Jio, Airtel, Vi ಮತ್ತು BSNL ಹೊಂದಿರುವ ಅತಿ ಕಡಿಮೆ ಬೆಲೆಯ ಅತ್ಯುತ್ತಮ ವಾರ್ಷಿಕ ರಿಚಾರ್ಜ್ ಯೋಜನೆಗಳು ಇಲ್ಲಿವೆ!

Updated on 02-Jan-2026
HIGHLIGHTS

ಪ್ರತಿ ತಿಂಗಳು ರಿಚಾರ್ಜ್ ಮಾಡು ತಲೆನೋವಿನಿಂದ ದೂರವಿರಲು ಈ ವಾರ್ಷಿಕ ಪ್ಲಾನ್ ಒಮ್ಮೆ ಪರಿಶೀಲಿಸಬಹುದು.

Jio, Airtel, Vi ಮತ್ತು BSNL ಹೊಂದಿರುವ ಅತಿ ಕಡಿಮೆ ಬೆಲೆಯ ಅತ್ಯುತ್ತಮ ವಾರ್ಷಿಕ ರಿಚಾರ್ಜ್ ಯೋಜನೆಗಳು ಇಲ್ಲಿವೆ.

ಇವು ದಿನದ ಡೇಟಾದೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಒಂದು ವರ್ಷಕ್ಕೆ ಅಂದ್ರೆ 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತವೆ.

ಪ್ರಸ್ತುತ ಹೊಸ ವರ್ಷ ಅರಂಭವಾಗಿದ್ದು ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡು ತಲೆನೋವಿನಿಂದ ದೂರವಿರಲು ಬಯಸುವುದಾದರೆ ಈ Jio, Airtel, Vi ಮತ್ತು BSNL ಹೊಂದಿರುವ ಅತಿ ಕಡಿಮೆ ಬೆಲೆಯ ಅತ್ಯುತ್ತಮ ವಾರ್ಷಿಕ ರಿಚಾರ್ಜ್ ಯೋಜನೆಗಳನೊಮ್ಮೆ ಪರಿಶೀಲಿಸಬಹುದು. ಇದರಲ್ಲಿ ನಿಮಗೆ ದಿನದ ಡೇಟಾದೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಪೂರ್ತಿ ಒಂದು ವರ್ಷಕ್ಕೆ ಅಂದ್ರೆ 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಯೋಜನಗಳ ಮೊರೆ ಹೋಗಬಹುದು. ಈ ದೀರ್ಘಾವಧಿಯ ಯೋಜನೆಗಳು ಬಳಕೆದಾರರಿಗೆ ಇಡೀ ವರ್ಷದವರೆಗೆ ಚಿಂತೆ ಮುಕ್ತವಾಗಿರಲು ಮತ್ತು ಪುನರಾವರ್ತಿತ ರೀಚಾರ್ಜ್ಗಳ ಅಗತ್ಯವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ ಇದು ಸಾಮಾನ್ಯ ಮೊಬೈಲ್ ಬಳಕೆದಾರರಿಗೆ ಪ್ರಾಯೋಗಿಕ ಆಯ್ಕೆಯಾಗಿದೆ.

Also Read: BSNL Voice Over WiFi: ಬಿಎಸ್ಎನ್ಎಲ್ ಬಳಕೆದಾರರಿಗೆ ಗುಡ್ ನ್ಯೂಸ್, ಸಿಗ್ನಲ್ ಇಲ್ಲದಿದ್ದರೂ ಕರೆ ಮಾಡುವ ಹೊಸ ಫೀಚರ್ ಪರಿಚಯ!

ಏರ್‌ಟೆಲ್ ₹2249 ವಾರ್ಷಿಕ ಯೋಜನೆ:

ಏರ್‌ಟೆಲ್‌ನ ಈ ₹2249 ಯೋಜನೆ ಮುಖ್ಯವಾಗಿ ಕರೆಗಳಿಗೆ ಹೆಚ್ಚು ಒತ್ತು ನೀಡುವವರ ಧ್ವನಿಯನ್ನು ರೂಪಿಸಲಾಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ನೀವು ದೇಶದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು ಮತ್ತು ವರ್ಷಪೂರ್ತಿ ಒಟ್ಟು 3600 SMS ಗಳನ್ನು ಬಳಸಬಹುದು. ಡೇಟಾ ವಿಷಯಕ್ಕೆ ಬಂದರೆ ಇಡೀ ವರ್ಷಕ್ಕೆ ಒಟ್ಟು 30GB ಡೇಟಾ ಸಿಗುತ್ತದೆ. ಇದು ವೈ-ಫೈ ಬಳಸುವವರಿಗೆ ಅಥವಾ ಕಡಿಮೆ ಇಂಟರ್ನೆಟ್ ಬಳಸುವವರಿಗೆ ಆಯ್ಕೆ. 2026 ವಿಶೇಷತೆಯೆಂದರೆ ಈ ಯೋಜನೆ ಜೊತೆಗೆ ಒಂದು Perplexity Pro AI ಚಂದಾದಾರಿಕೆ ವರ್ಷಕ್ಕೆ ಉಚಿತವಾಗಿ ಸಿಗುತ್ತದೆ. ಇದರೊಂದಿಗೆ ಅಪೊಲೊ 24/7 ಸರ್ಕಲ್ ಮತ್ತು ಉಚಿತ ಹ್ಯಾಲೋ ಟ್ಯೂನ್ಸ್ ಸೌಲಭ್ಯಗಳಿವೆ. ಕಡಿಮೆ ಖರ್ಚಿನಲ್ಲಿ ವರ್ಷಪೂರ್ತಿ ಸಿಮ್ ಆಕ್ಟಿವ್ ಆಗಿರಲು ಇದು ಆಯ್ಕೆಯಾಗಿದೆ.

ವೊಡಾಫೋನ್ ಐಡಿಯಾ (Vi) ₹2249 ವಾರ್ಷಿಕ ಯೋಜನೆ:

ವೊಡಾಫೋನ್ ಐಡಿಯಾ (Vi) ಕಂಪನಿಯ ಈ ₹2249 ಪ್ಲಾನ್ ಕೂಡ ಏರ್‌ಟೆಲ್‌ನಂತೆಯೇ ಕರೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಯೋಜನೆಯು ಪೂರ್ಣ 365 ದಿನಗಳ ಕಾಲಾವಧಿಯನ್ನು ನೀಡುತ್ತದೆ. ಪ್ರತಿ ತಿಂಗಳು ರಿಚಾರ್ಜ್ ಮಾಡುವ ಕಿರಿಕಿರಿ ಇರುವುದಿಲ್ಲ. ಇದರಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ವರ್ಷಕ್ಕೆ 3600 SMS ಸೌಲಭ್ಯವಿದೆ. ಡೇಟಾ ಬಳಕೆಗಾಗಿ ವರ್ಷಕ್ಕೆ ಒಟ್ಟು 30GB ಡೇಟಾ ಸಿಗುತ್ತದೆ. ಇದರಲ್ಲಿ ಕಂಪನಿಯ ಇತರ ದುಬಾರಿ ಪ್ಲಾನ್‌ಗಳಂತೆ ‘ಬಿಂಜ್ ಆಲ್ ನೈಟ್’ ಅಥವಾ ‘ಡೇಟಾ ರೋಲ್‌ಓವರ್’ ಸೌಲಭ್ಯಗಳು ಇರುವುದಿಲ್ಲ. ಆದರೆ Vi Movies & TV ಆಪ್ ಮೂಲಕ ಮನರಂಜನೆಯನ್ನು ಪಡೆಯಬಹುದು. ಬಜೆಟ್‌ನಲ್ಲಿ ವರ್ಷಪೂರ್ತಿ ಫೋನ್ ಸಂಪರ್ಕ ಇಟ್ಟುಕೊಳ್ಳಲು ಬಯಸುವವರಿಗೆ ಇದು ಅತ್ಯಂತ ಸುಲಭವಾದ ಯೋಜನೆಯಾಗಿದೆ.

Also Read: OPPO Reno15 Series ಬಿಡುಗಡೆಗೆ ಡೇಟ್ ಫಿಕ್ಸ್ ಆಯ್ತು! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ

ಜಿಯೋ ₹3599 ವಾರ್ಷಿಕ ಯೋಜನೆ:

ಜಿಯೋದ ₹3599 ಪ್ಲಾನ್ ಅತಿ ಹೆಚ್ಚು ಡೇಟಾ ಮತ್ತು 5G ಸೌಲಭ್ಯ ಬಯಸುವವರಿಗಾಗಿ ಇರುವ ಪ್ರೀಮಿಯಂ ಯೋಜನೆಯಾಗಿದೆ. 365 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಸಿಗುತ್ತದೆ. ಇದು 2026 ಮುಖ್ಯ ಆಕರ್ಷಣೆಯೆಂದರೆ ನಿಮ್ಮಲ್ಲಿ 5G ಫೋನ್ ಇದ್ದರೆ ನೀವು ಅನ್ಲಿಮಿಟೆಡ್ 5G ಡೇಟಾ ಬಳಸಬಹುದು ಇದು ನಿಮ್ಮ ದಿನದ 2.5GB ಮಿತಿಯನ್ನು ಮುಟ್ಟುವುದಿಲ್ಲ. ಇದರೊಂದಿಗೆ ಅನ್ಲಿಮಿಟೆಡ್ ಕರೆಗಳು ಮತ್ತು ದಿನಕ್ಕೆ 100 SMS ಲಭ್ಯವಿದೆ. ಮನರಂಜನೆಗಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸೌಲಭ್ಯಗಳಿವೆ. ಕೆಲವು ಆಫರ್‌ಗಳಲ್ಲಿ ಗೂಗಲ್ ಜೆಮಿನಿ ಪ್ರೊ ಚಂದದಾರಿಕೆಯೂ ಸಿಗಬಹುದು. ವೇಗದ ಇಂಟರ್ನೆಟ್ ಅಗತ್ಯವಿರುವ ಉದ್ಯೋಗಿಗಳಿಗೆ ಮತ್ತು ಅದಕ್ಕೆ ಸೂಕ್ತವಾದ ಯೋಜನೆಯಾಗಿದೆ.

ಬಿಎಸ್ಎನ್ಎಲ್ ₹2399 ವಾರ್ಷಿಕ ಯೋಜನೆ:

ಬಿಎಸ್ಎನ್ಎಲ್ ಸಂಸ್ಥೆಯು ₹2399 ಪ್ಲಾನ್ ಬದಲಿಗೆ ಅತ್ಯಂತ ಲಾಭದಾಯಕವಾಗಿದೆ. ಸಾಮಾನ್ಯವಾಗಿ ಇದು 365 ದಿನಗಳವರೆಗೆ ವ್ಯಾಲಿಡಿಟಿಯಾಗುತ್ತದೆ ಆದರೆ ಹಬ್ಬದ ಸಮಯದಲ್ಲಿ ಇದು 395 ರಿಂದ 425 ವರೆಗೆ ವಿಸ್ತರಣೆಯಾಗುತ್ತದೆ. ಈ ಪ್ಲಾನ್ ಡೇಟಾ ಪ್ರಿಯರಿಗೆ ವರದಾನವಾಗಿದ್ದು ಪ್ರತಿದಿನ 2GB ಹೈ-ಸ್ಪೀಡ್ ಡೇಟಾ ನೀಡಲಾಗಿದೆ. ಡೇಟಾ ಮಿತಿ ಮುಗಿದ ನಂತರವೂ ಕಡಿಮೆ ವೇಗದಲ್ಲಿ ಇಂಟರ್ನೆಟ್ ಬಳಸಬಹುದು. ಇದರೊಂದಿಗೆ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಸಿಗುತ್ತದೆ. 2026ರ ಆರಂಭದಲ್ಲಿ ಈ ಪ್ಲಾನ್ ಅಡಿಯಲ್ಲಿ ದಿನಕ್ಕೆ 3GB ಡೇಟಾ ಕೂಡ ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ Eros Now ಮತ್ತು ಲೋಕಧುನ್ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯೂ ಇರುತ್ತದೆ. ಹೆಚ್ಚು ಡೇಟಾ ಬೇಕು ಎನ್ನುವವರಿಗೆ ಇದು ಅತ್ಯುತ್ತಮ ಯೋಜನೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :