ಅಮೆಜಾನ್‌ ಪ್ರೈಮ್‌ ಜೊತೆಗೆ ಪ್ರತಿದಿನ 3GB ಡೇಟಾ ಅಗತ್ಯ ಇದ್ದರೆ, Airtel ಟೆಲಿಕಾಂನ ಈ ಪ್ಲಾನ್‌ ಗಮನಿಸಿ!

HIGHLIGHTS

ಏರ್‌ಟೆಲ್‌ ಸಂಸ್ಥೆಯ ಈ ಪ್ಲ್ಯಾನಿನಲ್ಲಿ ಪ್ರತಿದಿನ 3GB ಡೇಟಾ ಸೌಲಭ್ಯ

ಏರ್‌ಟೆಲ್‌ ಟೆಲಿಕಾಂನ 838 ರೂ.ಗಳ ಪ್ಲಾನ್‌ನಲ್ಲಿ 56 ದಿನಗಳ ವ್ಯಾಲಿಡಿಟಿ

ಏರ್‌ಟೆಲ್‌ ಟೆಲಿಕಾಂನ ಈ ಯೋಜನೆಯಲ್ಲಿ ಅಮೆಜಾನ್‌ ಪ್ರೈಮ್‌ ಚಂದಾದಾರಿಕೆ ಲಭ್ಯ

ಭಾರ್ತಿ Airtel ತನ್ನ ಬಳಕೆದಾರರಿಗಾಗಿ ಭಿನ್ನ ಬೆಲೆ ಶ್ರೇಣಿಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ದೈನಂದಿನ ಡೇಟಾ, ದೀರ್ಘಾವಧಿಯ ವ್ಯಾಲಿಡಿಟಿ ಹಾಗೂ ಓಟಿಟಿ ಸೌಲಭ್ಯಗಳನ್ನು ಒಳಗೊಂಡ ಈ ಯೋಜನೆಗಳ ಮೂಲಕ ಜಿಯೋ ಮತ್ತು ವಿ ಟೆಲಿಕಾಂ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಏರ್‌ಟೆಲ್‌ನ ಜನಪ್ರಿಯ ಪ್ರೀಪೇಯ್ಡ್ ಪ್ಲಾನ್‌ಗಳಲ್ಲಿ 838 ರೂ.ಗಳ ರೀಚಾರ್ಜ್ ಯೋಜನೆ ವಿಶೇಷ ಗಮನ ಸೆಳೆದಿದೆ. ಈ ಪ್ಲಾನ್‌ನಲ್ಲಿ ಪ್ರತಿದಿನ ಡೇಟಾ ಪ್ರಯೋಜನದ ಜೊತೆಗೆ ಅಮೆಜಾನ್‌ ಪ್ರೈಮ್‌ ಚಂದಾದಾರಿಕೆ ಸಹ ದೊರೆಯುತ್ತದೆ. ಹಾಗಾದರೆ ಏರ್‌ಟೆಲ್‌ನ 838 ರೂ.ಗಳ ರೀಚಾರ್ಜ್‌ ಯೋಜನೆಯ ಪ್ರಯೋಜನಗಳ ಬಗ್ಗೆ ಹಾಗೂ ಇನ್ನಿತರ ಜನಪ್ರಿಯ ಪ್ಲಾನ್‌ಗಳ ಬಗ್ಗೆ ಮುಂದೆ ತಿಳಿಯೋಣ.

Also Read : 120W ವೈರ್ಡ್ ಫಾಸ್ಟ್‌ ಚಾರ್ಜಿಂಗ್‌ ಇರುವ iQOO Neo 10 ಬೆಲೆಯಲ್ಲಿ ಭರ್ಜರಿ ಇಳಿಕೆ!

Airtel ಸಂಸ್ಥೆಯ 838 ರೂ.ಗಳ ಪ್ಲಾನ್ ಮಾಹಿತಿ

ಏರ್‌ಟೆಲ್‌ ಕಂಪನಿಯ 838 ರೂ.ಗಳ ಈ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 3GB Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಈ ಯೋಜನೆಯು ಅಮೆಜಾನ್‌ ಪ್ರೈಮ್‌, ಸೋನಿ ಲೈವ್‌ ಸೇರಿದಂತೆ ಕೆಲವು ಜನಪ್ರಿಯ ಓಟಿಟಿ ಚಂದಾದಾರಿಕೆ ಪಡೆದುಕೊಂಡಿದೆ. ಹೀಗಾಗಿ ಬಜೆಟ್‌ ಬೆಲೆಯಲ್ಲಿ ಡೇಟಾ ಜೊತೆಗೆ ಓಟಿಟಿ ಬಯಸುವ ಗ್ರಾಹಕರಿಗೆ ಈ ಯೋಜನೆ ಆಕರ್ಷಕ ಎನಿಸಿದೆ.

ಏರ್‌ಟೆಲ್‌ ಟೆಲಿಕಾಂನ 649 ರೂ.ಗಳ ಯೋಜನೆ ಮಾಹಿತಿ

ಏರ್‌ಟೆಲ್‌ ಕಂಪನಿಯ 649 ರೂ.ಗಳ ಈ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 2GB Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಡೇಟಾ ಸೇವೆಯ ಜೊತೆಗೆ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲಾನ್‌ ಸೂಪರ್ ಎನ್ನಬಹುದು.

ಏರ್‌ಟೆಲ್‌ ಟೆಲಿಕಾಂನ 579 ರೂ.ಗಳ ಯೋಜನೆ ಮಾಹಿತಿ

ಏರ್‌ಟೆಲ್‌ ಕಂಪನಿಯ 579 ರೂ.ಗಳ ಈ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 1.5GB Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಡೇಟಾ ಸೇವೆಯ ಜೊತೆಗೆ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಯೋಜನೆ ಸೂಕ್ತ ಎನ್ನಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :