್ಕೆಯಾಗಲಿದೆ.
ಇದನ್ನೂ ಓದಿ: ಭಾರತದಲ್ಲಿ iQOO Neo 10 ಫೋನ್ ಫಸ್ಟ್ ಲುಕ್ ಬಹಿರಂಗ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
ಇನ್ನೂ ಸರಳವಾಗಿ ಹೇಳುವುದಾದರೆ ಉದಾಹರಣೆಗೆ ರೀಚಾರ್ಜ್ ಅವಧಿ ಮುಗಿದ 7ನೇ ದಿನದಿಂದ 165ನೇ ದಿನದವರೆಗೆ ರೀಚಾರ್ಜ್ ಮಾಡದ ಬಳಕೆದಾರರು ಇದರಲ್ಲಿರುತ್ತಾರೆ. ಪ್ರಸ್ತುತ ಬಿಎಸ್‌ಎನ್‌ಎಲ್‌ನ ₹750 ಯೋಜನೆಯು 180 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಬರುತ್ತದೆ ಆದ್ದರಿಂದ ಗ್ರಾಹಕರು ಆಗಾಗ್ಗೆ ರೀಚಾರ್ಜ್ ಮಾಡಿಸಿಕೊಳ್ಳುವ ಅಥವಾ ಸಂಖ್ಯೆಯ ಸಂಪರ್ಕ ಕಡಿತಗೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ.
ಈ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಯೋಜನೆಯು 180 ದಿನಗಳವರೆಗೆ ಎಲ್ಲಾ ಸ್ಥಳೀಯ ಮತ್ತು ಎಸ್‌ಟಿಡಿ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಉಚಿತ ಕರೆಗಳನ್ನು ನೀಡುತ್ತದೆ. ಇದರೊಂದಿಗೆ ಪ್ರತಿದಿನ 100 ಉಚಿತ SMS ಲಭ್ಯವಿರುತ್ತದೆ. ಇಂಟರ್ನೆಟ್ ಬಳಕೆದಾರರಿಗೆ ಈ BSNL Recharge Plan ದಿನಕ್ಕೆ 1GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಅಂದರೆ 180 ದಿನಗಳಲ್ಲಿ ಒಟ್ಟು 180GB ಡೇಟಾ ಲಭ್ಯವಿರುತ್ತದೆ.
ಅಲ್ಲದೆ ದೈನಂದಿನ ಡೇಟಾ ಮಿತಿ ಮುಗಿದ ನಂತರವೂ ಗ್ರಾಹಕರು 40kbps ವೇಗದಲ್ಲಿ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತದೆ. ಬಿಎಸ್ಎನ್ಎಲ್ ಈ ಹೊಸ ಆಫರ್ ಅನ್ನು ವಿಶೇಷವಾಗಿ ಪದೇ ಪದೇ ರೀಚಾರ್ಜ್ ಮಾಡುವ ಬದಲು ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳನ್ನು ಆದ್ಯತೆ ನೀಡುವ ಬಜೆಟ್ ಸ್ನೇಹಿ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ತರಲಾಗಿದೆ. ಈ ಯೋಜನೆಯು ಏರ್‌ಟೆಲ್, ಜಿಯೋ ಮತ್ತು ವಿಐ ನಂತಹ ಇತರ ಟೆಲಿಕಾಂ ಕಂಪನಿಗಳ ಇದೇ ರೀತಿಯ ಕೊಡುಗೆಗಳೊಂದಿಗೆ ಸ್ಪರ್ಧಿಸಲು ಸಜ್ಜಾಗಿದೆ.