ಉಚಿತ Netflix, JioHotstar ಮತ್ತು ZEE5 ಜೊತೆಗೆ ಡೇಟಾ ಕರೆಗಳನ್ನು ನೀಡುವ ಏರ್ಟೆಲ್‌ನ 3 ಜಬರದಸ್ತ್ ರಿಚಾರ್ಜ್ ಪ್ಲಾನ್!

Updated on 08-Jul-2025
HIGHLIGHTS

ಏರ್ಟೆಲ್ ಗ್ರಾಹಕರಿಗೆ ಕಡಿಮೆ ಬೆಲೆಗೆ ಹೆಚ್ಚುವರಿಯ ಪ್ರಯೋಜನಗಳನ್ನು ನೀಡುವುದು ಅನಿವಾರ್ಯವಾಗಿದೆ.

ಹೆಚ್ಚು ಹಣ ಖರ್ಚು ಮಾಡದೇ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಡೇಟಾ ಮತ್ತು ಉಚಿತ OTT ಅಪ್ಲಿಕೇಶನ್‌ ಲಭ್ಯ.

ಪ್ರಸ್ತುತ ನಾವು ನಿಮಗೆ 279, 598 ಮತ್ತು 1729 ರೂಗಳ ರಿಚಾರ್ಜ್ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ವಿವರಿಸಲಾಗಿದೆ.

ಭಾರ್ತಿ ಏರ್‌ಟೆಲ್ ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿದ್ದು ತನ್ನ ಗ್ರಾಹಕರಿಗೆ ಉತ್ತಮ ಬೆಲೆಗೆ ಹೆಚ್ಚುವರಿಯ ವ್ಯಾಪಕವಾದ ಪ್ರಿಪೇಯ್ ಯೋಜನೆಗಳನ್ನು ನೀಡುತ್ತದೆ. ಏರ್‌ಟೆಲ್ ಡೇಟಾ ಮತ್ತು ಕರೆಗಳನ್ನು ಮಾತ್ರವಲ್ಲದೆ ಉಚಿತ ಉಚಿತ Netflix, JioHotstar ಮತ್ತು ZEE5 ಅಪ್ಲಿಕೇಶನ್‌ಗಳ ಪ್ರವೇಶವನ್ನು ನೀಡುವ ಕೆಲವು ಪ್ರಿಪೇಯ್ಡ್ ಯೋಜನೆಗಳನ್ನು ಸಹ ಪರಿಚಯಿಸಿದೆ. ಪ್ರಸ್ತುತ ನಾವು ನಿಮಗೆ 279, 598 ಮತ್ತು 1729 ರೂಗಳ ರಿಚಾರ್ಜ್ ಯೋಜನೆಗಳು ನೆಟ್‌ಪ್ಲಿಕ್ಸ್, ಜಿಯೋ ಹಾಟ್‌ಸ್ರಾರ್, ZEE5 ಮತ್ತು ಇತರ OTT ಗಳಿಗೆ ಪ್ರವೇಶವನ್ನು ನೀಡುತ್ತವೆ. ಈ ಯೋಜನೆಗಳಲ್ಲಿ ಯಾವುದು ನಿಮಗೆ ಉತ್ತಮವಾಗಿದೆ ಎಂದು ತಿಳಿಯೋಣ.

ಏರ್‌ಟೆಲ್‌ನ 279 ರೂ. ಪ್ರಿಪೇಯ್ಡ್ (JioHotstar) ಯೋಜನೆ

ಅತ್ಯಂತ ಕಡಿಮೆ ಬೆಲೆಗೆ ಆಲ್-ಇನ್-ಒನ್ OTT ಯೋಜನೆ ಡೇಟಾ ವೋಚರ್ ಆಗಿದೆ ಅಂದರೆ ಇದು ಯಾವುದೇ ಸೇವಾ ಮಾನ್ಯತೆಯೊಂದಿಗೆ ಕರೆ ಮತ್ತು SMS ಅನ್ನು ನೀಡುವುದಿಲ್ಲ. ನೀವು ಯಾವುದೇ ಸಕ್ರಿಯ ಯೋಜನೆಯೊಂದಿಗೆ ಇದರೊಂದಿಗೆ ರೀಚಾರ್ಜ್ ಮಾಡಬಹುದು.

ಇದು ನಿಮಗೆ 1 ತಿಂಗಳ ಮಾನ್ಯತೆಯ ಈ ವೋಚರ್ 1GB ಹೆಚ್ಚುವರಿಯಾಗಿ ನಿಮಗೆ Netflix Basic, JioHotstar Super, ZEE5 Premium Airtel Xstream Play Premium ಚಂದಾದಾರಿಕೆಯನ್ನು ಸಹ ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಈಗಾಗಲೇ ಸಕ್ರಿಯ ರೀಚಾರ್ಜ್ ಹೊಂದಿದ್ದರೆ ಮತ್ತು ನೀವು OTT ಪ್ರವೇಶವನ್ನು ಮಾತ್ರ ಬಯಸಿದರೆ ಇದು ಉತ್ತಮ ಆಯ್ಕೆಯಾಗಿದೆ.

Also Read: Ai+ Nova 5G: ಅತ್ಯಂತ ಕಡಿಮೆ ಬೆಲೆಗೆ Ai ಸ್ಮಾರ್ಟ್‌ಫೋನ್‌! ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡಲು ಬೆಸ್ಟ್ 5G ಫೋನ್!

ಏರ್‌ಟೆಲ್‌ನ 598 ರೂಗಳ ಪ್ರಿಪೇಯ್ಡ್ ಯೋಜನೆ

28 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆಯು ಎಲ್ಲಾ OTT ಪ್ರಯೋಜನಗಳೊಂದಿಗೆ ಬರುತ್ತದೆ. ಬಳಕೆದಾರರು ಪ್ರತಿದಿನ 2GB ಡೇಟಾವನ್ನು ಪಡೆಯುತ್ತಾರೆ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ಮಾಡಬಹುದು. ಇದಲ್ಲದೆ ಪ್ರತಿದಿನ 100 SMS ಕಳುಹಿಸುವ ಆಯ್ಕೆಯೂ ಇದೆ.

ಈ ಯೋಜನೆಯೊಂದಿಗೆ ಉಚಿತ Netflix Basic, JioHotstar Super, ZEE5 Premium đ Airtel Xstream Play Premium ಸೇರಿವೆ. ಅರ್ಹ ಬಳಕೆದಾರರು ಅನಿಯಮಿತ 5G ಡೇಟಾವನ್ನು ಪಡೆಯುತ್ತಾರೆ ಮತ್ತು ಉಚಿತ Hellotunes ಸಹ ಲಭ್ಯವಿದೆ.

ಏರ್‌ಟೆಲ್‌ನ 1729 ರೂಗಳ ಪ್ರಿಪೇಯ್ಡ್ ಯೋಜನೆ

ಇದು ಏರ್‌ಟೆಲ್‌ನ ಅತ್ಯಂತ ಪ್ರೀಮಿಯಂ ಪ್ರಿಪೇಯ್ ಯೋಜನೆಯಾಗಿದ್ದು ಇದು 84 ದಿನಗಳ ದೀರ್ಘಾವಧಿಯ ಮಾನ್ಯತೆಯನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡುವವರಿಗೆ ಅನಿಯಮಿತ ಧ್ವನಿ ಕರೆ ಪ್ರಯೋಜನಗಳ ಜೊತೆಗೆ 2GB ದೈನಂದಿನ ಡೇಟಾ ಮತ್ತು ಪ್ರತಿದಿನ 100 SMS ಕಳುಹಿಸುವ ಆಯ್ಕೆಯನ್ನು ಪಡೆಯುತ್ತಾರೆ.

ಈ ಯೋಜನೆಯು ನೆಟ್‌ಪ್ಲಿಕ್ಸ್ ಬೇಸಿಕ್, ಜಿಯೋ ಹಾಟ್‌ನ್ಸಾ‌ರ್ ಸೂಪರ್, ZEE5 ಪ್ರೀಮಿಯಂ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಅನ್ನು 84 ದಿನಗಳವರೆಗೆ ಮಾತ್ರ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :