Airtel 279 Data Pack - Kannada News
ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ (Airtel) ತಮ್ಮ ಗ್ರಾಹಕರಿಗೆ ಅನೇಕ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಇಂದು ಕಂಪನಿ ಸದ್ದಿಲ್ಲದೇ 279 ರೂಗಳ ಡೇಟಾ ಪ್ಯಾಕ್ ಅನ್ನು ಅತಿ ಕಡಿಮೆ ಬೆಲೆಗೆ ಪರಿಚಯಿಸಿದೆ. ಈ ಯೋಜನೆಯನ್ನು ಯಾರ್ಯಾರು ಬಳಸಬೇಕು ಅಂಥ ನೋಡುವುದಾದರೆ ಯಾರಿಗೆ ಕಡಿಮೆ ಬೆಲೆಗೆ Netflix, ZEE5 Premium ಮತ್ತು JioHotstar Super ಜೊತೆಗೆ ಪೂರ್ತಿ ವ್ಯಾಲಿಡಿಟಿಗೆ ಕೇವಲ 1GB ಡೇಟಾವನ್ನು ಸಹ ನೀಡುತ್ತಿದೆ. ಹಾಗಾದ್ರೆ ಇಂದು ಬಿಡುಗಡೆಯಾದ ಡೇಟಾ ಪ್ಯಾಕ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಭಾರ್ತಿ ಏರ್ಟೆಲ್ ಪೂರ್ತಿ ಒಂದು ತಿಂಗಳ ಮಾನ್ಯತೆಗೆ 279 ರೂ.ಗಳ ಆಕರ್ಷಕ ಪರಿಚಯಾತ್ಮಕ ಬೆಲೆಯಿಂದ ಪ್ರಾರಂಭವಾಗುವ ಈ ಯೋಜನೆಯಲ್ಲಿ ಗ್ರಾಹಕರು 750 ರೂ. ಮೌಲ್ಯದ ವಿವಿಧ ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಲಭ್ಯವಿರುತ್ತದೆ. ಇದು ಒಟಿಟಿ ಸ್ಟ್ರೀಮಿಂಗ್ ಆಯ್ಕೆಗಳ ವ್ಯಾಪಕ ಗುಂಪಿಗೆ ಪ್ರವೇಶವನ್ನು ಸಕ್ರಿಯಗೊಳಿಸುವ ಏಕೈಕ ಟೆಲ್ಕೊ ಆಗಿದೆ ಎಂದು ಏರ್‌ಟೆಲ್ ಸೇರಿಸಲಾಗಿದೆ. ಆದ್ದರಿಂದ ಈ ಡೇಟಾ ಪ್ಯಾಕ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಮಾಹಿತಿ ವಿವರಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ Realme GT 7 Series ಬಿಡುಗಡೆಯಾಗಿದೆ! ಬೆಲೆ, ಫೀಚರ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ!
ಹೊಸದಾಗಿ ಪರಿಚಯಿಸಲಾದ ಪ್ಯಾಕ್‌ಗಳು ಒಂದು ತಿಂಗಳ ಮಾನ್ಯತೆಯೊಂದಿಗೆ ರೂ. 279 ರಿಂದ ಪ್ರಾರಂಭವಾಗಿದ್ದು ಬಳಕೆದಾರರಿಗೆ ನೆಟ್‌ಫ್ಲಿಕ್ಸ್ ಬೇಸಿಕ್ ಪೂರ್ತಿ 1 ತಿಂಗಳ ವ್ಯಾಲಿಡಿಟಿಯೊಂದಿಗೆ ಜಿಯೋಹಾಟ್‌ಸ್ಟಾರ್ ಸೂಪರ್ ಜೊತೆಗೆ ZEE5 ಪ್ರೀಮಿಯಂ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಸೇರಿದಂತೆ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಿಗೆ ಪ್ರವೇಶವನ್ನು ನೀಡುತ್ತದೆ. ಜೊತೆಗೆ ಸೋನಿಲಿವ್, ಲಯನ್ಸ್‌ಗೇಟ್ ಪ್ಲೇ ಮತ್ತು ಆಹಾ, ಸನ್‌ಎನ್‌ಎಕ್ಸ್‌ಟಿ, ಹೊಯ್ಚೊಯ್, ಇರೋಸ್‌ನೌ ಮತ್ತು ಶೆಮರೂಮಿಯಂತಹ ಹಲವಾರು ಪ್ರಾದೇಶಿಕ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.
ಏರ್‌ಟೆಲ್ ಪ್ರಿಪೇಯ್ಡ್ ಬಳಕೆದಾರರು 1 ತಿಂಗಳ ಮಾನ್ಯತೆಯೊಂದಿಗೆ 1GB ಡೇಟಾವನ್ನು ಆನಂದಿಸಬಹುದು. ಇದರಲ್ಲಿನ ಕೋಟಾ ಪೂರ್ಣಗೊಂಡ ನಂತರ ಡೇಟಾ ಸುಂಕವನ್ನು 50p/MB ಗೆ ವಿಧಿಸಲಾಗುತ್ತದೆ. ಇದೊಂದು ಕೇವಲ ಡೇಟಾ ಪ್ಯಾಕ್ ಆಗಿದ್ದು ಇದರಲ್ಲಿ ಯಾವುದೇ ಕರೆ ಅಥವಾ SMS ಸೌಲಭ್ಯ ಇರೋಲ್ಲ. ಅಲ್ಲದೆ ಬಳಕೆದಾರರು ನೇರವಾಗಿ ಅಥವಾ ಕೇವಲ ಈ ಒಂದೇ ಯೋಜನೆಯನ್ನು ರಿಚಾರ್ಜ್ ಮಾಡಿ ಪ್ರಯೋಜನಗಳನ್ನು ಬಳಸಲಾಗುವುದಿಲ್ಲ. ಇದಕ್ಕಾಗಿ ಮೂಲ ಯೋಜನೆಯೊಂದನ್ನು ಹೊಂದಿರುವುದು ಕಡ್ಡಾಯವಾಗಿದೆ ಎನ್ನುವುದನ್ನು ಗಮನಿಬೇಕಿದೆ.