Amazon Great Freedom Sale: ಆಫರ್‌ನಲ್ಲಿ ಶಿಯೋಮಿ 17T ಮೊಬೈಲ್‌ ಖರೀದಿಗೆ ಇದುವೇ ಸಕಾಲ

HIGHLIGHTS

ಅಮೆಜಾನ್‌ ಸೇಲ್‌ನಲ್ಲಿ‌ ಶಿಯೋಮಿ 17T ಫೋನಿಗೆ ಬಿಗ್ ಆಫರ್‌

ಶಿಯೋಮಿ 17T ಸ್ಮಾರ್ಟ್‌ಫೋನ್‌ 6,500mAh ಬ್ಯಾಟರಿ ಪಡೆದುಕೊಂಡಿದೆ

ಶಿಯೋಮಿಯ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಅಲ್ಟ್ರಾ ಪ್ರೊಸೆಸರ್‌ ಹೊಂದಿದೆ

ಅಮೆಜಾನ್‌ ತಾಣವು ಆಯೋಜಿಸಿರುವ Amazon Great Freedom Sale 2026 ಮಾರಾಟದಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳು ಭಾರೀ ಆಕರ್ಷಕ ರಿಯಾಯಿತಿ ಪಡೆದಿವೆ. ಅವುಗಳ ಪೈಕಿ ಪ್ರೀಮಿಯಂ ಲುಕ್‌ನ Xiaomi 17T ಸ್ಮಾರ್ಟ್‌ಫೋನ್‌ ಸಹ ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಇದಷ್ಟೇ ಅಲ್ಲದೆ ಕೆಲವು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಇನ್‌ಸ್ಟಂಟ್‌ ರಿಯಾಯಿತಿ, ಎಕ್ಸ್‌ಚೇಂಜ್ ಕೊಡುಗೆ, ನೋ-ಕಾಸ್ಟ್ EMI ಹಾಗೂ ಕ್ಯಾಶ್‌ಬ್ಯಾಕ್‌ ಸೌಲಭ್ಯಗಳನ್ನೂ ಗ್ರಾಹಕರು ಪಡೆಯಬಹುದು. ಹೊಸ ಸ್ಮಾರ್ಟ್‌ಫೋನ್‌ ಅಥವಾ ಇತರ ಅಗತ್ಯ ಗ್ಯಾಡ್ಜೆಟ್ಸ್‌ ಅನ್ನು ಕಡಿಮೆ ಬೆಲೆಗೆ ಖರೀದಿಸಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ. ಹಾಗಾದರೆ ಅಮೆಜಾನ್‌ ಗ್ರೇಟ್ ಫ್ರೀಡಂ ಸೇಲ್‌ 2026 ನಲ್ಲಿ ಶಿಯೋಮಿ 17T ಫೋನಿಗೆ ಲಭ್ಯ ಇರುವ ಆಫರ್‌ ಹಾಗೂ ಫೋನಿನ ಫೀಚರ್ಸ್‌ ಮುಂದೆ ತಿಳಿಯೋಣ.

Also Read : ಶುರುವಾಯ್ತು Amazon Great Freedom Sale 2026 ಸೇಲ್‌; ಬೆಸ್ಟ್ ಸ್ಮಾರ್ಟ್‌ಫೋನ್ ಡೀಲ್‌ಗಳು ಇಲ್ಲಿವೆ

Amazon Great Freedom Sale: ಶಿಯೋಮಿ 17T ಆಫರ್‌

ಪ್ರೀಮಿಯಂ ಫೀಚರ್ಸ್‌ಗಳ ಮೂಲಕ ಮೊಬೈಲ್‌ ಪ್ರಿಯರ ಗಮನ ಸೆಳೆದಿರುವ ಶಿಯೋಮಿ 17T ಸ್ಮಾರ್ಟ್‌ಫೋನ್‌ ಸದ್ಯ ಅಮೆಜಾನ್‌ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ ಗಮನಾರ್ಹ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ 12GB RAM + 256GB ಸ್ಟೋರೇಜ್ ವೇರಿಯಂಟ್‌ ಬೆಲೆ 84,990 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್‌ 68,420 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್‌ ಬ್ಲ್ಯಾಕ್‌, ಬ್ಲೂ ಹಾಗೂ ವೈಲೇಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಲಭ್ಯವಿದೆ. ಈ ಫೋನ್‌ ಅನ್ನು ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Xiaomi 17T Gets a Massive Discount in Amazon Great Freedom Sale

ಶಿಯೋಮಿ 17T ಫೋನ್‌ ಫೀಚರ್ಸ್‌ ಹೀಗಿವೆ

ಶಿಯೋಮಿ 17T ಮೊಬೈಲ್‌ 6.59 ಇಂಚಿನ 1.5K AMOLED ಡಿಸ್‌ಪ್ಲೇ ಹೊಂದಿದ್ದು ಇದರ ಜೊತೆಗೆ ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 12GB RAM + 256GB ಹಾಗೂ 12GB + 512GB ಸ್ಟೋರೇಜ್‌ ವೇರಿಯಂಟ್ ಆಯ್ಕೆ ಪಡೆದಿದೆ. ಅಲ್ಲದೇ ಥರ್ಮಲ್ ನಿರ್ವಹಣೆಗಾಗಿ ಫೋನ್ ಕಂಪನಿಯ 3D ಐಸ್‌ಲೂಪ್ ಕೂಲಿಂಗ್ ವ್ಯವಸ್ಥೆಯ ಸೌಲಭ್ಯ ಪಡೆದುಕೊಂಡಿದೆ.

ಶಿಯೋಮಿ 17T ಮೊಬೈಲ್‌ ಲೀಕಾ ಟ್ಯೂನ್ಡ್ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು OIS ನೊಂದಿಗೆ 50MP ಲೈಟ್ ಫ್ಯೂಷನ್ 800 ಸೆನ್ಸಾರ್‌ ಆಗಿದೆ. ಸೆಕೆಂಡರಿ ಕ್ಯಾಮೆರಾವು 50MP ಸೆನ್ಸಾರ್‌ ಹಾಗೂ ತೃತೀಯ ಕ್ಯಾಮೆರಾ 12MP ಸೆನ್ಸರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 67W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದುಕೊಂಡಿದೆ.

Disclosure: This Article Contains Affiliate Links

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :