Starlink internet to India
Starlink internet to India: ಏರ್ಟೆಲ್ ಭಾರತದಲ್ಲಿನ ತನ್ನ ಗ್ರಾಹಕರಿಗೆ ಸ್ಟಾರ್‌ಲಿಂಕ್‌ನ ಹೈ-ಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ತರಲು ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ (SpaceX) ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಇದು ಭಾರತದಲ್ಲಿ ಸಹಿ ಹಾಕಲಾಗುತ್ತಿರುವ ಮೊದಲ ಒಪ್ಪಂದ ಇದಾಗಿದ್ದು ಭಾರತದಲ್ಲಿ ಸ್ಟಾರ್‌ಲಿಂಕ್ (Starlink) ಅನ್ನು ಮಾರಾಟ ಮಾಡಲು ಸ್ಪೇಸ್‌ಎಕ್ಸ್ ತನ್ನದೇ ಆದ ಅಧಿಕಾರವನ್ನು ಪಡೆದರೆ ಮಾತ್ರ ಒಪ್ಪಂದ ಮುಕ್ತಾಯಗೊಳ್ಳುತ್ತದೆಂದು ಏರ್ಟೆಲ್ (Airtel) ಹೇಳಿದೆ.
ಪ್ರಸ್ತುತ ಈ ಸೇವೆ ಯಾವಾಗ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಗಲಿದೆ ಮತ್ತು ಜನಸಾಮಾನ್ಯರ ಬಳಕೆಗೆ ಎಂದಿನಿಂದ ಶುರುವಾಗಲಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಏರ್‌ಟೆಲ್ ತನ್ನ ಅಂಗಡಿಗಳಲ್ಲಿ ಸ್ಟಾರ್‌ಲಿಂಕ್ ಉಪಕರಣಗಳನ್ನು ಮಾರಾಟ ಮಾಮಾಡುವುದರೊಂದಿಗೆ ಬಿಸನೆಸ್ಗಳಿಗೆ ಸ್ಟಾರ್‌ಲಿಂಕ್‌ನ ಸೇವೆಗಳನ್ನು ನೀಡುವ ಯೋಚನೆಗಳಿವೆ. ಹೆಚ್ಚುವರಿಯಾಗಿ ಗ್ರಾಮೀಣ ಶಾಲೆಗಳು, ಆರೋಗ್ಯ ಕೇಂದ್ರಗಳು ಮತ್ತು ದೂರದ ಪ್ರದೇಶಗಳಿಗೆ ಇಂಟರ್ನೆಟ್ ಅನ್ನು ತರಲು ಅವರು ಸ್ಟಾರ್‌ಲಿಂಕ್ ಅನ್ನು ಬಳಸಲು ಯೋಜಿಸಿದ್ದಾರೆ.
ಸ್ಟಾರ್‌ಲಿಂಕ್ ಏರ್‌ಟೆಲ್‌ನ ನೆಟ್‌ವರ್ಕ್ ಅನ್ನು ಹೇಗೆ ಬೆಂಬಲಿಸಬಹುದು. ಮತ್ತು ಸ್ಪೇಸ್‌ಎಕ್ಸ್ ಭಾರತದಲ್ಲಿ ಏರ್‌ಟೆಲ್‌ನ ಮೂಲಸೌಕರ್ಯವನ್ನು ಹೇಗೆ ಬಳಸಬಹುದು ಎಂಬುದನ್ನು ಏರ್‌ಟೆಲ್ ಮತ್ತು ಸ್ಪೇಸ್‌ಎಕ್ಸ್ ಅನ್ವೇಷಿಸುತ್ತವೆ. ಏರ್‌ಟೆಲ್ ಈಗಾಗಲೇ ಉಪಗ್ರಹ ಇಂಟರ್ನೆಟ್‌ಗಾಗಿ ಯುಟೆಲ್‌ಸ್ಯಾಟ್ ಒನ್‌ವೆಬ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸ್ಟಾರ್‌ಲಿಂಕ್ ಅನ್ನು ಸೇರಿಸುವುದರಿಂದ ಏರ್‌ಟೆಲ್ ತನ್ನ ವ್ಯಾಪ್ತಿಯನ್ನು ಕಡಿಮೆ ಅಥವಾ ಇಂಟರ್ನೆಟ್ ಇಲ್ಲದ ಪ್ರದೇಶಗಳಿಗೆ ವಿಸ್ತರಿಸಲು ಸಹಾಯ ಮಾಡುತ್ತದೆ.
ದೂರದ ಸ್ಥಳಗಳಲ್ಲಿನ ವ್ಯವಹಾರಗಳು ಮತ್ತು ಸಮುದಾಯಗಳು ಹೆಚ್ಚಿನ ವೇಗದ ಸಂಪರ್ಕಕ್ಕಾಗಿ ಹೆಚ್ಚಿನ ಆಯ್ಕೆಗಳನ್ನು ಪಡೆಯುತ್ತವೆ. ಅಲ್ಲದೆ ಭಾರತದಲ್ಲಿ ಏರ್‌ಟೆಲ್ ಗ್ರಾಹಕರಿಗೆ ಸ್ಟಾರ್‌ಲಿಂಕ್ ನೀಡಲು ಸ್ಪೇಸ್‌ಎಕ್ಸ್‌ನೊಂದಿಗೆ ಕೆಲಸ ಮಾಡುವುದು ಮಹತ್ವದ ಮೈಲಿಗಲ್ಲು ಮತ್ತು ಮುಂದಿನ ಪೀಳಿಗೆಯ ಉಪಗ್ರಹ ಸಂಪರ್ಕಕ್ಕೆ ನಮ್ಮ ಬದ್ಧತೆಯನ್ನು ಮತ್ತಷ್ಟು ಪ್ರದರ್ಶಿಸುತ್ತದೆಂದು ಏರ್‌ಟೆಲ್ ಹೇಳಿದೆ. ಏರ್‌ಟೆಲ್‌ನೊಂದಿಗೆ ಕೆಲಸ ಮಾಡಲು ಮತ್ತು ಸ್ಟಾರ್‌ಲಿಂಕ್ ಪರಿವರ್ತನಾತ್ಮಕ ಎಫೆಕ್ಟ್ ಅನ್‌ಲಾಕ್ ಮಾಡಲು ಉತ್ಸುಕರಾಗಿದ್ದೇವೆಂದು SpaceX ತಂಡ ಹೇಳಿದೆ.
ಆದ್ದರಿಂದ ನಮ್ಮ ನೇರ ಕೊಡುಗೆಗೆ ಪೂರಕವಾಗಿ ಏರ್ಟೆಲ್ ತಂಡದೊಂದಿಗೆ ಕೆಲಸ ಮಾಡುವುದು ನಮ್ಮ ವ್ಯವಹಾರಕ್ಕೆ ಉತ್ತಮ ಅರ್ಥವನ್ನು ನೀಡುತ್ತದೆ. ಜನರು, ವ್ಯವಹಾರಗಳು ಮತ್ತು ಸಂಸ್ಥೆಗಳು ಸ್ಟಾರ್‌ಲಿಂಕ್ ಮೂಲಕ ಸಂಪರ್ಕಗೊಂಡಾಗ ಮಾಡುವ ನಂಬಲಾಗದ ಮತ್ತು ಸ್ಪೂರ್ತಿದಾಯಕ ಕೆಲಸಗಳಿಂದ ನಾವು ನಿರಂತರವಾಗಿ ಆಶ್ಚರ್ಯಚಕಿತರಾಗಿದ್ದೇವೆ ಎಂದು ಸ್ಪೇಸ್‌ಎಕ್ಸ್ ಅಧ್ಯಕ್ಷೆ ಗ್ವಿನ್ ಶಾಟ್‌ವೆಲ್ ಹೇಳಿದರು.