Airtel Rs 489 and Rs 548 plans
Airtel New Plans 2025: ಭಾರತದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಹೊಸ ನಿಮಯಗಳ ಆರ್ಡರ್ ನೀಡಿದ ನಂತರ ಈಗ ರಿಲಯನ್ಸ್ ಜಿಯೋದ (Reliance Jio) ನಂತರ ಭಾರ್ತಿ ಏರ್ಟೆಲ್ (Airtel) ಸಹ ತಮ್ಮ ಬಳಕೆದಾರರಿಗೆ ಸದ್ದಿಲ್ಲದೇ 499 ರೂ ಮತ್ತು 1959 ರೂಗಳ ಎರಡು ಹೊಸ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಈ ಹೊಸ ನಿಯಮದಲ್ಲಿ ಡೇಟಾ ಅಗತ್ಯ ಇಲ್ಲದೇ ಇರುವ ವ್ಯಕ್ತಿಗಳಿಗಾಗಿ ಕೇವಲ ಎಸ್‌ಎಂಎಸ್ ಹಾಗೂ ವಾಯ್ಸ್ ಕರೆಗಳನ್ನು ಮಾತ್ರ ಲಭ್ಯ ಇರುವ ರಿಚಾರ್ಜ್ ಪ್ಲಾನ್ ಪರಿಚಯಿಸುವಂತೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆ ನೀಡಿದೆ. ಇದರಡಿಯಲ್ಲಿ ಇಂಟರ್ನೆಟ್ ಡೇಟಾದ ಆಸೆಯೊಡ್ಡಿ ಲಗಾಮೆ ಇಲ್ಲದೆ ಬೆಲೆ ಏರಿಕೆಗೆ ಬ್ರೇಕ್ ನೀಡಿದೆ.
ಏರ್ಟೆಲ್ ಆರಂಭಿಕ ಹಂತದ ವಾಯ್ಸ್ ಮತ್ತು SMS ಮಾತ್ರ ಯೋಜನೆ 499 ರೂಗಳಿಂದ ಪ್ರಾರಂಭವಾಗುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆಗಳು ಮತ್ತು 900 SMS ಗಳನ್ನು 84 ದಿನಗಳ ಮಾನ್ಯತೆಯೊಂದಿಗೆ ನೀಡಲಾಗುತ್ತಿದೆ. ಇದಲ್ಲದೆ ನೀವು ಯೋಜನೆಯಲ್ಲಿ 3 Month Free Apollo 24 | 7 Circle ಮತ್ತು Free Hellotunes ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ. ಈ ಹೊಸ ಯೋಜನೆಗಳನ್ನು ನೀವು ಏರ್ಟೆಲ್ ಸೈಟ್ ಅಥವಾ ಅಪ್ಲಿಕೇಶನ್ನಲ್ಲಿ ರಿಚಾರ್ಜ್ ವಿಭಾಗದಲ್ಲಿ ಕಾಣಬಹುದು.
ಏರ್ಟೆಲ್ ವಾರ್ಷಿಕ ವಾಯ್ಸ್ ಮತ್ತು SMS ಮಾತ್ರ ಯೋಜನೆಯ ಬೆಲೆ ಈಗ 1959 ರೂಗಳಾಗಿವೆ. ಈ ಏರ್ಟೆಲ್ ಯೋಜನೆಯಲ್ಲಿ 365 ದಿನಗಳ ಮಾನ್ಯತೆಯನ್ನು ನೀಡಲಾಗುತ್ತದೆ. ಈಗ ಏರ್ಟೆಲ್ ಈ ಮೌಲ್ಯ ಯೋಜನೆಯಲ್ಲಿ ನೀವು ಅನಿಯಮಿತ ವಾಯ್ಸ್ ಕರೆಗಳು ಮತ್ತು 3600 SMS ಗಳನ್ನು ಪಡೆಯುತ್ತೀರಿ. ಇದಲ್ಲದೆ ಇತರ ಪ್ರಯೋಜನಗಳ ಬಗ್ಗೆ ಹೇಳುವುದಾದರೆ ಈ ಯೋಜನೆಯಲ್ಲಿ ಯೋಜನೆಯಲ್ಲಿ 3 Month Free Apollo 24 | 7 Circle ಮತ್ತು Free Hellotunes ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ.
Also Read: ಬರೋಬ್ಬರಿ 12GB RAM ಮತ್ತು 120Hz Curved AMOLED ಡಿಸ್ಪ್ಲೇಯ Lava Blaze Duo 5G ಫೋನ್ ಬೆಲೆ ಇಳಿಕೆ!
ಮತ್ತೊಂದೆಡೆ ಇದೇ ರೀತಿಯ ರೀಚಾರ್ಜ್ ಯೋಜನೆಗಳನ್ನು ರಿಲಯನ್ಸ್ ಜಿಯೋ ಪರಿಚಯಿಸಿದೆ. ಜಿಯೋ 458 ರೂಪಾಯಿ ಪ್ಲಾನ್ ತಂದಿದೆ. ಇದು ಪ್ರವೇಶ ಮಟ್ಟದ ಯೋಜನೆಯಾಗಿದ್ದು ಇದರಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳು ಮತ್ತು 1000 ಎಸ್‌ಎಂಎಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಯೋಜನೆಯ ಮಾನ್ಯತೆ 84 ದಿನಗಳಾಗಿವೆ. ಪ್ಲಾನ್ 1958 ಅನ್ನು ಸಹ ಜಿಯೋ ತಂದಿದೆ. ಇದರ ಮಾನ್ಯತೆ 365 ದಿನಗಳಾಗಿವೆ. ಈ ರಿಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳು ಮತ್ತು 3,600 SMS ಗಳನ್ನು ಸಹ ನೀಡಲಾಗುತ್ತದೆ. ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನೆಮಾ (ಪ್ರೀಮಿಯಂ ಅಲ್ಲದ) ಮತ್ತು ಜಿಯೋಕ್ಲೌಡ್‌ನಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒಳಗೊಂಡಿದೆ.