Airtel: ಏರ್‌ಟೆಲ್‌ನ 429 ರೂ.ಗಳ ಪ್ಲಾನಿನಲ್ಲಿ ಅನಿಯಮಿತ ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ

HIGHLIGHTS

ಭಾರ್ತಿ ಏರ್‌ಟೆಲ್‌ನ ಈ ಪ್ಲ್ಯಾನಿನಲ್ಲಿ ಅನಿಯಮಿತ ಡೇಟಾ ಸೌಲಭ್ಯ

ಏರ್‌ಟೆಲ್‌ ಕಂಪನಿಯ 429 ರೂ.ಗಳ ಪ್ಲಾನ್‌ನಲ್ಲಿ 30 ದಿನಗಳ ಮಾನ್ಯತೆ

ಏರ್‌ಟೆಲ್‌ ಸಂಸ್ಥೆಯ ಈ ಯೋಜನೆಯಲ್ಲಿ ಪ್ರತಿದಿನ 100 SMS ದೊರೆಯುತ್ತದೆ

Airtel: ಏರ್‌ಟೆಲ್‌ನ 429 ರೂ.ಗಳ ಪ್ಲಾನಿನಲ್ಲಿ ಅನಿಯಮಿತ ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ

ಭಾರ್ತಿ Airtel ಕಂಪನಿಯು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಹಲವು ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಯೋಜನೆಗಳನ್ನು ಪರಿಚಯಿಸಿರುವ ಏರ್‌ಟೆಲ್‌ ಆಕರ್ಷಕ ಡೇಟಾ, ಓಟಿಟಿ ಪ್ಲಾನ್‌ಗಳ ಲಿಸ್ಟ್‌ ಸಹ ಒಳಗೊಂಡಿದೆ. ಏರ್‌ಟೆಲ್‌ ಟೆಲಿಕಾಂನ ಯೋಜನೆಗಳ ಲಿಸ್ಟ್‌ನಲ್ಲಿ ಕಡಿಮೆ ದರದಲ್ಲಿ ದೈನಂದಿನ ಡೇಟಾ ಸೌಲಭ್ಯ ಪಡೆದ ಯೋಜನೆಗಳು ಸೇರಿವೆ. ಅದಾಗ್ಯೂ, ಬಜೆಟ್ ಬೆಲೆಯಲ್ಲಿ ಆಕರ್ಷಕ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಡೇಟಾ ಪ್ರಯೋಜನ ಒಳಗೊಂಡಿರುವ ರೀಚಾರ್ಜ್‌ ಯೋಜನೆಗಳು ಬೆಸ್ಟ್‌ ಎನಿಸಿವೆ. ಆ ಪೈಕಿ ಏರ್‌ಟೆಲ್‌ ಟೆಲಿಕಾಂನ 429 ರೂ.ಗಳ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆ ಅಗ್ಗದ ಬೆಲೆಯಲ್ಲಿ ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿದೆ. ಈ ಅಗ್ಗದ ಬೆಲೆಯ ಯೋಜನೆಯು ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ 30 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ. ಹಾಗಾದರೆ ಏರ್‌ಟೆಲ್‌ ಟೆಲಿಕಾಂನ 429 ರೂ.ಗಳ ಯೋಜನೆಯ ಹಾಗೂ ಇತರೆ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 6,000mAh ಬ್ಯಾಟರಿ ಇರುವ POCO C85 5G ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

Airtel ಸಂಸ್ಥೆಯ 429 ರೂ.ಗಳ ಯೋಜನೆ

ಏರ್‌ಟೆಲ್‌ ಟೆಲಿಕಾಂನ 429 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ (ಪ್ರತಿದಿನ 2.5GB) ಅನಿಯಮಿತ ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ ಅಡೋಬ್ ಪ್ರೀಮಿಯರ್ ಎಕ್ಸ್‌ಪ್ರೆಸ್ ಚಂದಾದಾರಿಕೆ ಸೌಲಭ್ಯ ಲಭ್ಯವಾಗಲಿದೆ.

Airtel Plan
Airtel Plan

ಇತರೆ ಆಕರ್ಷಕ ಯೋಜನೆಗಳ ಮಾಹಿತಿ

ಏರ್‌ಟೆಲ್‌ ಟೆಲಿಕಾಂನ 379 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ (ಪ್ರತಿದಿನ 2GB) ಅನಿಯಮಿತ ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಸಿಗಲಿದೆ. ಹಾಗೆಯೇ ಅಡೋಬ್ ಪ್ರೀಮಿಯರ್ ಎಕ್ಸ್‌ಪ್ರೆಸ್ ಚಂದಾದಾರಿಕೆ ಸೌಲಭ್ಯ ಲಭ್ಯವಾಗಲಿದೆ.

ಏರ್‌ಟೆಲ್‌ ಟೆಲಿಕಾಂನ 355 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಒಟ್ಟು 25GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ ಅಡೋಬ್ ಪ್ರೀಮಿಯರ್ ಎಕ್ಸ್‌ಪ್ರೆಸ್ ಚಂದಾದಾರಿಕೆ ಸೌಲಭ್ಯ ಲಭ್ಯವಾಗಲಿದೆ.

ಏರ್‌ಟೆಲ್‌ ಟೆಲಿಕಾಂನ 299 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಪ್ರತಿದಿನ 1GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ ಅಡೋಬ್ ಪ್ರೀಮಿಯರ್ ಎಕ್ಸ್‌ಪ್ರೆಸ್ ಚಂದಾದಾರಿಕೆ ಸೌಲಭ್ಯ ಲಭ್ಯವಾಗಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile