Airtel offers free Rs 17,000 Perplexity Pro subscription to users; here's how the stock moved
Airtel 299 Recharge Plan: ಭಾರ್ತಿ ಏರ್ಟೆಲ್ ತಮ್ಮ ಗ್ರಾಹಕರಿಗೆ ಕೈಗೆಟಕುವ ಬೆಲೆಗೆ ಸಿಕ್ಕಾಪಟ್ಟೆ ಪ್ರಯೋಜನಗಳನ್ನು ನೀಡುವುದನ್ನು ನೀವು ಕಾಣಬಹುದು. ಪ್ರಸ್ತುತ ಜಿಯೋವಿನೊಂದಿಗೆ ಪೈಪೋಟಿಗೆ ಇಳಿದಿರುವ ಏರ್ಟೆಲ್ ತಮ್ಮ ಗ್ರಾಹಕರಿಗೆ ರಿಚಾರ್ಜ್ ಯೋಜನೆಯಲ್ಲಿ ಕೇವಲ ಡೇಟಾ, ಕರೆ ಮತ್ತು ಮೆಸೇಜ್ ಮಾತ್ರವಲ್ಲದೆ ಈಗ 1 ವರ್ಷಕ್ಕೆ ಉಚಿತ Perplexity Pro AI ಟೂಲ್ ಅನ್ನು ಸಹ ನೀಡುತ್ತಿದೆ. ಅಂದ್ರೆ ಇದಕ್ಕೆ ಯಾವುದೇ ಮಿತಿಗಳಿಲ್ಲದೆ ಏರ್ಟೆಲ್ ತನ್ನ ಸಮಸ್ತ ಎಲ್ಲ ಗ್ರಾಹಕರಿಗೆ ಈ ಪ್ರಾಯೋಜನಗಳನ್ನು ನೀಡಲು ಆರಂಭಿಸಿದೆ.
ನೀವು ಏರ್ಟೆಲ್ ಬಳಕೆದಾರರಾಗಿದ್ದರೆ ಇದನ್ನು ನೀವು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಉಚಿತವಾಗಿ ಪಡೆಯಬಹುದು. ಏರ್ಟೆಲ್ 299 ರೂಗಳ ರಿಚಾರ್ಜ್ ಯೋಜನೆಯಲ್ಲಿ 5G ಡೇಟಾ, ಅನ್ಲಿಮಿಟೆಡ್ ಕರೆ ಮತ್ತು ಮೆಸೇಜ್ 30 ದಿನಗಳಿಗೆ ನೀಡುತ್ತಿದೆ. ಭಾರ್ತಿ ಏರ್ಟೆಲ್ ಈಗ 1 ವರ್ಷಕ್ಕೆ ಉಚಿತ Perplexity Pro AI ಟೂಲ್ ಅನ್ನು ತನ್ನ ಸಮಸ್ತ ಎಲ್ಲ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ.
ಇದನ್ನೂ ಓದಿ: 32MP 4K Selfie ಕ್ಯಾಮೆರಾದೊಂದಿಗೆ iQOO Z10R ಬಿಡುಗಡೆ! ಆಫರ್ ಬೆಲೆ ಮತ್ತು ಟಾಪ್ 5 ಫೀಚರ್ಗಳೇನು?
ಏರ್ಟೆಲ್ ₹299 ಪ್ರಿಪೇಯ್ಡ್ ಯೋಜನೆಯು ದೇಶಾದ್ಯಂತ ನಿಜವಾಗಿಯೂ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತದೆ. ಚಂದಾದಾರರು ದಿನಕ್ಕೆ 1GB ಹೈ-ಸ್ಪೀಡ್ ಡೇಟಾ ಮತ್ತು ಪ್ರತಿದಿನ 100 ಎಸ್‌ಎಂಎಸ್‌ಗಳನ್ನು ಸಹ ಪಡೆಯುತ್ತಾರೆ. 28 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಈ ಯೋಜನೆಯು ಒಂದು ತಿಂಗಳವರೆಗೆ ನಿರಂತರ ಸಂವಹನ ಮತ್ತು ಇಂಟರ್ನೆಟ್ ಪ್ರವೇಶವನ್ನು ಖಚಿತಪಡಿಸುತ್ತದೆ. ಹೆಚ್ಚುವರಿ ಪ್ರಯೋಜನಗಳಲ್ಲಿ ಸಾಮಾನ್ಯವಾಗಿ ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಚಂದಾದಾರಿಕೆ ಸೇರಿವೆ.
ಮಹತ್ವದ ಹೆಜ್ಜೆಯಾಗಿ ಏರ್‌ಟೆಲ್ ಪರ್ಪ್ಲೆಕ್ಸಿಟಿ AI ಜೊತೆ ಪಾಲುದಾರಿಕೆ ಮಾಡಿಕೊಂಡು ತನ್ನ ಸಂಪೂರ್ಣ ಗ್ರಾಹಕರಿಗೆ ವಾರ್ಷಿಕವಾಗಿ ₹17,000 ಮೌಲ್ಯದ ಪರ್ಪ್ಲೆಕ್ಸಿಟಿ ಪ್ರೊಗೆ 12 ತಿಂಗಳ ಉಚಿತ ಚಂದಾದಾರಿಕೆಯನ್ನು ನೀಡಿದೆ. ಇದರಲ್ಲಿ ಮೊಬೈಲ್, ಬ್ರಾಡ್‌ಬ್ಯಾಂಡ್ ಮತ್ತು DTH ಬಳಕೆದಾರರು ಸೇರಿದ್ದಾರೆ.
ಈ Perplexity Pro AI ಮತ್ತು ಕ್ಲೌಡ್‌ನಂತಹ ಸುಧಾರಿತ AI ಮಾದರಿಗಳು, ಆಳವಾದ ಸಂಶೋಧನಾ ಪರಿಕರಗಳು, ಇಮೇಜ್ ಉತ್ಪಾದನೆ ಮತ್ತು ಹೆಚ್ಚಿದ ದೈನಂದಿನ ಹುಡುಕಾಟ ಮಿತಿಗಳನ್ನು ನೀಡುತ್ತದೆ. ಬಳಕೆದಾರರು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ಗೆ ಲಾಗಿನ್ ಆಗುವ ಮೂಲಕ ಇದನ್ನು ಕ್ಲೈಮ್ ಮಾಡಬಹುದು.