News About Jio vs Airtel: ಭಾರತದಲ್ಲಿ ಜಿಯೋ ಮತ್ತು ಏರ್ಟೆಲ್ ಹೊಂದಿರುವ ಕೇವಲ ವಾಯ್ಸ್ ಮತ್ತು SMS ಹೊಸ ವಾರ್ಷಿಕ ಯೋಜನೆಯಲ್ಲಿ ಯಾವ ಪ್ಲಾನ್ ನಿಮಗೆ ಉತ್ತಮ ಎನ್ನುವುದನ್ನು ಈ ಕೆಳಗೆ ಪರಿಶೀಲಿಸಬಹುದು. ಏನಪ್ಪಾ ಈ ಹೊಸ ಪ್ಲಾನ್ ಎನ್ನೋರಿಗೆ ಈ ಹೊಸ ಯೋಜನೆ ಡೇಟಾ ಸೇವೆಗಳ ಅಗತ್ಯವಿಲ್ಲದ ಬಳಕೆದಾರರಿಗೆ ಕೈಗೆಟುಕುವ ಆಯ್ಕೆಗಳನ್ನು ಒದಗಿಸುವ ಕರೆ ಮತ್ತು SMS ಮಾತ್ರ ರೀಚಾರ್ಜ್ ಯೋಜನೆಗಳನ್ನು Airtel, Jio ಮತ್ತು Vi ಪ್ರಾರಂಭಿಸಿವೆ. ಹಾಗಾದ್ರೆ Jio vs Airtel: ಜಿಯೋ ಮತ್ತು ಏರ್‌ಟೆಲ್‌ನ ಹೊಸ Voice ಮತ್ತು SMS ನೀಡುವ ಈ ಯೋಜನೆಯಲ್ಲಿ ಯಾವುದು ಬೆಸ್ಟ್?
ರಿಲಯನ್ಸ್ ಜಿಯೋ ಈ ಯೋಜನೆಯನ್ನು ತನ್ನ ಮೌಲ್ಯ (Value) ಕೊಡುಗೆಗಳ ಅಡಿಯಲ್ಲಿ ವರ್ಗೀಕರಿಸುತ್ತದೆ. ಈ ಯೋಜನೆ ಈಗ ದಿನಕ್ಕೆ ಸುಮಾರು ₹5 ರೂಗಳ ಪರಿಣಾಮಕಾರಿ ಬೆಲೆಯಲ್ಲಿ ಲಭ್ಯವಿದೆ. ರಿಲಯನ್ಸ್ ಜಿಯೋದ ₹1748 ಯೋಜನೆಯು ಈಗ ಅನ್ಲಿಮಿಟೆಡ್ ವಾಯ್ಸ್ ಕರೆ ಮತ್ತು 3600 SMS ಗಳನ್ನು 336 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಯೋಜನೆಯು ಮೊದಲು ₹1958 ಯೋಜನೆಯಾಗಿದ್ದು ಪ್ರಸ್ತುತ 210 ರೂಗಳ ಬೆಲೆ ಕಡಿತಗೊಳಿಸುವುದರೊಂದಿಗೆ 365 ದಿನಗಳಿಂದ 336 ದಿನಗಳ ಮಾನ್ಯತೆಯನ್ನು ಕಡಿಮೆ ಮಾಡಿ ನೀಡುತ್ತಿದೆ.
ಏರ್‌ಟೆಲ್‌ನ ಹೊಸ ರೀಚಾರ್ಜ್ ಯೋಜನೆಗಳು ರೂ 1,849 ವಾರ್ಷಿಕ ಪ್ಯಾಕ್ ಅನ್ನು ಅನಿಯಮಿತ ಧ್ವನಿ ಕರೆಗಳನ್ನು ಮತ್ತು 365 ದಿನಗಳವರೆಗೆ 3,600 ಎಸ್‌ಎಂಎಸ್‌ಗಳನ್ನು ನೀಡುತ್ತದೆ. ಪರಿಣಾಮಕಾರಿ ದೈನಂದಿನ ವೆಚ್ಚ ರೂ 5.06. ಆಗಿದೆ. ಮತ್ತೊಂದು ಕಡಿಮೆ ಅವಧಿಗೆ ಏರ್‌ಟೆಲ್ ರೂ 469 ಪ್ಲಾನ್ ಅನ್ನು ಹೊಂದಿದ್ದು ಅದು 84 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಕರೆಗಳು ಮತ್ತು 900 ಎಸ್‌ಎಂಎಸ್‌ಗಳನ್ನು ಒದಗಿಸುತ್ತದೆ. ದಿನಕ್ಕೆ ರೂ 5.58 ವೆಚ್ಚವಾಗುತ್ತದೆ.
ಕೊನೆಯದಾಗಿ ಈ ಎರಡು ಯೋಜನೆಯಲ್ಲಿ ಯಾವುದು ಬೆಸ್ಟ್ ಎಂದು ನೋಡುವುದಾದರೆ ಮೊದಲಿಗೆ ನಿಮಗೆ ಸುಮಾರು 3 ತಿಂಗಳಿಗೆ ಅಂದ್ರೆ ಸುಮಾರು 84 ದಿನಗಳಿಗೆ ರಿಚಾರ್ಜ್ ಪ್ಲಾನ್ ಬೇಕಿದ್ದರೆ ಜಿಯೋವನ್ನು ಆರಿಸಬಹುದು ಇದರ ಬೆಲೆ 448 ರೂಗಳಾಗಿವೆ ಆದರೆ ಇದೆ ವ್ಯಾಲಿಡಿಟಿಗೆ ಏರ್ಟೆಲ್ 469 ರೂಗಳನ್ನು ಕೇಳುತ್ತಿದೆ ಅಂದ್ರೆ ಸುಮಾರು 21 ರೂಗಳು ಜಾಸ್ತಿಯಾಗಿದೆ. ಮತ್ತೊಂಡೆಯಲ್ಲಿ ವಾರ್ಷಿಕ ಯೋಜನೆಗಳನ್ನು ನೋಡುವುದಾದರೆ ಏರ್ಟೆಲ್ ಬೆಸ್ಟ್ ಯಾಕೆಂದರೆ 365 ದಿನಗಳಿಗೆ 1849 ರೂಗಳನ್ನು ಚಾರ್ಜ್ ಮಾಡುತ್ತದೆ. ಆದರೆ ಜಿಯೋ ವ್ಯಾಲಿಡಿಟಿ ಕಡಿಮೆಗೊಳಿಸಿದ್ದು ಅಂದ್ರೆ 336 ದಿನಗಳಿಗೆ 1749 ರೂಗಳನ್ನು ಚಾರ್ಜ್ ಮಾಡುತ್ತಿದೆ. ಅಂದ್ರೆ 100 ರೂಗಳನ್ನು ಕಡಿಮೆಗೊಳಿಸಿ 29 ದಿನಗಳನ್ನು ಕಡಿಮೆ ಮಾಡಿದೆ.