ಏರ್ಟೆಲ್ ಬಳಕೆದಾರರಿಗೆ ಉಚಿತ Disney+ Hotstar ಹೊಂದಿರುವ 3 ಹೊಸ ರಿಚಾರ್ಜ್ ಯೋಜನೆ ಪರಿಚಯ | Digit Kannada
ಭಾರತದಲ್ಲಿ ಈಗಾಗಲೇ ಶುರುವಾಗಿರುವ ಜನಪ್ರಿಯ ಮತ್ತು ಅತಿ ಹೆಚ್ಚು ಜನರು ಕಾಯುತ್ತಿದ್ದ ಐಸಿಸಿ ಪುರುಷರ ಟಿ20 ವಿಶ್ವಕಪ್ (ICC Men’s T20 World Cup 2024) ಪಂದ್ಯಾವಳಿ ಈಗಾಗಲೇ ಶುರುವಾಗಿದೆ. ಇದರ ಪ್ರಯುಕ್ತ ಭಾರ್ತಿ ಏರ್‌ಟೆಲ್ (Airtel) ತಮ್ಮ ಬಳಕೆದಾರರಿಗೆ 3 ವಿಶೇಷವಾದ ರೂ. 499, ರೂ. 869 ಮತ್ತು ರೂ. 3359 ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಈ ಪಂದ್ಯಾವಳಿಗಳು ಈಗಷ್ಟೇ ಮುಗಿದ IPL T20 2024 ನಂತರ ತಕ್ಷಣವೇ ಪ್ರಾರಂಭವಾಗಿದ್ದು ಇದಕ್ಕೆ ತಕ್ಕಂತೆ ಪ್ರಸ್ತುತ ಕೇವಲ ಏರ್ಟೆಲ್ ಮಾತ್ರ ಅದ್ದೂರಿಯಾದ ಯೋಜನೆಗಳನ್ನು ಹೆಚ್ಚು ಪ್ರಯೋಜನಗಳನೊಂದಿಗೆ ನೀಡುತ್ತಿದ್ದು ಬಳಕೆದಾರರು ಕೇವಲ ಕ್ರಿಕೆಟ್ ಮಾತ್ರವಲ್ಲದೆ ಉಚಿತವಾಗಿ 3 ತಿಂಗಳ ಉಚಿತ Disney+ Hotstar ಸಹ ಪಡೆಯಬಹುದು.
Also Read: 16GB RAM ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ Vivo X Fold3 Pro ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಮೊದಲಿಗೆ ಈ ರೂ. 499 ಯೋಜನೆ ಮಾಸಿಕ ಅಂದ್ರೆ 28 ದಿನಗಳ ಮಾನ್ಯತೆಗಳೊಂದಿಗೆ ಲಭ್ಯವಿದ್ದು ಇದರಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ Disney+ Hot Star ಬಳಕೆದಾರರಿಗೆ 3 ತಿಂಗಳ ಮೊಬೈಲ್ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡುವ ಗ್ರಾಹಕರು ಡಿಸ್ನಿ+ ಹಾಟ್ ಸ್ಟಾರ್ (Disney+ Hotstar) ಜೊತೆಗೆ T20 World Cup 2024 ಪಂದ್ಯಗಳನ್ನು ಆನಂದಿಸಬಹುದು. ಇದರಲ್ಲಿ ದಿನಕ್ಕೆ 3GB ಡೇಟಾ ಮತ್ತು ಅನಿಯಮಿತ 5G ಡೇಟಾದ ಅನುಕೂಲವನ್ನು ಪಡೆಯಬಹುದು. ಮೂರು ತಿಂಗಳ ಅಪೊಲೊ 24|7, ಉಚಿತ ಹಲೋ ಟ್ಯೂನ್ಸ್, ಉಚಿತ ವಿಂಕ್ ಮ್ಯೂಸಿಕ್ ಮತ್ತು 20 OTT ಪ್ರವೇಶಗಳೊಂದಿಗೆ 28 ದಿನಗಳ ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ಲೇ ಪ್ರವೇಶದಂತಹ ಹೆಚ್ಚುವರಿ ಪ್ರಯೋಜನಗಳೊಂದಿಗೆ ಈ ಯೋಜನೆಯು ಬರುತ್ತದೆ.
ಎರಡನೇಯದಾಗಿ ಏರ್‌ಟೆಲ್ ರೂ. 869 ಯೋಜನೆ ಕೂಡ ಈ ವರ್ಗದ ಅಡಿಯಲ್ಲಿ ಬರುತ್ತದೆ. ಈ ಯೋಜನೆಯು 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಮಾನ್ಯತೆಯ ಅವಧಿಗೆ ಅನಿಯಮಿತ ಕರೆ, ದೈನಂದಿನ 2GB ಡೇಟಾ, ದೈನಂದಿನ 100SMS ಸೌಲಭ್ಯಗಳನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ಡಿಸ್ನಿ+ ಹಾಟ್ ಸ್ಟಾರ್ (Disney+ Hotstar) ಬಳಕೆದಾರರಿಗೆ 3 ತಿಂಗಳ ಮೊಬೈಲ್ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯು ಮೂರು ತಿಂಗಳ Apollo 24|7, ಉಚಿತ ಹಲೋ ಟ್ಯೂನ್ಸ್, ಉಚಿತ Wynk ಸಂಗೀತದಂತಹ ಹೆಚ್ಚುವರಿ ಪ್ರಯೋಜನಗಳೊಂದಿಗೆ ಬರುತ್ತದೆ.
ಕೊನೆಯದಾಗಿ ಇದರ ರೂ. 3,359 ಯೋಜನೆಯು ಸಹ ಇದೇ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ಬಳಕೆದಾರರು 365 ದಿನಗಳವರೆಗೆ ಅನಿಯಮಿತ ಕರೆ, ದಿನಕ್ಕೆ 2.5GB 4G ಡೇಟಾ ಅಥವಾ ಅನಿಯಮಿತ 5G ಡೇಟಾ ಮತ್ತು ದೈನಂದಿನ 100SMS ಪ್ರಯೋಜನಗಳನ್ನು ಪಡೆಯುತ್ತಾರೆ. ಇದಲ್ಲದೆ ಬಳಕೆದಾರರು ರೂ 499 ಮೌಲ್ಯದ ಉಚಿತ ಡಿಸ್ನಿ+ ಹಾಟ್ ಸ್ಟಾರ್ (Disney+ Hotstar) ಮೊಬೈಲ್ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ. ಈ ಯೋಜನೆಯು ಮೂರು ತಿಂಗಳ ಅಪೊಲೊ 24|7, ಉಚಿತ ಹಲೋ ಟ್ಯೂನ್ಸ್, ಉಚಿತ ವಿಂಕ್ ಸಂಗೀತದಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ.