ಕಡಿಮೆ ಬೆಲೆಯ ರೀಚಾರ್ಜ್‌ನಲ್ಲಿ ಅಧಿಕ ಡೇಟಾ ಜೊತೆಗೆ OTT ಸೌಲಭ್ಯ ಬೇಕಿದ್ರೆ, ಈ ಪ್ಲಾನ್‌ ಬೆಸ್ಟ್‌!

HIGHLIGHTS

ಅಧಿಕ ದೈನಂದಿನ ಡೇಟಾ ಬಯಸುವ ಗ್ರಾಹಕರಿಗೆ ಈ ಪ್ಲಾನ್ ಬೆಸ್ಟ್‌

ಏರ್‌ಟೆಲ್‌ ಟೆಲಿಕಾಂನ ಈ ರೀಚಾರ್ಜ್‌ ಪ್ಲಾನ್‌ನಲ್ಲಿ 56 ದಿನಗಳ ವ್ಯಾಲಿಡಿಟಿ

ಏರ್‌ಟೆಲ್‌ ಟೆಲಿಕಾಂನ ಈ ಪ್ಲಾನಿನಲ್ಲಿ ಉಚಿತ ವಾಯ್ಸ್‌ ಕರೆ ಹಾಗೂ SMS ಸೌಲಭ್ಯ

ಜನಪ್ರಿಯ ಟೆಲಿಕಾಂ ಬ್ರಾಂಡ್ ಎನಿಸಿಕೊಂಡಿರುವ ಏರ್‌ಟೆಲ್‌ ಸಂಸ್ಥೆಯು ಕೆಲವು ಆಕರ್ಷಕ ಯೋಜನೆಗಳ ಮೂಲಕ ತನ್ನದೇ ಗ್ರಾಹಕ ಬಳಗವನ್ನು ಹೊಂದಿದೆ. ಅಲ್ಲದೇ ಕಂಪನಿಯು ಕೆಲವು ಅಧಿಕ ಡೇಟಾ ಹಾಗೂ ಅಧಿಕ ವ್ಯಾಲಿಡಿಟಿ ಪ್ಲಾನ್‌ಗಳ ಮೂಲಕ ಜಿಯೋ ಟೆಲಿಕಾಂ ಹಾಗೂ ವಿ ಟೆಲಿಕಾಂ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡುತ್ತಾ ಮುಂದೆ ಸಾಗಿದೆ. ಆ ಪೈಕಿ ಏರ್‌ಟೆಲ್‌ ಟೆಲಿಕಾಂನ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ಒಳಗೊಂಡ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ಗಳು ಅಧಿಕ ಬಳಕೆದಾರರನ್ನು ಆಕರ್ಷಿಸಿವೆ. ಮುಖ್ಯವಾಗಿ ಅಧಿಕ ದೈನಂದಿನ ಡೇಟಾ ಸೌಲಭ್ಯ ಬಯಸುವ ಬಳಕೆದಾರರ ಗಮನ ಸೆಳೆದಿವೆ. ಅದಾಗ್ಯೂ ಸಂಸ್ಥೆಯ ಅಗ್ಗದ ಪ್ರೈಸ್‌ನ ಕೆಲವು ಯೋಜನೆಗಳಲ್ಲಿ ಅತ್ಯುತ್ತಮ ವ್ಯಾಲಿಡಿಟಿ ಜೊತೆಗೆ ಡೇಟಾ ಹಾಗೂ OTT ಪ್ರಯೋಜನಗಳು ಸಹ ಸಿಗುತ್ತವೆ. ಅವುಗಳಲ್ಲಿ 838 ರೂ.ಗಳ ಪ್ಲಾನ್ ಗಮನ ಸೆಳೆದಿದೆ. ಹಾಗಾದರೆ ಏರ್‌ಟೆಲ್‌ ಟೆಲಿಕಾಂನ 838 ರೂ.ಗಳ ಯೋಜನೆಯಲ್ಲಿ ಡೇಟಾ ಪ್ರಯೋಜನ ಹಾಗೂ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : 512GB ಸ್ಟೋರೇಜ್ ಇರುವ Vivo X200T ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

ಏರ್‌ಟೆಲ್‌ 838 ರೂ.ಗಳ ಪ್ಲಾನ್‌: OTT ಸೌಲಭ್ಯ

ಏರ್‌ಟೆಲ್‌ ಟೆಲಿಕಾಂನ 838 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಕೂಡಾ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಈ ಯೋಜನೆಯಲ್ಲಿ ಅಮೆಜಾನ್‌ ಪ್ರೈಮ್‌, ಸೋನಿ ಲೈವ್‌ ಸೇರಿದಂತೆ ಇತರೆ ಕೆಲವು ಓಟಿಟಿ ಚಂದಾದಾರಿಕೆಯ ಸೌಲಭ್ಯ ಸಹ ಲಭ್ಯ. ಬಜೆಟ್‌ ಬೆಲೆಯಲ್ಲಿ ಈ ಯೋಜನೆ ಗಮನ ಸೆಳೆದಿದೆ.

Ai image

ಏರ್‌ಟೆಲ್‌ನ ಇತರೆ ಪ್ರಮುಖ ಯೋಜನೆಗಳು

ಏರ್‌ಟೆಲ್‌ ಟೆಲಿಕಾಂನ 979 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಈ ಯೋಜನೆಯಲ್ಲಿ ಸೋನಿ ಲೈವ್‌ ಸೇರಿದಂತೆ ಇತರೆ ಕೆಲವು ಓಟಿಟಿ ಚಂದಾದಾರಿಕೆಯ ಸೌಲಭ್ಯ ಸಿಗಲಿದೆ.

ಏರ್‌ಟೆಲ್‌ ಟೆಲಿಕಾಂನ 649 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :