Airtel
ಏರ್‌ಟೆಲ್‌ನ ಆಲ್-ಇನ್-ಒನ್ ಮನರಂಜನೆ ಪ್ಲಾನ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ “ಆಲ್-ಇನ್-ಓನ್ ಎಂಟರ್‌ಟೈನ್‌ಮೆಂಟ್ ಪ್ಯಾಕ್‌ಗಳನ್ನು ಪರಿಚಯಿಸಿದೆ. ಸಂಪರ್ಕ ಮತ್ತು ಮನರಂಜನೆ ಎರಡನ್ನೂ ಬಯಸುವವರಿಗೆ ರೂ 279 ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆ ಒಂದೇ ರೀಚಾರ್ಜ್‌ನಲ್ಲಿ ಹಲವು ಜನಪ್ರಿಯ ಉಚಿತ Netflix ಮತ್ತು JioHotstar ಜೊತೆಗೆ ಅನೇಕ OTT ಅಪ್ಲಿಕೇಶನ್‌ಗಳು ಸಬ್‌ಸ್ಕ್ರಿಪ್ಷನ್‌ಗಳನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಬ್ಯಾಂಡಲ್ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಇತರ ಟೆಲಿಕಾಂ ಆಪರೇಟರ್‌ಗಳನ್ನು ಒಳಗೊಂಡಿದೆ ಏರ್‌ಟೆಲ್ ಹೊಸ ಹೆಜ್ಜೆಯಾಗಿದೆ.
ಏರ್ಟೆಲ್ ಹಲವು OTT ಪ್ರಯೋಜನಗಳನ್ನು ನೀಡುವ ಯೋಜನೆಗಳನ್ನು ಹೊಂದಿದೆ ಆದರೆ ರೂ 279 ಪ್ಲಾನ್ ಕಡಿಮೆ ಬೆಲೆಯಲ್ಲಿ ಅನೇಕ ಸ್ಟ್ರೀಮಿಂಗ್ ಸೇವೆಗಳು ನೀಡಲಾಗಿದೆ. ಇದು ಮುಖ್ಯವಾಗಿ OTT ಕಾಂಟೆಂಟ್ ಮೇಲೆ ಗಮನಹರಿಸುವ ಯೋಜನೆಯಾಗಿದೆ. ಇದರಲ್ಲಿ ಸೀಮಿತ ಡೇಟಾ ಮತ್ತು ಯಾವುದೇ ಕರೆ ಸೌಲಭ್ಯಗಳು ಇರುವುದಿಲ್ಲ. ಆದರೆ ಇಂಟರ್ನೆಟ್‌ಗಾಗಿ ವೈ-ಫೈ ಅನ್ನು ಹೆಚ್ಚಾಗಿ ಬಳಸುವವರಿಗೆ ಮತ್ತು ಪ್ರೀಮಿಯಂ ಸ್ಟ್ರೀಮಿಂಗ್ ಕಾಂಟೆಂಟ್‌ಗಾಗಿ ಇದು ಉತ್ತಮವಾಗಿದೆ ಆಯ್ಕೆಯಾಗಿದೆ. ಈ ಯೋಜನೆಯು ಈ ಕೆಳಗಿನ ಸಬ್‌ಸ್ಕ್ರಿಪ್ಷನ್‌ಗಳನ್ನು ಒಳಗೊಂಡಿದೆ.
ನೆಟ್‌ಫ್ಲಿಕ್ಸ್ ಬೇಸಿಕ್ (ನೆಟ್‌ಫ್ಲಿಕ್ಸ್ ಬೇಸಿಕ್): ಇದು ಒಂದು ಸಮಯದಲ್ಲಿ ಒಂದು ಡಿವೈಸ್‌ನಲ್ಲಿ HD ಗುಣಮಟ್ಟದ ಚಲನಚಿತ್ರಗಳು, ಟಿವಿ ಶೋಗಳು ಮತ್ತು ಒರಿಜಿನಲ್ ಕಾಂಟೆಂಟ್‌ಗಳನ್ನು ನೋಡಲು ಅವಕಾಶ ನೀಡಲಾಗಿದೆ.
ಜಿಯೋ ಸಿನಿಮಾ (JioCinema): ಬಳಕೆದಾರರಿಗೆ ಜಿಯೋ ಸಿನಿಮಾದ ಪ್ರೀಮಿಯಂ ಕಾಂಟೆಂಟ್ ಲೈಬ್ರರಿ ಸಿಗುತ್ತದೆ. ಇದರಲ್ಲಿ ಅನೇಕ ಚಲನಚಿತ್ರಗಳು, ಟಿವಿ ಶೋಗಳು ಮತ್ತು ಲೈವ್ ಕ್ರೀಡಾ ಕಾರ್ಯಕ್ರಮಗಳು ಇರುತ್ತವೆ.
ಉಚಿತ Zee5: ಈ ಪ್ಲಾಕ್ಜ್ ಹೆಚ್ಚುವರಿಯಾಗಿ ನಿಮಗೆ ಝೀ5 ನ ಒರಿಜಿನಲ್ ಶೋಗಳು, ಚಲನಚಿತ್ರಗಳು ಮತ್ತು ಟಿವಿ ಸರಣಿಗಳನ್ನು ವೀಕ್ಷಿಸಲು ವಿವಿಧ ಅವಕಾಶಗಳನ್ನು ನೀಡಲಾಯಿತು.
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ: ಇದು ಈ ಪ್ಲಾನ್‌ನ ಪ್ರಮುಖ ವೈಶಿಷ್ಟ್ಯವಾಗಿದೆ. ಇದು ಸೋನಿಲಿವ್ (SonyLIV), ಲಯನ್ಸ್‌ಗೇಟ್ ಪ್ಲೇ (Lionsgate Play), ಎರೋಸ್ ನೌ (Eros Now), ಶೇಮಾರೂ ಮೀ (ShemarooMe), ಹೊಯ್‌ಚೋಯ್ (Hoichoi) ಮತ್ತು ಇನ್ನೂ 25 ಕ್ಕೂ ಹೆಚ್ಚು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳ ಕಾಂಟೆಂಟ್ ಒಂದೇ ಆಪ್‌ನಲ್ಲಿ ನೋಡಲು ಅವಕಾಶವಿದೆ.
Also Read: Tecno Pova Slim 5G ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಏರ್ಟೆಲ್ ರೂ 279 ಪ್ರಿಪೇಯ್ಡ್ ಪ್ಲಾನ್ ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಮನರಂಜನೆಯನ್ನು ಬಯಸುವವರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯ ಇಡೀ ವ್ಯಾಲಿಡಿಟಿ ಅವಧಿಗೆ ಒಟ್ಟು 1GB ಡೇಟಾ ಸಿಗುತ್ತದೆ. ಇದು ಈ ಯೋಜನೆಯ ಮುಖ್ಯ ಮಿತಿಯಾಗಿದೆ. ಈ ಯೋಜನೆಯನ್ನು ಹೆಚ್ಚಾಗಿ ವೈ-ಫೈ ಬಳಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚು ಬಳಸುವವರಿಗೆ ಇದು ಸಾಕಾಗುವುದಿಲ್ಲ ಮತ್ತು ಅವರು ಬೇರೆ ಡೇಟಾ ವೋಚರ್ ಖರೀದಿಸಿದರು. ಈ ಯೋಜನೆ ಒಂದು ತಿಂಗಳ ಮಟ್ಟಿಗೆ Netflix Basic, JioCinema, Zee5 ಮತ್ತು Airtel Xstream Play Premium ಸಬ್‌ಸ್ಕ್ರಿಪ್ಷನ್‌ಗಳನ್ನು ನೀಡಲಾಗಿದೆ. ಎಲ್ಲಾ ಕಾಂಟೆಂಟ್‌ಗಳನ್ನು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಅಪ್ಲಿಕೇಶನ್ ಮೂಲಕ ನೋಡಬಹುದು.
ಇದು ಯಾರಿಗೆ ಸೂಕ್ತ? ಈ ಪ್ಲಾನ್ ಸ್ಮಾರ್ಟ್‌ಫೋನ್ ಅಥವಾ ಇತರ ಡಿವೈಸ್‌ಗಳಲ್ಲಿ ಪ್ರೀಮಿಯಂ ಕಾಂಟೆಂಟ್ ನೋಡಲು ಬಯಸುವವರಿಗೆ ಮತ್ತು ತಮ್ಮ ದೈನಂದಿನ ಕೆಲಸಗಳಿಗೆ ಹೆಚ್ಚು ಮೊಬೈಲ್ ಡೇಟಾದ ಅಗತ್ಯವಿರುವವರಿಗೆ ಮನೆಯಲ್ಲಿ ಕೆಲಸ ಮಾಡುವವರು ವೈ-ಫೈ ಇರುವ ವಿದ್ಯಾರ್ಥಿಗಳು ಅಥವಾ ಕೇವಲ ಮನರಂಜನೆಗಾಗಿ ಸೆಕೆಂಡರಿ ಪ್ಲಾನ್ ಬಯಸುವವರಿಗೆ ಇದು ಹೇಳಿಮಾಡಿಸಿದಂತಿದೆ. ಹೆಚ್ಚು ಪ್ರಯೋಜನಗಳನ್ನು ಬಯಸುವವರಿಗೆ ಏರ್‌ಟೆಲ್ ಇತರ ಬಂಡಲ್ ಪ್ಲಾನ್‌ಗಳನ್ನು ಸಹ ನೀಡಲಾಗಿದೆ.